Sovereign Gold Bond : ಚಿನ್ನದ ಮೇಲಿನ ಹೂಡಿಕೆಗೆ ಮತ್ತೊಂದು ಸುವರ್ಣಾವಕಾಶ, ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಬಂಗಾರ

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 3ನೇ ಸೀರೀಸ್ ಅಡಿಯಲ್ಲಿ ಮತ್ತೆ ಚಿನ್ನದ ಮೇಲಿನ ಹೂಡಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅವಕಾಶ ನೀಡುತ್ತಿದೆ. 

ನವದೆಹಲಿ : Sovereign Gold Bond Scheme 2021-22 Series III:  ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 3ನೇ ಸೀರೀಸ್ ಅಡಿಯಲ್ಲಿ ಮತ್ತೆ ಚಿನ್ನದ ಮೇಲಿನ ಹೂಡಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅವಕಾಶ ನೀಡುತ್ತಿದೆ. ಹೂಡಿಕೆದಾರರು ಈ ಯೋಜನೆಯಡಿ ಇಂದಿನಿಂದ ಅಂದರೆ ಮೇ 31ರಿಂದ ಜೂನ್ 4ರವರೆಗೆ ಹೂಡಿಕೆ ಮಾಡಬಹುದಾಗಿದೆ. ಅಂದರೆ ಈ ಅವಕಾಶ ಮುಂದಿನ 5 ದಿನಗಳವರೆಗೆ ಇರಲಿದೆ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆ ಅತ್ಯಂತ ಸುರಕ್ಷಿತವಾಗಿದೆ ಎನ್ನುತ್ತಾರೆ ತಜ್ಞರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 3ನೇ ಸೀರೀಸ್ ಅಡಿಯಲ್ಲಿ  ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,889 ರೂ ಎಂದು ನಿಗದಿಪಡಿಸಲಾಗಿದೆ. ಎರಡನೇ ಸೀರೀಸ್ ನಲ್ಲಿ ಗ್ರಾಂ ಮೇಲೆ 4,842 ರೂ. ನಿಗದಿಯಾಗಿತ್ತು.  

2 /5

ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಆಯ್ದ ಅಂಚೆ ಕಚೇರಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಅಥವಾ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಯಿಂದ Sovereign Gold Bond ಖರೀದಿಸಬಹುದು.

3 /5

ಈ ಯೋಜನೆಯಲ್ಲಿ ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿ ಮಾಡುವುದಾದರೆ, ಪ್ರತಿ ಗ್ರಾಂ ಮೇಲೆ 50 ರೂಪಾಯಿ ರಿಯಾಯಿತಿ ಸಿಗಲಿದೆ. ವಾರ್ಷಿಕವಾಗಿ ಈ ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ಬಡ್ಡಿ ಕೂಡಾ ದೊರೆಯುತ್ತದೆ.   

4 /5

 ಸಾವರಿನ್ ಗೋಲ್ಡ್ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿದೆ. ಆದರೆ, ಲಾಕ್-ಇನ್ ಅವಧಿ ಐದು ವರ್ಷಗಳು.  ಈ ಯೋಜನೆ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ತೆರಿಗೆ ಪಾವತಿಸಬೇಕಿಲ್ಲ. 

5 /5

 ಬಾಂಡಿನ ಸಬ್ಸ್ಕ್ರಿಪ್ಶನ್ ಪ್ರಾರಂಭವಾಗುವ ಮೊದಲು, ವಾರದ ಕೊನೆಯ ಮೂರು ವಹಿವಾಟು ದಿನಗಳಲ್ಲಿ 999 ಶುದ್ಧತೆಯ ಚಿನ್ನದ ಕ್ಲೋಸಿಂಗ್ ಪ್ರೈಸ್ ನಿರ್ಧಾರವಾಗುತ್ತದೆ.  ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ ಈ ಬೆಲೆಯನ್ನು ಪ್ರಕಟಿಸುತ್ತದೆ