Hans Rajyog: April 29 ರಿಂದ ನಿರ್ಮಾಣಗೊಂಡಿದೆ 'ಹಂಸ ರಾಜಯೋಗ', ಈ ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

Hans Rajyog: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಚಲನೆ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಭಾರಿ ಪ್ರಭಾವವನ್ನು ಬೀರುತ್ತವೆ, ಹೀಗಿರುವಾಗ ಯಾವುದೇ ಒಂದು ಗ್ರಹದ ಸ್ಥಾನದಲ್ಲಿನ ಪಲ್ಲಟ, ಹಿಮ್ಮುಖ ನಡೆ, ನೇರ ನಡೆ, ಉದಯ ಅಥವಾ ಅಸ್ತವಾಗಿರಲಿ, ಈ ಎಲ್ಲಾ ಘಟನೆಗಳು ಮನುಷ್ಯರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತವೆ. 
 

Hans Rajyog: ಇತ್ತೀಚೆಗೆ ಅಂದರೆ ಏಪ್ರಿಲ್ 29 ರಂದು ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಉದಯ ನೆರವೇರಿದೆ. ಗುರುವಿನ ಈ ಉದಯದಿಂದ ಹಂಸ ರಾಜಯೋಗ ನಿರ್ಮಾಣಗೊಂಡಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಈ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಂಸರಾಜ ಯೋಗದ ಪ್ರಾಮುಖ್ಯತೆ ಏನು ಮತ್ತು ಏಪ್ರಿಲ್ 29 ರಿಂದ ರೂಪುಗೊಂಡ ಈ ರಾಜಯೋಗವು ಯಾವ ಯಾವ ರಾಶಿಗಳ ಜನರ ಮೇಲೆ ಶುಭ ಪರಿಣಾಮವನ್ನು ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Mahayoga 2023: 12 ವರ್ಷಗಳ ಬಳಿಕ ನಿರ್ಮಾಣಗೊಂಡಿದೆ ಈ 'ಮಹಾಯೋಗ' 5 ರಾಶಿಗಳ ಜನರಿಗೆ ಇದು ವರದಾನಕ್ಕೆ ಸಮಾನ!

 


ಹಂಸ ರಾಜ್ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ - ಯಾವುದೇ ಒಂದು ಗೋಚರ ಜಾತಕದಲ್ಲಿ ಬೃಹಸ್ಪತಿ ಅಂದರೆ ಗುರುವು ಜಾತಕದಲ್ಲಿ ಲಗ್ನ ಅಥವಾ ಚಂದ್ರನಿಗಿಂತ ಮೊದಲು, ಚತುರ್ಥ, ಸಪ್ತಮ ಅಥವಾ ದಶಮ ಭಾವದಲ್ಲಿ ಕರ್ಕ, ಧನು ಅಥವಾ ಮೀನ ರಾಶಿಯಲ್ಲಿದ್ದಾಗ, ಹಂಸ ರಾಜಯೋಗವು ರೂಪುಗೊಳ್ಳುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಹಂಸ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಯೋಗದ ಪರಿಣಾಮ ಸ್ಥಳೀಯರಿಗೆ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಇದು ನೀಡುತ್ತದೆ. ಹಾಗಾದರೆ ನಿರ್ಮಾಣಗೊಂಡಿರುವ ಈ ರಾಜಯೋಗ ಯಾವ ರಾಶಿಗಳ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Shani-Shukra In Navpancham Yog: ಶೀಘ್ರದಲ್ಲಿಯೇ ನವಪಂಚಮ ರಾಜಯೋಗ ನಿರ್ಮಾಣ, ಧನದಾತ ಶುಕ್ರ- ಕರ್ಮಫಲದಾತ ಶನಿ ಕೃಪೆಯಿಂದ ಅಪಾರ ಧನಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಕರ್ಕ ರಾಶಿ:  ಕರ್ಕ ರಾಶಿಯ ಜನರ ಪಾಲಿಗೆ ಹಂಸ ರಾಜಯೋಗ ವಿಶೇಷ ಲಾಭಗಳನ್ನು ನೀಡಲಿದೆ. ಈ ರಾಶಿಯ ನೌಕರ ವರ್ಗದ ಜನರು ಮತ್ತು ಉದ್ಯಮಿಗಳು ಇದರಿಂದ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ದೀರ್ಘಕಾಲದಿಂದ ನೀವು ನಿರೀಕ್ಷಿಸುತ್ತಿರುವ ಉಡುಗೊರೆಗಳು ನಿಮಗೆ ಪ್ರಾಪ್ತಿಯಾಗಲಿವೆ. ಇದಲ್ಲದೆ, ನೀವು ಪ್ರತಿ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ, ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ ಮತ್ತು ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಲಿದೆ.  

2 /3

ಧನು ರಾಶಿ : ಹಂಸ ರಾಜಯೋಗವು ಧನು ರಾಶಿಯ ಜನರಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಹಠಾತ್ ಧನಲಾಭ ಪಡೆಯುವ ಸಾಧ್ಯತೆ ಇದೆ. ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಮತ್ತು ಅವರು ಅದನ್ನು ನಿಮಗೆ ಇದುವರೆಗೂ ಹಿಂದಿರುಗಿಸಿಲ್ಲ ಎಂದಾದಲ್ಲಿ, ಶೀಘ್ರದಲ್ಲೇ ನೀವು ನಿಮ್ಮ ಹಣ ನಿಮ್ಮ ಕೈಸೇರಲಿದೆ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ಮತ್ತು ಈ ಸಮಯದಲ್ಲಿ ನೀವು ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು.  

3 /3

ಮೀನ ರಾಶಿ: ಗುರು ಗ್ರಹದಿಂದ ರೂಪುಗೊಂಡ ಈ ಹಂಸ ರಾಜಯೋಗ ಒಂದು ಅತ್ಯಂತ ಮಂಗಳಕರ ಯೋಗವಾಗಿದ್ದು, ಮೀನ ರಾಶಿಯವರಿಗೆ ಇದು ಅತ್ಯಂತ ಮಂಗಳಕರವಾಗಿರುತ್ತದೆ. ಈ ಯೋಗದಿಂದ ಮೀನ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ, ಇವರು ಎಲ್ಲಾ  ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವರು, ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಅಪಾರ ಬೆಂಬಲ ಸಿಗಲಿದೆ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ, ವ್ಯಾಪಾರದಲ್ಲಿ ಹೆಚ್ಚಿನ ಲಾಭ ಉಂಟಾಗಲಿದೆ, ಆದರೆ ಪ್ರಸ್ತುತ ನಿಮ್ಮ ಜಾತಕದಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿರುವ ಕಾರಣ ಆರೋಗ್ಯದ ಬಗ್ಗೆ ಸ್ವಲ್ಪ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)