ಜೂನ್ 17, 2023 ರಂದು, ಹಿಮ್ಮುಖ ಚಲನೆ ಆರಂಭಿಸುವ ಶನಿ,ಮುಂದಿನ ನವೆಂಬರ್ ವರೆಗೆ ಹಿಮ್ಮುಖ ಚಲನೆಯಲ್ಲಿಯೆ ಇರಲಿದ್ದಾನೆ. ಈ ಸಂದರ್ಭ ದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟವಾದರೆ,ಇನ್ನು ಕೆಲವರಿಗೆ ಸಮಸ್ಯೆ ತಂದೊಡ್ಡುತ್ತಾನೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಜೂನ್ 17, 2023 ರಂದು, ಶನಿ ದೇವ ತನ್ನ ಚಲನೆಯನ್ನು ಬದಲಿಸಲಿದ್ದಾನೆ. ಕುಂಭ ರಾಶಿಯಲ್ಲಿಯೇ ಶನಿ ದೇವ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಮುಂದಿನ ನವೆಂಬರ್ 4, ರವರೆಗೆ ಶನಿಯ ಚಲನೆ ಹಿಮ್ಮುಖವಾಗಿಯೇ ಇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕುಂಭರಾಶಿಯಲ್ಲಿಯೇ ಶನಿಯು ಹಿಮ್ಮುಖ ಚಲನೆ ಕೆಲವು ರಾಶಿಯವರ ಭಾಗ್ಯ ಬೆಳಗಲಿದೆ. ಜೂನ್ 17ರಿಂದ ನವೆಂಬರ್ 4 ರವರೆಗೆ ಶನಿ ಹಿಮ್ಮುಖ ಚಲನೆಯಲ್ಲಿ ಇರುತ್ತಾನೆ. ಈ ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗುತ್ತದೆ. ಇಲ್ಲಿಯವರೆಗೆ ಕೈ ಕೊಟ್ಟಿದ್ದ ಅದೃಷ್ಟ ಕೈ ಹಿಡಿಯಲಿದೆ.
ಮೀನ ರಾಶಿ : ಮೀನರಾಶಿಯವರಿಗೆ ಉತ್ತಮ ಉದ್ಯೋಗಾವಕಾಶ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು . ಉದ್ಯೋಗ ಬದಲಾವಣೆ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ವ್ಯಾಪಾರದಲ್ಲಿರುವವರಿಗೂ ಲಾಭವಾಗಲಿದೆ.
ಸಿಂಹ ರಾಶಿ : ಮದುವೆಗೆ ಸಂಬಂಧ ಪಟ್ಟಂತೆ ಸಮಸ್ಯೆಗಳು ಕಾಣಿಸಿಕೊಂಡಿದ್ದರೆ ದೂರವಾಗುತ್ತದೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಭಾಗ್ಯ ಕೂಡಿ ಬರಲಿದೆ. ಮಾಡುವ ಕೆಲಸಗಲ್ಲಿ ಶನಿದೆವನ ಆಶೀರ್ವಾದ ಇರಲಿದೆ. ಹಾಗಾಗಿ ಸೋಲುವ ಭಯವಿಲ್ಲದೆ ಮುಂದುವರಿಯಬಹುದು. ರಾಜಕೀಯಕ್ಕೆ ಸಂಬಂಧಿಸಿದ ಜನರು ದೊಡ್ಡ ಸ್ಥಾನಕ್ಕೆ ಏರಬಹುದು.
ವೃಷಭ ರಾಶಿ : ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ವೃಷಭ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ವ್ಯಾಪಾರ ವೃದ್ಧಿಯಾಗಿ, ಲಾಭವೂ ಹೆಚ್ಚಾಗುವುದು. ಉದ್ಯೋಗದಲ್ಲಿರುವವರ ವೇತನ ಹೆಚ್ಚಾಗುವುದು. ಬಡ್ತಿಯೊಂದಿಗೆ ವರ್ಗಾವಣೆಯೂ ಸಾಧ್ಯ. ಹಣದ ಸಮಸ್ಯೆಗಳೆಲ್ಲವೂ ಪರಿಹಾರವಾಗುವುದು. ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿದ್ದ ಅದೆ ತಡೆಗಳು ನಿವಾರಣೆಯಾಗುವುದು.