ಹಾಲು ಕುದಿಸುವಾಗ ಆಗುವ ತಪ್ಪುಗಳನ್ನು ಹೀಗೆ ತಡೆಯಿರಿ..
ನವದೆಹಲಿ : ಹಾಲು ಕುದಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಕೆಲಸವನ್ನು ಮಾಡುವಾಗ, ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ, ಸಣ್ಣದೊಂದು ತಪ್ಪಿನಿಂದಾಗಿ, ಹಾಲು ಉಕ್ಕಿ ಹೊರ ಚೆಲ್ಲುತ್ತದೆ. ಇದರಿಂದಾಗಿ ಕೆಲಸವೂ ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಕೆಲವರು ಹಾಲು ಕುದಿಯುವುದಕ್ಕೆ ಬಿಟ್ಟು ಹಾಗೆ ಮರೆತುಬಿಡುತ್ತಾರೆ. ಹೀಗಾದಾಗ ಹಾಲು ಉಕ್ಕಿ ಸ್ಟೋವ್ ಮೇಲೆಲ್ಲಾ ಹರಡಿಕೊಳ್ಳುತ್ತದೆ. ಪಾತ್ರೆಯಿಂದ ಕೆಳಗೆ ಚೆಲ್ಲಿ ಎಲ್ಲ ಕಡೆ ಹಾಲಿನ ವಾಸನೆಯೇ ಹರಡಿಕೊಳ್ಳುತ್ತದೆ.
ಮೊದಲನೆಯದಾಗಿ, ಹಾಲು ಕುದಿಯಲು ಇಡುವ ಪ್ಯಾನ್ ಅಥವಾ ಪಾತ್ರೆಯ ಕೆಳಭಾಗದಲ್ಲಿ ಅರ್ಧ ಕಪ್ ನೀರನ್ನು ಹಾಕಿ. ಪಾತ್ರೆಯ ಕೆಳಭಾಗವು ಒದ್ದೆಯಾದ ನಂತರ ಹಾಲು ಪಾತ್ರೆಯಾ ಕೆಳಭಾಗಕ್ಕೆ ಅಂಟಿಕೊಳ್ಳುವುದಿಲ್ಲ.
ನೀವು ಹಾಲನ್ನು ಕುದಿಯಲು ಇಟ್ಟಾಗ, ಅದರಲ್ಲಿ ಒಂದು ಚಮಚ ಹಾಕಿ. ಇದರಿಂದಾಗಿ ಹಾಲು ಉಕ್ಕಿ ಹೊರ ಬರುವುದಿಲ್ಲ.
ಹಾಲನ್ನು ಬಿಸಿ ಮಾಡುವಾಗ, ಮರದ ಚಮಚವನ್ನು ಪಾತ್ರೆಯ ಮೇಲೆ ಅಡ್ಡಕ್ಕೆ ಇರಿಸಿ. ಹೀಗೆ ಮಾಡಿದರೆ ಹಾಲು ಪಾತ್ರೆಯಿಂದ ಹೊರ ಬರುವುದಿಲ್ಲ.
ಹಾಲು ಕುದಿಸುವ ಪಾತ್ರೆಯ ಬದಿಗಳಿಗೆ ಬೆಣ್ಣೆ ಸವರಿದರೂ, ಹಾಲು ಉಕ್ಕಿ ಹೊರ ಬರುವುದಿಲ್ಲ.