Food And Blood Group:ಈ ರಕ್ತ ಗುಂಪಿನ ಜನರು ಚಿಕನ್-ಮಟನ್ ನಿಂದ ದೂರವಿರಿ! ಕಾರಣ ಇಲ್ಲಿದೆ

Food And Blood Group - ಸಾಮಾನ್ಯವಾಗಿ ಪೌಷ್ಟಿಕ ಮತ್ತು ದುಬಾರಿ ಆಹಾರವನ್ನು ಸೇವಿಸಿದರೂ ಕೂಡ  ಕೆಲವರ ಆರೋಗ್ಯವು ಉತ್ತಮವಾಗಿರುವುದಿಲ್ಲ. 

ನವದೆಹಲಿ: Food And Blood Group - ಸಾಮಾನ್ಯವಾಗಿ ಪೌಷ್ಟಿಕ ಮತ್ತು ದುಬಾರಿ ಆಹಾರವನ್ನು ಸೇವಿಸಿದರೂ ಕೂಡ  ಕೆಲವರ ಆರೋಗ್ಯವು ಉತ್ತಮವಾಗಿರುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ, ಆದರೆ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ರಕ್ತದ ಗುಂಪಿನ ಪ್ರಕಾರ ಆಹಾರವನ್ನು (Food Habits) ತೆಗೆದುಕೊಂಡರೆ, ಅವನ ಆರೋಗ್ಯದ ಮೇಲೆ ಅದರ ಸಕಾರಾತ್ಮಕ ಪರಿಣಾಮ ಖಂಡಿತವಾಗಿಯೂ ಕಂಡುಬರುತ್ತದೆ. ರಕ್ತ ಗುಂಪಿನ ಆಧಾರದ ಮೇಲೆ ತೆಗೆದುಕೊಂಡ ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ.

 

ಇದನ್ನೂ ಓದಿ- Milk Options For Diabetes: ಡಯಾಬಿಟಿಸ್ ರೋಗಿಗಳು ಈ ರೀತಿಯ ಹಾಲನ್ನು ಸೇವಿಸಿದರೆ ನಿಯಂತ್ರಣದಲ್ಲಿರಲಿದೆ ಶುಗರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. Diet Has Direct Connection With Blood Type - ಒಟ್ಟು ನಾಲ್ಕು ವಿಧದ ರಕ್ತದ  ಗುಂಪುಗಳಿವೆ. ಅವುಗಳೆಂದರೆ ಒ, ಎ, ಬಿ ಮತ್ತು ಎಬಿ. ನಾವು ಸೇವಿಸುವ ಆಹಾರ ಮತ್ತು ಪಾನೀಯ ರಕ್ತದ ಗುಂಪಿನೊಂದಿಗೆ ನೇರ ಸಂಪರ್ಕ ಹೊಂದಿದೆ ಎನ್ನಲಾಗಿದೆ. ವೆಬ್‌ಎಂಡಿಯ ಒಂದು ವರದಿಯ ಪ್ರಕಾರ, ನಮ್ಮ ಆಹಾರ ಪದ್ಧತಿ ನಮ್ಮ ರಕ್ತ ಗುಂಪಿಗೆ ಜೊತೆಗೆ ನೇರವಾಗಿ ಸಂಬಂಧಿಸಿದೆ. ಹಾಗಾದರೆ ಬನ್ನಿ ಯಾವ ರಕ್ತ ಗುಂಪಿನ ಜನರು ಚಿಕನ್ (Chicken)ಹಾಗೂ  ಮಟನ್ (Mutton) ನಿಂದ ಸ್ವಲ್ಪ ದೂರವಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

2 /5

2. 'O' ಬ್ಲಡ್ ಗುಂಪಿನ ಜನರಿಗೆ ಪ್ರೋಟೀನ್ ಬೆಸ್ಟ್ - 'O' ರಕ್ತ ಗುಂಪಿನ ಜನರು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಬೇಕು. ದ್ವಿದಳ ಧಾನ್ಯಗಳು, ಮಾಂಸ, ಮೀನು, ಹಣ್ಣು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಧಾನ್ಯ ಮತ್ತು ಬೀನ್ಸ್ ಜೊತೆಗೆ, ನಿಮ್ಮ ಆಹಾರದಲ್ಲಿ ಹಣ್ಣುಗಳ ಪ್ರಮಾಣದ ಸಮತೋಲನ ಕಾಪಾಡಿ.

