Hair Care Tips: ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಇದು ರಾಮಬಾಣ

ರಾಸಾಯನಿಕ ಉತ್ಪನ್ನಗಳ ಬಳಕೆ ಮಾಡುವ ಬದಲು ಮನೆಮದ್ದುಗಳ ಮೂಲಕ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಬಹುದು.   

ಕೂದಲನ್ನು ಸುಂದರವಾಗಿ ಮತ್ತು ಸ್ಟ್ರಾಂಗ್ ಮಾಡಲು ಜನರು ಮಾರುಕಟ್ಟೆಯಲ್ಲಿರುವ ಹಲವಾರು ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ನಿಮ್ಮ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ಕೂದಲಿನ ಶಕ್ತಿ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಅನೇಕ ಮನೆಮದ್ದುಗಳಿವೆ. ಸರಳವಾಗಿ ಮನೆಯಲ್ಲಿ ಕುಳಿತು ತಯಾರಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ನೀವು ಸುಂದರ ಮತ್ತು ಸ್ಟ್ರಾಂಗ್ ಆಗಿರುವ ಕೂದಲು ಹೊಂದಲು ಸಾಧ್ಯವಾಗುತ್ತದೆ. ಕೂದಲಿಗೆ ರಾಸಾಯನಿಕದ ಬದಲು ನೈಸರ್ಗಿಕ ಚಿಕಿತ್ಸೆ ನೀಡಿದಂತಾಗುತ್ತದೆ. ಇದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಕೂದಲಿನ ಸೌಂದರ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲು ನೀವು ಮನೆಯಲ್ಲಿ ಚಹಾ ಎಲೆಯ ನೀರನ್ನು ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಚಹಾ ಎಲೆಗಳನ್ನು ಸೇರಿಸಿ. ಈಗ ಈ ನೀರನ್ನು ಕುದಿಸಲು ಗ್ಯಾಸ್ ಮೇಲೆ ಹಾಕಿ. ಈ ನೀರು ಐದರಿಂದ ಏಳು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಇದರ ನಂತರ ಗ್ಯಾಸ್ ಆಫ್ ಮಾಡಿ ಮತ್ತು ನೀರನ್ನು ತಣ್ಣಗಾಗಲು ಬಿಡಿ. ನೀರು ಸಂಪೂರ್ಣವಾಗಿ ತಣ್ಣಗಾದ ಬಳಿಕ ಇದನ್ನು ಬಳಸಿ.

2 /5

ಮೊದಲಿಗೆ ಶಾಂಪೂವಿನಿಂದ ನಾರ್ಮಲ್ ಸ್ನಾನ ಮಾಡಿರಿ. ನಂತರ ಚಹಾ ಎಲೆಗಳ ತಣ್ಣನೆಯ ನೀರನ್ನು ಒಂದು ಮಗ್‌ನಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಸುರಿಯಿರಿ. ಈ ನೀರಿನಿಂದ ಕೂದಲನ್ನು ಚೆನ್ನಾಗಿ ನೆನೆಯಲು ಬಿಡಿ. ಈಗ ಒಂದು ನಿಮಿಷ ಹಗುರವಾಗಿ ಕೈಗಳಿಂದ ಕೂದಲನ್ನು ಉಜ್ಜಿಕೊಳ್ಳಿ ಮತ್ತು ಹಳೆಯ ಟವೆಲ್ ನಿಂದ ಕೂದಲನ್ನು ಕಟ್ಟಿಕೊಳ್ಳಿ. ಇದರ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿ ಚಮತ್ಕಾರ ನೋಡಿ.

3 /5

2 ಚಮಚ ಚಹಾ ಎಲೆಗಳನ್ನು ಒಂದು ಮಗ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ಈಗ ಗ್ಯಾಸ್ ಆಫ್ ಮಾಡಿ ನೀರನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಈ ನೀರನ್ನು ಹೇರ್ ಕಲರ್ ಬ್ರಶ್ ನ ಸಹಾಯದಿಂದ ಕೂದಲಿಗೆ ಕಲರ್ ನಂತೆ ಹಚ್ಚಿಕೊಳ್ಳಿ. ನಿಮ್ಮ ಕೂದಲಿಗೆ ಹಚ್ಚಿದ 1 ಗಂಟೆಯ ನಂತರ ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಈ ರೀತಿ ಮಾಡಬೇಕು

4 /5

ಕೂದಲಿನ ಆರೈಕೆ ಮತ್ತು ಆರೋಗ್ಯಕ್ಕೆ ನೀವು ಹಸಿರು ಚಹಾವನ್ನು ಸಹ ಬಳಸಬಹುದು. B ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಹಸಿರು ಚಹಾವು ನಿಮ್ಮ ಕೂದಲನ್ನು moisturizing ಮಾಡಲು ಮತ್ತು ಸದಾ ಹೊಳೆಯುವಂತಿರಲು ಸಹಾಯ ಮಾಡುತ್ತದೆ.

5 /5

ನಿಮಗೆ ಕೂದಲು ಉದುರುವ ಸಮಸ್ಯೆ ಇದ್ದರೆ ಚಹಾ ಬಳಸುವುದು ರಾಮಬಾಣ. ವಾಸ್ತವವಾಗಿ ಚಹಾವು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಚಹಾ ನಿಮಗೆ ಸಹಾಯ ಮಾಡುತ್ತದೆ.