ಪೋಸ್ಟ್ ಆಫೀಸ್ ನಲ್ಲಿ ಈ ಖಾತೆಗಳಿದ್ದರೆ ಸುಲಭದಲ್ಲಿ ಸಿಗಲಿದೆ ಲೋನ್

ನಿಮ್ಮ ಹಣಕಾಸಿನ ವ್ಯವಸ್ಥೆ ಹೇಗಿರಬೇಕೆಂದರೆ ತುರ್ತು ಸ್ಥಿತಿ ಎದುರಾದಾಗಲೂ ಹಣದ ಅಭಾವ ಸಮಸ್ಯೆಯಾಗಿ ಕಾಡಬಾರದು. ಇದರಲ್ಲಿ, ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳು ಒಂದು ಆಯ್ಕೆಯಾಗಿದೆ.

PPF hidden Benefits: ಕರೋನಾ ಸಾಂಕ್ರಾಮಿಕ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದೆ. ಕಷ್ಟದ ಸಂದರ್ಭಗಳಿಗೆ ಸದಾ ಸಿದ್ದರಾಗಿರುವ ಪಾಠವನ್ನು ಕಲಿಸಿದೆ.  ನಿಮ್ಮ ಹಣಕಾಸಿನ ವ್ಯವಸ್ಥೆ ಹೇಗಿರಬೇಕೆಂದರೆ ತುರ್ತು ಸ್ಥಿತಿ ಎದುರಾದಾಗಲೂ ಹಣದ ಅಭಾವ ಸಮಸ್ಯೆಯಾಗಿ ಕಾಡಬಾರದು. ಇದರಲ್ಲಿ, ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳು ಒಂದು ಆಯ್ಕೆಯಾಗಿದೆ. ಇದನ್ನು ನಮ್ಮ ಫೈನಾನ್ಸಿಯಲ್ ಪೋರ್ಟ್ಫೋಲಿಯೊದಲ್ಲಿ ಇರಿಸಿಕೊಳ್ಳಬಹುದು. ಅಂಚೆ ಕಚೇರಿಯ ಯೋಜನೆಯಾದ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ  ಈ ರೀತಿಯ ಯೋಜನೆಗಳಲ್ಲಿ ಒಂದು.   ಇದು ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಅದರ ದೊಡ್ಡ ವೈಶಿಷ್ಟ್ಯವೆಂದರೆ  ಕಡಿಮೆ ಬಡ್ಡಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ನಿಮ್ಮ ಪಿಪಿಎಫ್ ಖಾತೆಯನ್ನು ತೆರೆದು ಒಂದು ವರ್ಷ ಪೂರ್ಣಗೊಂಡ ನಂತರ ಮತ್ತು 5 ವರ್ಷಗಳು ಪೂರ್ಣಗೊಳ್ಳುವ ಮೊದಲು  ಸಾಲಕ್ಕೆ ಅರ್ಜಿ ಸಲ್ಲಿಸಬಹುದು. 5 ವರ್ಷಗಳು ಪೂರ್ಣಗೊಂಡ ನಂತರ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಬಹುದು. ಖಾತೆಯಿಂದ ವಿಡ್ರ್ವಾಲ್ ಆರಂಭವಾದ ನಂತರ ಪಿಪಿಎಫ್ ವಿರುದ್ಧ ಸಾಲ ತೆಗೆದುಕೊಳ್ಳಲಾಗುವುದಿಲ್ಲ. 

2 /4

ಪಿಪಿಎಫ್ ಖಾತೆಯಲ್ಲಿ ತೆಗೆದುಕೊಂಡ ಸಾಲದ ಮೊತ್ತವನ್ನು ಒಂದು ದೊಡ್ಡ ಮೊತ್ತದಲ್ಲಿ ಅಥವಾ ಕಂತುಗಳಲ್ಲಿ ಬಡ್ಡಿಯೊಂದಿಗೆ ಮರುಪಾವತಿಸಬಹುದು. ಅಸಲು ಮೊತ್ತವನ್ನು ಪೂರ್ಣವಾಗಿ ಪಾವತಿಸಿದ ನಂತರ, ಖಾತೆದಾರನು ಎರಡು ಮಾಸಿಕ ಕಂತುಗಳಲ್ಲಿ ಬಡ್ಡಿಯನ್ನು ವಾರ್ಷಿಕ ಮೊತ್ತಕ್ಕೆ ಒಂದು ಶೇಕಡಾ ದರದಲ್ಲಿ ಪಾವತಿಸಬೇಕಾಗುತ್ತದೆ. ಬಾಕಿ ಇರುವ ಸಾಲದ ಮೇಲಿನ ಬಡ್ಡಿಯನ್ನು 36 ತಿಂಗಳು ಪೂರ್ಣಗೊಳ್ಳುವ ಮೊದಲು ಪಾವತಿಸದಿದ್ದರೆ, ಈ ಹಣವನ್ನು ಪ್ರತಿ ವರ್ಷದ ಕೊನೆಯಲ್ಲಿ ಖಾತೆದಾರರ ಖಾತೆಯಿಂದ ತೆಗೆದುಕೊಳ್ಳಲಾಗುತ್ತದೆ. ತ್ರೈಮಾಸಿಕ ಆಧಾರದ ಮೇಲೆ ಪಿಪಿಎಫ್ ಮೇಲಿನ ಬಡ್ಡಿದರಗಳು ಬದಲಾಗುತ್ತವೆ. ಆದರೆ ಸಾಲವನ್ನು ಮರುಪಾವತಿಸುವವರೆಗೆ ಸಾಲದ ಬಡ್ಡಿದರವು ಒಂದೇ ಆಗಿರುತ್ತದೆ, ಅದನ್ನು ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ನಿಗದಿಪಡಿಸಲಾಗುತ್ತದೆ. 

3 /4

ಪಿಪಿಎಫ್ ಖಾತೆ ಹೊಂದಿರುವವರು ವರ್ಷದಲ್ಲಿ ಕೇವಲ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪಿಪಿಎಫ್ ಖಾತೆಯ ಮೇಲಿನ  ಸಾಲಕ್ಕಾಗಿ, ಹಳೆಯ ಸಾಲವನ್ನು ಮೊದಲು ಮರುಪಾವತಿಸಬೇಕು. ನೀವು ಸಾಲವನ್ನು ಮರುಪಾವತಿಸದಿದ್ದರೆ ನೀವು ಹೊಸ ಸಾಲವನ್ನು ಪಡೆಯಲು ಸಾಧ್ಯವಿಲ್ಲ.

4 /4

 ನಿಮ್ಮ ಪಿಪಿಎಫ್ ಖಾತೆ ಸಕ್ರಿಯವಾಗಿಲ್ಲದಿದ್ದರೆ  ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ.  ಅದೇ ಸಮಯದಲ್ಲಿ, ಅಪ್ರಾಪ್ತ ವಯಸ್ಕ ಅಥವಾ ಮಾನಸಿಕ ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ ಖಾತೆಯನ್ನು ತೆರೆದಿದ್ದರೆ, ಪೋಷಕರು ಅವರ ಪರವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ,  ಅವರ ಪರವಾಗಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.