ಗುರುವಿನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಆಗಲಿದೆ ಬಂಪರ್ ಲಾಭ

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 12 ರಂದು ದೇವಗರು ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ.

 ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 12 ರಂದು ದೇವಗರು ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ. ಗುರು ತನ್ನ ಸ್ವಂತ ರಾಶಿಯಲ್ಲಿ ಅಥವಾ 2 ನೇ, 5 ನೇ, 9 ನೇ ಮತ್ತು 12 ನೇ ಮನೆಯಲ್ಲಿ ಸಂಕ್ರಮಿಸಿದಾಗ ಅದರ ಶುಭ ಫಲಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಗುರುವಿನ ಸಂಕ್ರಮಣವು ಮೇಷ ರಾಶಿಯ 12 ನೇ ಮನೆಯಲ್ಲಿ ಆಗಲಿದೆ. ಇದರ ಪರಿಣಾಮವಾಗಿ, ಈ ರಾಶಿಯವರಿಗೆ ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷ ಇರುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭವಾಗಲಿದೆ.  ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. 

2 /5

ಗುರು ಗ್ರಹವು ಏಪ್ರಿಲ್‌ನಲ್ಲಿ 9 ನೇ ಮನೆಯಲ್ಲಿ ಸಾಗುತ್ತದೆ. ಈ ರಾಶಿಯವರಿಗೆ ಗುರುವಿನ ಸಂಕ್ರಮಣದ ಅವಧಿಯು ಬಂಪರ್ ಲಾಭ ನೀಡಲಿದೆ. ವ್ಯಾಪಾರಸ್ಥರ ಆದಾಯ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುಇವ ಸಾಧ್ಯತೆ ಹೆಚ್ಚಿದೆ. 

3 /5

ಗುರುವು ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದಾಗಿ ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ವೃತ್ತಿಯಲ್ಲಿ ಬಡ್ತಿ ಸಿಗಲಿದೆ. 

4 /5

ಗುರುಗ್ರಹವು ಏಪ್ರಿಲ್ ತಿಂಗಳಿನಲ್ಲಿ ಕುಂಭ ರಾಶಿಯವರ  ಜಾತಕದ ಎರಡನೇ ಮನೆಯಲ್ಲಿ ಸಾಗಲಿದೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭವಾಗಲಿದೆ. ವೇತನ ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. 

5 /5

ಮೀನ ರಾಶಿಯವರಿಗೆ ಗುರು ಸಂಕ್ರಮಣ ವಿಶೇಷ ಲಾಭವನ್ನು ಒದಗಿಸಲಿದೆ. ಈ ರಾಶಿಯವರಿಗೆ ವಿದೇಶಿ ಪ್ರಯಾಣದ ಯೋಗ ಕೂಡಿ ಬರಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ಅವಕಾಶ ಸಿಗಬಹುದು. ವ್ಯಾಪಾರದಲ್ಲಿ ಪ್ರಗತಿಯಾಗಲಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