Mangal Gochar 2024: ಈ 5 ರಾಶಿಯವರ ವೃತ್ತಿ ಬದುಕಿನಲ್ಲಿ ಬಂಗಾರದ ಸಮಯ

Mangal Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂತಲೇ ಕರೆಯಲಾಗುವ ಮಂಗಳ ಗ್ರಹ ನೆನ್ನೆಯಷ್ಟೇ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ವೃತ್ತಿ ಬದುಕಿನಲ್ಲಿ ಇದನ್ನು ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮಂಗಳ ಗೋಚಾರ:  ವೈದಿಕ ಜ್ಯೋತಿಷ್ಯದ ಪ್ರಕಾರ, ಜನವರಿ 16, 2024 ರಂದು ರಾತ್ರಿ 11:07ರ ಸುಮಾರಿಗೆ ಗ್ರಹಗಳ ಕಮಾಂಡರ್ ಮಂಗಳ ಧನು ರಾಶಿಗೆ ಪ್ರವೇಶಿಸಿದ್ದಾನೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ವೃತ್ತಿ ಬದುಕಿನಲ್ಲಿ ಗೋಲ್ಡನ್ ಟೈಮ್ ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ ಅವರು ಅನಿರೀಕ್ಷಿತ ಧನಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

2 /6

ಸಿಂಹ ರಾಶಿ:  ಧನು ರಾಶಿಯಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಹೊಸ ಹೊಸ ಅವಕಾಶಗಳನ್ನು ತರಲಿದೆ. ದಿಢೀರ್ ಹಣಕಾಸಿನ ಲಾಭವಾಗುವ ನಿರೀಕ್ಷೆಯಿದೆ. ಮದುವೆ ಸಂಬಂಧಿತ ವಿಷಯಗಳಲ್ಲಿ ಶುಭ ಸುದ್ದಿ ಸ್ವೀಕರಿಸುವ ನಿರೀಕ್ಷೆಯಿದೆ. 

3 /6

ತುಲಾ ರಾಶಿ:  ಮಂಗಳ ಗ್ರಹದ ಸಂಚಾರವು ತುಲಾ ರಾಶಿಯ ಜನರಿಗೆ ಬಹಳ ಫಲಪ್ರದವಾಗಲಿದೆ. ಈ ಸಮಯದಲ್ಲಿ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ನಿಮ್ಮ ಪ್ರತಿ ಕೆಲಸ ಕಾರ್ಯಗಳಲ್ಲೂ ಸಹೋದರ ವರ್ಗದಿಂದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವೃತ್ತಿ ಬದುಕಿನಲ್ಲೂ ಧನಾತ್ಮಕ ಬದಲಾವಣೆಗಳಾಗ ಬಹುದು. 

4 /6

ವೃಶ್ಚಿಕ ರಾಶಿ:  ಧನು ರಾಶಿಯಲ್ಲಿ ಮಂಗಳ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಾತ್ರವಲ್ಲ, ಬಂಪರ್ ಹಣಕಾಸಿನ ಲಾಭವನ್ನೂ ಪಡೆಯುವಿರಿ. 

5 /6

ಧನು ರಾಶಿ:  ಸ್ವ ರಾಶಿಯಲ್ಲಿ ಮಂಗಳನ ಸಂಚಾರ ಧನು ರಾಶಿಯವರಿಗೆ ಹಲವು ವಿಷಯಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು  ನೀಡಲಿದೆ. ಈ ಅವಧಿಯಲ್ಲಿ ಕೈಗೊಳ್ಳುವ ಪ್ರಯಾಣಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಕೆಲವರಿಗೆ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದ್ದು, ಇನ್ನೂ ಕೆಲವರಿಗೆ ಆಸ್ತಿ ಖರೀದಿಸುವ ಯೋಗವಿದೆ. 

6 /6

ಕುಂಭ ರಾಶಿ:  ಧನು ರಾಶಿಯಲ್ಲಿ ಕಮಾಂಡರ್ ಗ್ರಹ ಸಂಚಾರದ ಫಲವಾಗಿ ಕುಂಭ ರಾಶಿಯವರು ಹೊಸ ಉದ್ಯೋಗಾವಕಾಶವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಕೈಗೊಂಡ ಸಣ್ಣ ಪ್ರವಾಸಗಳು ಕೂಡ ನಿಮಗೆ ಭಾರೀ ಪ್ರಯೋಜನವನ್ನು ನೀಡಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.