EPFO Latest News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021 ಮಾರ್ಚ್ 4 ರಂದು 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್ ಮೇಲಿನ ಬಡ್ಡಿದರಗಳನ್ನು (EPF Interest Rates) ಘೋಷಿಸುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಮಾರ್ಚ್ 4 ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಬಾರಿ ಬಡ್ಡಿದರಗಳನ್ನು ಶೇಕಡಾ 8.5 ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ, ಸಂಸ್ಥೆ ಬಡ್ಡಿದರವನ್ನು 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ, ಶೇ.8.5 ಕ್ಕೆ ಇಳಿಕೆ ಮಾಡಿತ್ತು.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಲವು ಕಾರ್ಮಿಕರು ತಮ್ಮ ತಮ್ಮ ಕಂಪನಿಗಳಿಗೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಒಂದು ವೇಳೆ ನಿಮಗೆ ಭವಿಷ್ಯನಿಧಿ ಸಂಘಟನೆ(EPFO) ವೆಬ್ ಸೈಟ್ ನಿಂದ ಯಾವುದಾದರೊಂದು ಸಂದೇಶ ಅಥವಾ ಮಾಹಿತಿ ಕೇಳಲಾಗಿದ್ದರೆ ಅಂತಹ ಮೇಲ್ ಅಥವಾ ಸಂದೇಶಕ್ಕೆ ಉತ್ತರ ನೀಡುವುದು ಅಗತ್ಯವಿಲ್ಲ. ಇಂತಹ ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ ವಂಚನೆ ಎಸಗುವ ಪ್ರಯತ್ನ ನಡೆಸಲಾಗುತ್ತಿದೆ. ತನ್ನ ವೆಬ್ಸೈಟ್ ಮೂಲಕ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡದಿರುವ ಸಂಘಟನೆ ಇಂತಹ ವಂಚನೆಗಳಿಂದ ಜಾಗ್ರತರಾಗಿ ಎಂದು ಸೂಚಿಸಿದೆ.
ದಿನದಲ್ಲಿ ಸಾವಿರಾರು ನೌಕರರು ಆನ್ಲೈನ್ ನಲ್ಲಿ ತಮ್ಮ ಠೇವಣಿಯನ್ನು ಕ್ಲೇಮ್ ಮಾಡುತ್ತಿರುವುದನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಆನ್ಲೈನ್ ನಲ್ಲಿ ತಮ್ಮ ಭವಿಷ್ಯ ನಿಧಿ ಠೇವಣಿ ಹಿಂಪಡೆಯಲು ಬಯಸುವವರಿಗೆ ಟೈಮ್ ಫ್ರೇಮ್ ಸಿದ್ಧಪಡಿಸಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.