Actress Julie Lakshmi: ಕನ್ನಡ ಚಿತ್ರರಂಗದ ಹಿರಿಯ ನಟಿ ಲಕ್ಷ್ಮೀ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಒಲಿದು ಬಂದಿದೆ.. ಹುಟ್ಟಿದ್ದು ಆಂಧ್ರಪ್ರದೇಶದಲ್ಲಾಗಿದ್ದದರಿಂದ ಇವರ ಮೂಲ ಭಾಷೆ ತೆಲುಗು.. ಸೌತ್ ಇಂಡಿಯನ್ ಸ್ಟಾರ್ ಎಂದೇ ಖ್ಯಾತಿ ಪಡೆದ ಇವರಿಗೂ ಜೀವನದಲ್ಲಿ ಸಾಷಕ್ಟು ಏರಿಳಿತಗಳು ಎದುರಾಗಿವೆ.. ಅದನ್ನೆಲ್ಲ ಎದುರಿಸಿ ಬೆಳೆದ ನಟಿ ಇಂದು ಸ್ಯಾಂಡಲ್‌ವುಡ್‌ನ ಮೈಲಿಗಲ್ಲಾಗಿದ್ದಾರೆ..
ಕನ್ನಡದ ಹಿರಿಯ ನಟಿ ಜೂಲಿ ಲಕ್ಷ್ಮೀ ಕ್ನನಡ, ತೆಲುಗು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಲಾವಿದೆ... ಬರೋಬ್ಬರಿ 150ಕ್ಕೂ ಸಿನಿಮಾಗಳ ಪಾತ್ರಕ್ಕೆ ಜೀವತುಂಬಿದ ಇವರ ಜೀವನದಲ್ಲೂ ಬಿರುಗಾಳಿಗಳು ಉಂಟಾಗಿದ್ದವು..
ನಟಿ ಜೂಲಿ ಲಕ್ಷ್ಮೀ ಎಂದರೇ ತಕ್ಷಣ ನೆನಪಾಗುವುದು 80 90 ರ ದಶಕದ ಸಾಲು ಸಾಲು ಸಿನಿಮಾಗಳು.. ಯಾವುದೇ ಪಾತ್ರವಾದರೂ ಅದಕ್ಕೆ ವಿಭಿನ್ನವಾಗಿ ಜೀವತುಂಬುತ್ತಿದ್ದ ಮಹಾನ್ ನಟಿ ಇವರು.. ತಮ್ಮದೇ ಆದ ವಿಶಿಷ್ಟ ಅಭಿಮಾನಿಗಳ ಬಳಕಗ ಹೊಂದಿರುವ ಜೂಲಿ ಲಕ್ಷ್ಮಿ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಕಾಣಲಿಲ್ಲ..
ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹೆಜ್ಜೆಯಲ್ಲಿ ತಪ್ಪಿದ್ದಾಕ್ಕಾಗಿ ಒಂದಲ್ಲ ಎರಡಲ್ಲ.. ಮೂರು ಮದುವೆಯಾದರು.. ಆದರೆ ಸದ್ಯ ಯಾರು ಇಲ್ಲದೇ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ.. ನಟಿ ಲಕ್ಷ್ಮಿ ಯವರಿಗೆ ಚಿತ್ರರಂಗ ಹೊಸತಾಗಿರಲಿಲ್ಲ ಏಕೆಂದರೆ ಅವರ ತಂದೆ-ತಾಯಿಇಬ್ಬರೂ ಬಣ್ಣದ ಲೋಕದಲ್ಲಿದ್ದರು..
ಹೀಗೆ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಒಂದೆರಡೇ ವರ್ಷದಲ್ಲಿ ಲಕ್ಷ್ಮಿ ಅವರಿಗೆ ಭಾಸ್ಕ ರ್ ಎಂಬುವವರ ಜೊತೆ ಮದುವೆಯಾಗುತ್ತದೆ.. ಇಬ್ಬರು ದಂಪತಿಗೆ ಒಬ್ಬ ಮಗಳು ಜನಿಸುತ್ತಾಳೆ.. ಬಳಿಕ ಇವರು ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆಯುತ್ತಾರೆ..
ಕೆಲ ಸಮಯದ ನಂತರ ದಾಂಪತ್ಯದಲ್ಲಿ ಉಂಟಾದ ಏರುಪೇರಿನಿಂದಾಗಿ ಮೊದಲ ಪತಿಯಿಂದ ದೂರವಾಗುತ್ತಾರೆ.. ನಂತರ ಮಲಯಾಳಂನ ಖ್ಯಾತ ನಟ ಮೋಹನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.. ಆದರೆ ಈ ಸಂಬಂಧವೂ ಕೆಲವೇ ವರ್ಷಗಳಲ್ಲಿ ಮುರಿದುಬಿತ್ತು..
ನಂತರ ನಟಿ ನಿರ್ದೇಶಕ ಶಿವ ಚಂದ್ರನ್ ಅವರನ್ನು ಪ್ರೀತಿಸಿ ಅವರೊಂದಿಗೆ ಮತ್ತೊಂದು ಮದುವೆಯಾಗುತ್ತಾರೆ.. ಅಲ್ಲದೇ ಹಲವಾರು ಟೀಕೆಗಳಿಗೂ ಒಳಗಾಗುತ್ತಾರೆ.. ಆದರೆ ಈ ಸಂಬಂಧವೂ ಅವರಿಂದ ದೂವಾಗುತ್ತದೆ.. ಮೂರು ಮದುವೆಯಾದರೂ ನಟಿಗೆ ನೆಮ್ಮದಿಯ ಜೀವನವೇ ಸಿಗದೇ ಸದ್ಯ ಒಬ್ಬಂಟಿಯಾಗಿಯೇ ಬದುಕುತ್ತಿದ್ದಾರೆ..