Best Smartphone: ಗ್ರಾಹಕರ ಮನಸ್ಸು ಕದ್ದಿರುವ ಅದ್ಭುತ ವಿನ್ಯಾಸವುಳ್ಳ ಸ್ಮಾರ್ಟ್‌ಫೋನ್‌ಗಳು

ಈ ವರ್ಷ ಪ್ರಪಂಚದಾದ್ಯಂತ ಅನೇಕ ಕಂಪನಿಗಳು ತಮ್ಮ ವಿನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ.

2021ರ ವರ್ಷ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಪ್ರಪಂಚದಾದ್ಯಂತ ಅನೇಕ ಕಂಪನಿಗಳು ತಮ್ಮ ವಿನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಇವುಗಳ ವಿಶೇಷ ವಿನ್ಯಾಸವು ಗ್ರಾಹಕರ ಮನಸ್ಸನ್ನು ಸೆಳೆದಿವೆ. ಈ ಸ್ಮಾರ್ಟ್‌ಫೋನ್‌ಗಳು ವೈಶಿಷ್ಟ್ಯಗಳ ವಿಷಯದಲ್ಲಿ ಅದ್ಭುತ ಹಾಗೂ ನೋಡಲು ತುಂಬಾ ಸುಂದರವಾಗಿವೆ. ಈ ಫೋನ್‌ಗಳು ಯಾವುವು ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Samsung Galaxy Z Flip3: ಸ್ಯಾಮ್‌ಸಂಗ್‌ನ ಈ ಫ್ಲಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ಸೊಗಸಾದ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ದೊಡ್ಡ ಡಿಸ್‌ಪ್ಲೇ ಮತ್ತು ಉತ್ತಮ ವಿನ್ಯಾಸದೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ 95,999 ರೂ. ಬದಲಿಗೆ 84,999 ರೂ.ಗೆ ಖರೀದಿಸಬಹುದು.

2 /5

Vivo X70 Pro+: ಈ Vivo ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ತೆಳುವಾದ ಮತ್ತು ಹಗುರವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಬಾಗಿದ ಡಿಸ್‌ಪ್ಲೇ ಮತ್ತು ಪ್ಯಾನೆಲ್‌ನೊಂದಿಗೆ ಫೋನ್‌ಗೆ ಮ್ಯಾಟ್ ಫಿನಿಶ್ ನೀಡಲಾಗಿದೆ. ಸ್ಟ್ರಾಂಗ್ ಸ್ಟೋರೇಜ್ ಹೊಂದಿರುವ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 84,990 ರೂ. ಬದಲಿಗೆ 79,990 ರೂ.ಗೆ ಲಭ್ಯವಿದೆ.

3 /5

iPhone 13 Mini: ಆಪಲ್‌ನ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್‌ನ ಚಿಕ್ಕ ಆವೃತ್ತಿ iPhone 13 Mini 5 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಗಾತ್ರದಲ್ಲಿ ತುಂಬಾ ದೊಡ್ಡದಲ್ಲ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 69,900 ರೂ.ಗೆ ಖರೀದಿಸಬಹುದು. ಇದರ ಮೇಲೆ ವಿನಿಮಯ ಕೊಡುಗೆ ಸಹ ಲಭ್ಯವಿದೆ.

4 /5

Oppo Reno 6 Pro 5G: Oppo ಕಂಪನಿಯ Oppo Reno 6 Pro 5G ಸ್ಮಾರ್ಟ್‌ಫೋನ್ ತುಂಬಾ ಸೊಗಸಾಗಿದೆ. ಇದರ ವಿನ್ಯಾಸವು ಅದ್ಭುತವಾಗಿದ್ದು, ಗ್ರಾಹಕರಿಗೆ ಬಹುಇಷ್ಟವಾಗಿದೆ. ಇದರ ಹಿಂದಿನ ಪ್ಯಾನೆಲ್‌ನ ಮ್ಯಾಟ್ ಫಿನಿಶ್ ಮತ್ತು ಪ್ರೀಮಿಯಂ ನೋಟವು ಇದನ್ನು ವಿಶೇಷವಾಗಿಸುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 45,990 ರೂ. ಬದಲಿಗೆ 41,990 ರೂ.ಗೆ ಖರೀದಿಸಬಹುದು.

5 /5

OnePlus Nord 2 Pac-Man: ಈ OnePlus ಸ್ಮಾರ್ಟ್‌ಫೋನ್ OnePlus Nord 2 ನಂತೆ ಕಾಣುತ್ತದೆ. ಆದರೆ ಇದರ ಹಿಂದಿನ ಫಲಕವು Pac-Man-ಶೈಲಿಯ ವಿನ್ಯಾಸವನ್ನು ಹೊಂದಿದೆ. ಇದು ಕತ್ತಲೆಯಲ್ಲಿ ಹೊಳೆಯುತ್ತದೆ. ಇದು ಈ ಫೋನಿನ ಅಂದವನ್ನು ಹೆಚ್ಚಿಸುತ್ತದೆ. ನೀವು ಇದನ್ನು Amazonನಲ್ಲಿ 36,999 ರೂ.ಗೆ ಖರೀದಿಸಬಹುದು.