Google play storeನಲ್ಲಿ FAU-G, ನಾಲ್ಕೇ ದಿನಗಳಲ್ಲಿ ದಾಖಲೆ ಬರೆದ ಮೊಬೈಲ್ ಗೇಮ್

ಸ್ಥಳೀಯ ಸ್ಮಾರ್ಟ್‌ಫೋನ್ ಗೇಮ್ FAU- G (Fearless And United-Guards) ನಾಲ್ಕು ದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದೆ. 

ನವದೆಹಲಿ: ಸ್ಥಳೀಯ ಸ್ಮಾರ್ಟ್‌ಫೋನ್ ಗೇಮ್ FAU- G (Fearless And United-Guards) ನಾಲ್ಕು ದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ FAU- G ಗೇಮನ್ನು ಈಗ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಜನವರಿ 26 ರಂದು ಪ್ರಾರಂಭವಾದ ಈ ಗೇಮ್ ಈಗ ಉಚಿತ ಮೊಬೈಲ್ ಗೇಮ್ಗಳಲ್ಲಿ ಒಂದಾಗಿ  ಮಾರ್ಪಟ್ಟಿದೆ. ಈ ಆಟವನ್ನು ಈವರೆಗೆ 50 ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ. ಈ ಬಗ್ಗೆ FAU- G ಗೇಮ್ ಡೆವಲಪರ್ ಕಂಪನಿಯಾದ nCore Games  ಟ್ವಿಟರ್‌ನಲ್ಲಿ ಪ್ರಕಟಿಸಿದೆ.

1 /5

FAU- G ಮೊಬೈಲ್ ಗೇಮ್ ಅನ್ನು ಇಲ್ಲಿವರೆಗೆ 50 ಲಕ್ಷ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಬಗ್ಗೆ FAU- G ಗೇಮ್ ಡೆವಲಪರ್ ಕಂಪನಿಯಾದ nCore Games ಟ್ವಿಟರ್ ನಲ್ಲಿ ಪ್ರಕಟಿಸಿದೆ.  

2 /5

ಭಾರತದಲ್ಲಿ PUB-G ಮೊಬೈಲ್ ಗೇಮಿಗೆ ನಿಷೆಧ ಹೇರಿದ ಹಿನ್ನೆಲೆಯಲ್ಲಿ FAU- G ಮೊಬೈಲ್ ಗೇಮನ್ನುಘೋಷಿಸಲಾಗಿತ್ತು.

3 /5

FAU- G 460 ಎಂಬಿಯದ್ದಾಗಿದೆ. ಭಾರತದ ಮೂರು ಭಾಷೆಗಳಲ್ಲಿ ಇದನ್ನು ಲಾಂಚ್ ಮಾಡಲಾಗಿದೆ. ಸದ್ಯಕ್ಕೆ ಹಿಂದಿ, ಇಂಗ್ಲೀಷ್ ಮತ್ತು ತಮಿಳು ಭಾಷೆಯಲ್ಲಿ FAU- Gಯನ್ನು ಲಾಂಚ್ ಮಾಡಲಾಗಿದೆ.

4 /5

ಶೀಘ್ರದಲ್ಲೇ ಭಾರತದ ಇತರ ಭಾಷೆಗಳಲ್ಲೂ ಗೇಮನ್ನು ಲಾಂಚ್ ಮಾಡುವುದಾಗಿ ಗೇಮ್  ಡೆವಲಪರ್ ಕಂಪನಿ ಹೇಳಿದೆ. 

5 /5

ಗೂಗಲ್ ಪ್ಲೇ ಸ್ಟೋರ್ ನಿಂದ FAU- G ಗೇಮನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಇದು ಆಂಡ್ರಾಯ್ಡ್ ಬಳಕೆದಾರರು ಮಾತ್ರ ಆಡಬಹುದಾಗಿದೆ. ಇದನ್ನು ಸ್ಮಾರ್ಟ್ ಫೋನ್ ಮತ್ತು ಟೇಬಲ್ ಟಾಪ್ ಗಳಲ್ಲಿ ಆಡಬಹುದಾಗಿದೆ. ಈ ವರ್ಷದ ಅಂತ್ಯದ ವೇಳೆಗೆ apple iPhone ಬಳಕೆದಾರರು ಕೂಡಾ ಈ ಗೇಮನ್ನು ಎಂಜಾಯ್ ಮಾಡಬಹುದು.