ಹಿಂದಿನ ಕಾಲಕ್ಕೆ ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್ ಹೋಲಿಸಬಹುದಾದರೆ..!

ಇಂದು ದೂರದಲ್ಲಿರುವ  ವ್ಯಕ್ತಿಯೊಂದಿಗೆ ಸೆಕೆಂಡುಗಳಲ್ಲಿ ಸಂಭಾಷಣೆ ಮಾಡಬಹುದು. ಆದರೆ ಹಿಂದಿನ ಕಾಲದಲ್ಲಿ, ಪತ್ರಗಳನ್ನು ಕಳುಹಿಸುವ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ಕಾಲದಲ್ಲಿ ಮನೆಯಲ್ಲಿ ಟಿವಿ ಇರುವುದೇ ದೊಡ್ಡ ವಿಷಯ, ಈಗ ಮೊಬೈಲ್‌ನಲ್ಲಿ ನಮಗೆ ಬೇಕಾದ್ದನ್ನು ನೋಡಬಹುದು.

ಕಾಲಾನಂತರದಲ್ಲಿ, ತಂತ್ರಜ್ಞಾನವು ಸಂಪೂರ್ಣವಾಗಿ ಬದಲಾಗಿದೆ. ಇಂದಿನ ಕಾಲದಲ್ಲಿ ನಮಗೆ ಏನೇ ಬೇಕಿದ್ದರೂ ಎಲ್ಲವೂ ಕೈಬೆರಳುಗಳ  ತುದಿಯಲ್ಲಿಯೇ ಇದೆ. ಕರೆ ಸಂದೇಶಗಳು ಅಥವಾ ಹಾಡುಗಳನ್ನು ಕೇಳಲು ಅಥವಾ ನಮಗೆ ಬೇಕಾದ್ದನ್ನು ಕ್ಷಣ ಮಾತ್ರದಲ್ಲಿ ನೋಡಬಹುದು.  ಇಂದು ದೂರದಲ್ಲಿರುವ  ವ್ಯಕ್ತಿಯೊಂದಿಗೆ ಸೆಕೆಂಡುಗಳಲ್ಲಿ ಸಂಭಾಷಣೆ ಮಾಡಬಹುದು. ಆದರೆ ಹಿಂದಿನ ಕಾಲದಲ್ಲಿ, ಪತ್ರಗಳನ್ನು ಕಳುಹಿಸುವ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ಕಾಲದಲ್ಲಿ ಮನೆಯಲ್ಲಿ ಟಿವಿ ಇರುವುದೇ ದೊಡ್ಡ ವಿಷಯ, ಈಗ ಮೊಬೈಲ್‌ನಲ್ಲಿ ನಮಗೆ ಬೇಕಾದ್ದನ್ನು ನೋಡಬಹುದು. ಟಾಕೀಸ್‌ನಲ್ಲಿ ಹೊಸ ಸಿನಿಮಾಗಳನ್ನು ತೋರಿಸಲಾಗುತ್ತಿತ್ತು, ಈಗ ಯಾವುದೇ ಸಿನಿಮಾವನ್ನು ಯೂಟ್ಯೂಬ್‌ನಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ. ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಜಿಮೇಲ್‌ನಂತಹ ಪ್ಲಾಟ್‌ಫಾರ್ಮ್‌ಗಳು ಹಳೆಯ ದಿನಗಳಲ್ಲಿ ಇದ್ದಿದ್ದರೆ ಅವು ಹೇಗೆ ಇರುತ್ತಿದ್ದವು ಎಂದು ಊಹಿಸಿ. ಜನಪ್ರಿಯ ಗ್ರಾಫಿಕ್ ಡಿಸೈನರ್ ಲುಲಿ ಕಿಬುಡಿ ಚಿತ್ರಗಳ ಮೂಲಕ ಹೇಳಿದ್ದಾರೆ. ನೋಡೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

ಯೂಟ್ಯೂಬ್ ಇಂದಿನ ಕಾಲದಲ್ಲಿ ಹೆಚ್ಚು ಬಳಸುವ ವೀಡಿಯೊ ವೇದಿಕೆಯಾಗಿದೆ. ಹಿಂದಿನ ಕಾಲದಲ್ಲಿ ಯೂಟ್ಯೂಬ್ ಇದ್ದಿದ್ದರೆ ಟಿವಿ ಅಂತೆಯೇ ಇರುತ್ತಿತ್ತೇನೋ... ಮುಂದಿನ ವೀಡಿಯೊವನ್ನು ವೀಕ್ಷಿಸಲು, ಟಿವಿ ಬಟನ್ ಅನ್ನು ಒತ್ತಬೇಕಾಗಿತ್ತೇನೋ..

