Mahadhan Rajayoga: ಈ 3 ರಾಶಿಯವರಿಗೆ ಮಹಾಧನ ರಾಜಯೋಗ.. ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ!

Shukra Gochar 2023: ಜ್ಯೋತಿಷದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಅದನ್ನೇ ಗ್ರಹ ಸಂಚಾರ ಎನ್ನುತ್ತಾರೆ. ಗ್ರಹವು ಯಾವುದೇ ರಾಶಿಯನ್ನು ಪ್ರವೇಶಿಸಿದಾಗ ಅದು ಅಲ್ಲಿನ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಇದರಿಂದಾಗಿ ವಿವಿಧ ರೀತಿಯ ಯೋಗಗಳನ್ನು ಸೃಷ್ಟಿಸುತ್ತದೆ. 
 

Mahadhan Rajayoga: ಶುಕ್ರನನ್ನು ಪ್ರೀತಿ, ಪ್ರಣಯ, ಹಣ ಮತ್ತು ಐಷಾರಾಮಿ ಜೀವನದ ಅಧಿಪತಿ ಎಂದು  ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಶುಕ್ರ ತನ್ನದೇ ಆದ ವೃಷಭ ರಾಶಿಯಲ್ಲಿದ್ದಾನೆ. ಇದರಿಂದಾಗಿ ಮಹಾಧನ ರಾಜಯೋಗವನ್ನು ನಿರ್ಮಿಸುತ್ತದೆ. ಇದು ಎಲ್ಲಾ ಮೂರು ರಾಶಿಗಳಿಗೆ ಮಂಗಳಕರವಾಗಿದೆ. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಸಂಪತ್ತು ಮತ್ತು ಗೌರವವನ್ನು ನೀಡುವ ಶುಕ್ರನು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಮೂಲಕ ಮಹಾಧನ ರಾಜಯೋಗ ಸೃಷ್ಟಿಯಾಗಿದೆ.    

2 /4

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಹಾಧನ ರಾಜಯೋಗ ಬಹಳಷ್ಟು ಲಾಭವನ್ನು ನೀಡುತ್ತದೆ. ಅನಿರೀಕ್ಷಿತ ಧನಾಗಮನವಾಗುವುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಯಶಸ್ವಿಯಾಗುತ್ತಾರೆ. ಎಲ್ಲದರಲ್ಲೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಸಂಗೀತ, ಕಲೆ, ಹೋಟೆಲ್ ಇತ್ಯಾದಿ ವ್ಯಾಪಾರಿಗಳಿಗೆ ಈ ಸಮಯ ಅನುಕೂಲಕರವಾಗಿದೆ.  

3 /4

ವೃಷಭ ರಾಶಿ: ಈ ರಾಶಿಯವರಿಗೆ ಮಹಾಧನ ರಾಜಯೋಗ ಅತ್ಯಂತ ಶುಭ ಫಲ ನೀಡಲಿದೆ. ಈ ರಾಶಿಯಲ್ಲಿ ಮಹಾಲಕ್ಷ್ಮಿ ಯೋಗ ಉಂಟಾಗುತ್ತದೆ. ಇದರಿಂದಾಗಿ ವೃಷಭ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ. ಆದಾಯ ದ್ವಿಗುಣ, ಉದ್ಯೋದಲ್ಲಿ ಬಡ್ತಿ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗುವುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ.  

4 /4

ಮಕರ ರಾಶಿ: ಮಹಾಧನ ಯೋಗದಿಂದ ತುಂಬಾ ಅನುಕೂಲಕರ ಕಾರ್ಯಗಳು ನಡೆಯಲಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆದಾಯ ದ್ವಿಗುಣವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ದಿಢೀರ್‌ ಧನಲಾಭ ಪಡೆಯುವಿರಿ. ವ್ಯಾಪಾರಿಗಳು ದೊಡ್ಡ ಆರ್ಡರ್ ಪಡೆಯುತ್ತಾರೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುವ ಸಂಭವವಿದೆ.