ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್ ರಶ್ಮಿಕಾ‌ ಮಂದಣ್ಣ..!

Published: Aug 02, 2024, 07:05 PM IST|Updated: Aug 02, 2024, 07:05 PM IST

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2, ಸಿಕಂದರ್, ಚಾವಾ, ದಿ ಗರ್ಲ್ ಫ್ರೆಂಡ್, ಕುಬೇರುಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸುಂದರಿ ಕಳೆದ ಕೆಲವು ದಿನಗಳಿಂದ ನಟ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮೇಲಾಗಿ ಅವರಿಬ್ಬರು ಟ್ರಿಪ್‌ ಹೋದಾಗಲೂ ಒಟ್ಟಾಗಿ ಸಿಕ್ಕಿಬಿದ್ದ ನಿದರ್ಶನಗಳೂ ಸಾಕಷ್ಟಿವೆ.

 

1/9

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2, ಸಿಕಂದರ್, ಚಾವಾ, ದಿ ಗರ್ಲ್ ಫ್ರೆಂಡ್, ಕುಬೇರುಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸುಂದರಿ ಕಳೆದ ಕೆಲವು ದಿನಗಳಿಂದ ನಟ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮೇಲಾಗಿ ಅವರಿಬ್ಬರು ಟ್ರಿಪ್‌ ಹೋದಾಗಲೂ ಒಟ್ಟಾಗಿ ಸಿಕ್ಕಿಬಿದ್ದ ನಿದರ್ಶನಗಳೂ ಸಾಕಷ್ಟಿವೆ.

 

2/9

ಆದರೆ ಈ ಸುಂದರಿ ಇತ್ತೀಚೆಗೆ ಇಂಡಿಯನ್ ಐಡಲ್ ಗಾಯನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

 

3/9

ಪುಷ್ಪಾ ಸಿನಿಮಾದ ಬಗ್ಗೆ ಮಾತನಾಡುತ್ತಾ, "ಪುಷ್ಪಾ-1 ಗಿಂತ ಪುಷ್ಪಾ-2 ಮಹತ್ವವಾಗಿದೆ" ಎಂದು ಹೇಳಿದ್ದರು.

 

4/9

"ಹಾಗೆಯೇ ಈ ಸಿನಿಮಾ ಬಂಗಾರ ಮಾಯೆನೆ ಶ್ರೀವಲ್ಲಿ ಮತ್ತು ಡೀಯರ್‌ ಕಾಮ್ರೆಡ್‌ ಸಿನಿಮಾದ ʼಕಡಲಲ್ಲೇʼ ಹಾಡುಗಳು ನನಗೆ ತುಂಬಾ ಇಷ್ಟ. ಆದರೆ ಗೀತ ಗೋವಿಂದಂ ಚಿತ್ರದ ʼವಚ್ಚಿಂದಮ್ಮʼ ಹಾಡು ನನ್ನ ಹೃದಯ ಮುಟ್ಟಿದ ಹಾಡು" ಎಂದು ರಶ್ಮಿಕಾ ಹೇಳಿದ್ದಾರೆ.

 

5/9

ಅದೇ ಕಾರ್ಯಕ್ರಮದಲ್ಲಿ ನಿರೂಪಕ ಶ್ರೀರಾಮ್ ಚಂದ್ರ, ನಿಮಗೆ ಸಹನಟ ಅಥವಾ ಸಹೋದ್ಯೋಗಿ ಮೇಲೆ ಎಂದಾದರೂ ಪ್ರೀತಿ ಅಥವಾ ಕ್ರಶ್  ಆಗಿದೆಯೇ ಎಂದು ಕೇಳಿದಾಗ, ರಶ್ಮಿಕಾ ಮಂದಣ್ಣ ಹೌದು ಎಂದು ಉತ್ತರಿಸಿದ್ದಾರೆ.

 

6/9

ಅದೇ ಸಂದರ್ಭದಲ್ಲಿ ಅಲ್ಲಿದ್ದವರೆಲ್ಲಾ ನಕ್ಕರು. ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಾತನಾಡುತ್ತಿದ್ದಾರೆ ಎಂದು ಎಲ್ಲರೂ ಫಿಕ್ಸ್ ಆಗಿದ್ದರು. ಯಾಕೆಂದರೆ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದರು.

 

7/9

ಇನ್ನು ಈ ಮೂಲಕ ವಿಜಯ್‌ ಮೇಲೆ ಪ್ರೀತಿ ಇರೋದು ನಿಜ ಎಂಬುದನ್ನು ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ‌

 

8/9

ಇನ್ನೊಂದೆಡೆ ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರ ʼವಿಡಿ 12ʼ  ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಈ ಆಕ್ಷನ್ ಡ್ರಾಮಾ ಸಿನಿಮಾ ಮುಂದಿನ ವರ್ಷ ಮಾರ್ಚ್ 28, 2025 ರಂದು ಬಿಡುಗಡೆಯಾಗಲಿದೆ.

 

9/9

ಇದೀಗ ವಿಜಯ್ ಅವರ ಪೋಸ್ಟರ್‌ʼಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದು ಬೆಂಕಿಯ ಎಮೋಜಿ ಜೊತೆ "ಮ್ಯಾಡ್ನೆಸ್" ಎಂದು ಬರೆದಿದ್ದಾರೆ. ಸದ್ಯ ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.