2 /5

ಇಂದಿನ ಕಾಲದಲ್ಲಿ ವಾಟ್ಸಾಪ್ ಅನ್ನು ಅತಿ ಹೆಚ್ಚು ಬಳಸಲಾಗುತ್ತಿದೆ. ಈ ಅಪ್ಲಿಕೇಶನ್‌ನೊಂದಿಗೆ ಚಾಟ್‌ಗಳು, ಕರೆಗಳು ಮತ್ತು ವೀಡಿಯೊ ಕರೆಗಳನ್ನು ಕ್ಷಣಾರ್ಧದಲ್ಲಿ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ವಾಟ್ಸಾಪ್ ಬಂದಿದ್ದರೆ ಟೆಲಿಫೋನ್‌ನಂತೆ ಇರುತ್ತಿತ್ತೇನೋ... ಯಾರಿಗಾದರೂ ಸಂದೇಶವನ್ನು ತಲುಪಿಸಲು, ಅದನ್ನು ದೂರವಾಣಿಯಿಂದಲೇ ಕರೆ ಮಾಡಿ ತಲುಪಿಸಬೇಕಾಗಿತ್ತು.

3 /5

ಯಾವುದೇ ಅಧಿಕೃತ ಮೇಲ್‌ಗಾಗಿ ಜಿಮೇಲ್ ಅನ್ನು ಬಳಸಲಾಗುತ್ತದೆ. ಜಿಮೇಲ್ ಎಲ್ಲವನ್ನೂ ಸುಲಭಗೊಳಿಸಿದೆ. ಅಧಿಕೃತ ಕೆಲಸ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಹಿಂದಿನ ದಿನಗಳಲ್ಲಿ ಜಿಮೇಲ್ ಇದ್ದಿದ್ದರೆ ಅದು ಸಹ ಪತ್ರಗಳಂತೆ ಇರುತ್ತಿತ್ತು ಎಂದು ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. 

4 /5

ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಸುಲಭವಾಗಿ ಹಂಚಿಕೊಳ್ಳಬಹುದು. ಹಿಂದಿನ ದಿನಗಳಲ್ಲಿ ಫೋಟೋ ಆಲ್ಬಮ್‌ಗಳ ಯುಗವಿತ್ತು. ಆ ಕಾಲದಲ್ಲಿ ಫೇಸ್ ಬುಕ್ ಬಂದಿದ್ದರೆ ಅದು ಫೋಟೋ ಆಲ್ಬಂ ರೂಪ ಪಡೆಯುತ್ತಿತ್ತು ಎಂದೆನಿಸುತ್ತದೆ.

5 /5

ನೆಟ್‌ಫ್ಲಿಕ್ಸ್ ಅತ್ಯಂತ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆಗಿದೆ. ಹಿಂದಿನ ದಿನಗಳಲ್ಲಿ ವಿಸಿಆರ್ ಸಹಾಯದಿಂದ ಚಲನಚಿತ್ರವನ್ನು ವೀಕ್ಷಿಸಲಾಗುತ್ತಿತ್ತು. ಆ ಕಾಲದಲ್ಲಿ ನೆಟ್‌ಫ್ಲಿಕ್ಸ್ ಇದ್ದಿದ್ದರೆ ಅದು ಕ್ಯಾಸೆಟ್‌ನ ರೂಪ ಪಡೆದು ಜನ ಕ್ಯಾಸೆಟ್ ಖರೀದಿಸಿ ಚಿತ್ರ ನೋಡುತ್ತಿದ್ದರು.