Happy Birthday Yuzvendra Chahal: ಈ ಭಾರತೀಯ ಸ್ಪಿನ್ನರ್ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಚಹಾಲ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ನವದೆಹಲಿ: ಯುಜ್ವೇಂದ್ರ ಚಹಾಲ್ ವಿಶ್ವ ದರ್ಜೆಯ ಆಟಗಾರ. ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಚಹಾಲ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ಆಟಗಾರನಿಗೆ ಟೀಂ ಇಂಡಿಯಾದ ಆಟಗಾರರು ಮತ್ತು ಲಕ್ಷಾಂತರ ಅಭಿಮಾನಿಗಳು ಶುಭ ಕೋರಿದ್ದಾರೆ. ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಬಗೆಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಯುಜ್ವೇಂದ್ರ  ಚಹಾಲ್ 127 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 192 ವಿಕೆಟ್ ಪಡೆದಿದ್ದಾರೆ. ಟಿ-20ಯಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಆಗಿದ್ದಾರೆ. ಅದೇ ರೀತಿ ಟಿ-20 ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2 /6

ಯುಜ್ವೇಂದ್ರ  ಚಹಾಲ್ ಕ್ರಿಕೆಟ್ ಮತ್ತು ಚೆಸ್ ಹೊರತುಪಡಿಸಿ ಫುಟ್ಬಾಲ್ ಅಭಿಮಾನಿ ಕೂಡ ಆಗಿದ್ದಾರೆ. ಅವರು ರಿಯಲ್ ಮ್ಯಾಡ್ರಿಡ್ ತಂಡವನ್ನು ಬೆಂಬಲಿಸುತ್ತಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಅವರ ನೆಚ್ಚಿನ ಫುಟ್ಬಾಲ್ ಆಟಗಾರ.

3 /6

ಆರಂಭದಲ್ಲಿ ಯುಜ್ವೇಂದ್ರ ಚಹಾಲ್ ಅವರು ಮಧ್ಯಮ ವೇಗಿಯಾಗಿದ್ದರು, ನಂತರ ಅವರು ತಮ್ಮ ಗಮನವನ್ನು ಲೆಗ್-ಸ್ಪಿನ್ ಕಡೆಗೆ ಬದಲಾಯಿಸಿದರು. ಅದರಲ್ಲಿಯೇ ಬೌಲಿಂಗ್ ಕಲೆಯನ್ನು ಕರಗತ ಮಾಡಿಕೊಂಡು ಅತ್ಯುತ್ತಮ ಬೌಲರ್ ಎನಿಸಿಕೊಂಡರು.

4 /6

ಬಾಲಿವುಡ್ ನಟಿ ಕತ್ರಿಕಾ ಕೈಫ್ ಯುಜ್ವೇಂದ್ರ  ಚಹಾಲ್ ಅವರ ಕನಸಿನ ರಾಣಿಯಂತೆ. ಅವರ ಇಷ್ಟದ ಚಿತ್ರ ‘ಬಫ್’ ಆದರೆ, ನಟಿ ಕತ್ರಿನಾ ಅಂತೆ. ‘ನನಗೆ ಕತ್ರಿನಾ ಎಂದರೆ ನನಗೆ ತುಂಬಾ ಇಷ್ಟ, ಆಕೆಯ ನಗು ನನ್ನನ್ನು ಹೆಚ್ಚು ಆಕರ್ಷಿಸಿದೆ’ ಎಂದು ಸಂದರ್ಶನವೊಂದರಲ್ಲಿ ಚಹಾಲ್ ಹೇಳಿಕೊಂಡಿದ್ದರು.  

5 /6

ತಮ್ಮ ಮತ್ತು ಪತ್ನಿ ಧನಶ್ರೀ ವರ್ಮಾರ ಪರಿಚಯದ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಹಾಲ್, ‘ಚಿಕ್ಕಂದಿನಿಂದಲೂ ನನಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಭಾಂಗ್ರಾ ಸೇರಿ ಹಲವು ರೀತಿಯ ನೃತ್ಯ ಕಲಿಯಬೇಕೆಂಬ ಆಸೆ ಹೊಂದಿದ್ದೆ, ಹೀಗಾಗಿ ನೃತ್ಯ ಶಾಲೆಯೊಂದಕ್ಕೆ ಸೇರಿಕೊಂಡೆ. ಅಲ್ಲಿಯೇ ಧನಶ್ರೀ ವರ್ಮಾ ಪರಿಚಯವಾಯಿತು. ನೃತ್ಯ ಶಿಕ್ಷಕಿಯಾಗಿದ್ದ ಧನಶ್ರೀ ನಮಗೆ ನೃತ್ಯ ಪಾಠಗಳನ್ನು ಕಲಿಸುತ್ತಿದ್ದರು. ಹೀಗಾಗಿ ನಮ್ಮಿಬ್ಬರ ಪರಿಚಯವು ನಂತರ ಪ್ರೇಮಕ್ಕೆ ತಿರುಗಿತು. ಎರಡೂವರೆ ತಿಂಗಳ ನಂತರ ಧನಶ್ರೀ ವರ್ಮಾರನ್ನು ಮದುವೆಯಾಗುವುದಾಗಿ ತಿಳಿಸಿದೆ. ನಮ್ಮ ಮನೆಯಲ್ಲಿ ಹೇಳಿ ಅವರ ತಂದೆ-ತಾಯಿಗೂ ವಿಷಯ ತಿಳಿಸಿ ಒಪ್ಪಿಗೆ ಪಡೆದುಕೊಂಡೆವು. ಬಳಿಕ ನಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು’ ಎಂದು ಹೇಳಿದ್ದಾರೆ.  

6 /6

ಟಾಪ್ ಚೆಸ್ ಆಟಗಾರನಾಗಬೇಕೆಂದು ಬಯಸಿದ್ದ ಚಹಾಲ್‌ಗೆ ಪ್ರಾಯೋಜಕರು ಸಿಗದ ಕಾರಣ ಚೆಸ್‌ನಿಂದ ಕ್ರಿಕೆಟ್‌ನತ್ತ ಗಮನ ಹರಿಸಿದರು.