ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!

Gajkesari Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ & ಅಶುಭ ಯೋಗಗಳು ರೂಪಗೊಂಡು ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ರೂಪಗೊಳ್ಳಲಿದೆ.

Gajkesari Yoga 2024: ಗ್ರಹಗಳು ಸಂಚಾರದ ವೇಳೆ ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ. ಈ ರೀತಿಯ ಗ್ರಹಗಳ ಸಂಚಾರದಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ ಮತ್ತು ಅಶುಭ ಯೋಗಗಳು ರೂಪಗೊಂಡು ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ರೂಪಗೊಳ್ಳಲಿದೆ. ಸಂಪತ್ತಿನ ಕಾರಕವಾಗಿರುವ ಶುಕ್ರನ ರಾಶಿಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಂಡಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ. ಈ ರಾಜಯೋಗದಿಂದ 3 ರಾಶಿಯವರು ಉತ್ತಮ ಆರ್ಥಿಕ ಲಾಭ ಮತ್ತು ಅದೃಷ್ಟದ ಬೆಂಬಲ ಪಡೆಯುತ್ತಾರೆ. ವೃಷಭ ರಾಶಿಯಲ್ಲಿ ಉಂಟಾಗಲಿರುವ ಗಜಗೇಸರಿ ರಾಜಯೋಗದಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಅನ್ನೋದ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /3

ಮೇಷ ರಾಶಿಯ 2ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರೂಪಗೊಂಡಿದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರ ಬುದ್ಧಿವಂತಿಕೆ ಹೆಚ್ಚಾಗಲಿದ್ದು, ಧನಲಾಭ ಸಿಗಲಿದೆ. ಆರ್ಥಿಕ ಜೀವನ ವೃದ್ಧಿಯಾಗಲಿದ್ದು, ಅನೇಕ ಪ್ರಮುಖ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗುತ್ತದೆ. ಸಾಕಷ್ಟು ಹಣ ಗಳಿಸುವ ಅವಕಾಶವಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ನಿಮ್ಮ ಸಂವಹನ ಕೌಶಲ್ಯ ಸುಧಾರಿಸಲಿದ್ದು, ಇದು ಇತರರನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡುತ್ತದೆ. 

2 /3

ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಂಡಿದೆ. ಇದು ವೃಷಭ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ನಿಮ್ಮ ಬಹುಕಾಲದ ಹಲವಾರು ಆಸೆಗಳು ಈಡೇರುತ್ತವೆ. ವ್ಯಾಪಾರ ಮತ್ತು ವ್ಯವಹಾರ ಎರಡರಲ್ಲೂ ನೀವು ಲಾಭವನ್ನು ಪಡೆಯುತ್ತೀರಿ. ಆದಾಯದ ಹೊಸ ಮೂಲಗಳು ಸಿಗಲಿದ್ದು, ನೀವು ಬಹಳಷ್ಟು ಹಣವನ್ನು ಗಳಿಸುತ್ತೀರಿ. ನಿಮಗೆ ಹೊಸ ಜನರ ಪರಿಚಯವಾಗಲಿದ್ದು, ಇದು ಭವಿಷ್ಯದಲ್ಲಿ ಉತ್ತಮ ಪ್ರಯೋಜನ ನೀಡುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ.

3 /3

ತುಲಾ ರಾಶಿಯ 8ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ಉಂಟಾಗಲಿದೆ. ಹೀಗಾಗಿ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದ್ದು, ಈ ಸಮಯದಲ್ಲಿ ಬಹಳಷ್ಟು ಹಣ ಗಳಿಸುವುದರ ಜೊತೆಗೆ ಉಳಿತಾಯವನ್ನೂ ಮಾಡುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಉನ್ನತ ಸ್ಥಾನಮಾನ ದೊರೆಯಲಿದೆ. ನೀವು ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.