3 /5

3. 'A' ರಕ್ತದ ಗುಂಪಿನವರು ಮಾಂಸ ಸೇವನೆಯಿಂದ ದೂರ ಉಳಿಯಬೇಕು - 'A' ರಕ್ತದ ಗುಂಪಿನವರ ಇಮ್ಯೂನ್ ಸಿಸ್ಟಂ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಇವರು ತಮ್ಮ ಆಹಾರ ಪದ್ಧತಿಯ ಕುರಿತು ವಿಶೇಷ ಗಮನ ಹರಿಸಬೇಕು. ಈ ಜನರು ಮಾಂಸ ಸೇವನೆಯಿಂದ ದೂರ ಉಳಿಯಬೇಕು. ಏಕೆಂದರೆ, ಮಾಂಸ ಜೀರ್ಣಿಸಲು ಸಮಯ ಬೇಕಾಗುತ್ತದೆ. 'A' ಗುಂಪಿನ ಜನರು ಚಿಕನ್-ಮಟನ್ ಕಡಿಮೆ ಸೇವಿಸಿ. ಗಜ್ಜರಿ, ಹಸಿರು ತರಕಾರಿ, ಧಾನ್ಯ, ಬೆಳ್ಳುಳ್ಳಿ, ಬೀನ್ಸ್ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಈ ಬ್ಲಡ್ ಗ್ರೂಪ್ ಜನರಿಗೆ ಉತ್ತಮ.

4 /5

4. 'B' ಬ್ಲಡ್ ಗ್ರೂಪ್ ಜನರ ಬಲ್ಲೇ ಬಲ್ಲೇ - ಒಂದು ವೇಳೆ ನಿಮ್ಮ ಬ್ಲಡ್ 'B' ಆಗಿದ್ದರೆ, ನೀವು ಸೇಫ್ ಜೋನ್ ನಲ್ಲಿರುವಿರಿ ಎಂದರ್ಥ. ಈ ರಕ್ತ ಗುಂಪಿನ ಜನರು ಹೆಚ್ಚು ಹಿಂಜರಿಯಬೇಕಾಗಿಲ್ಲ. ನೀವು ಹಸಿರು ತರಕಾರಿ ಹಣ್ಣು, ಮೀನು, ಮಟನ್ ಮತ್ತು ಚಿಕನ್ ಎಲ್ಲವನ್ನೂ ತಿನ್ನಬಹುದು. ಬಿ ರಕ್ತ ಗುಂಪಿನ ಜನರು ಸಾಕಷ್ಟು ಹಾಲು ಮತ್ತು ಅದರಿಂದ ತಯಾರಿಸಿದ ವಸ್ತುಗಳು, ಮೊಟ್ಟೆ ಇತ್ಯಾದಿಗಳನ್ನು ಕೂಡ ಸೇವಿಸಬಹುದು.

5 /5

5. 'AB' ಬ್ಲಡ್ ಗ್ರೂಪ್ ಜನರು ಸ್ವಲ್ಪ ಎಚ್ಚರಿಕೆಯಿಂದಿರಿ - ಎಬಿ ರಕ್ತದ ಗುಂಪನ್ನು ಅಪರೂಪ ಗುಂಪು ಎಂದು ಪರಿಗಣಿಸಲಾಗುತ್ತದೆ. ಇದು ಕೆಲವೇ ಜನರಲ್ಲಿ ಕಂಡುಬರುತ್ತದೆ. ಈ ರಕ್ತ ಗುಂಪಿನ ಜನರು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಇವರು ನಾನ್-ವೆಜ್ ಕಡಿಮೆ ಸೇವಿಸಬೇಕು. ಹಾಲು ಉತ್ಪನ್ನಗಳು, ಬೆಣ್ಣೆ ಇತ್ಯಾದಿಗಳನ್ನು ಸಹ ಇವರು ಸೇವಿಸಬಹುದು.