ಕುಂಭದಲ್ಲಿ ಶನಿಯ ವಕ್ರ ಸಂಚಾರ: ಈ 3 ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ

Saturn Retrograde in Aquarius: ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿಯು ವಕ್ರ ಸ್ಥಾನದಲ್ಲಿ ಸಂಚರಿಸಲಿದೆ. ಅದು ನವೆಂಬರ್‌ವರೆಗೆ ಈ ವಕ್ರ ಸ್ಥಾನದಲ್ಲಿರುತ್ತದೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಅನ್ನೋದರ ಬಗ್ಗೆ ತಿಳಿಯಿರಿ

Saturn Retrograde in Aquarius: ಸೌರವ್ಯೂಹದಲ್ಲಿ ಒಂದು ನಿರ್ಧಿಷ್ಟ ಸಮಯದಲ್ಲಿ ಗ್ರಹಗಳು ಸಂಚಾರ ನಡೆಸುತ್ತವೆ. ಈ ವೇಳೆ ೯ ಗ್ರಹಗಳು ಸಹ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳು ಸಂಚಾರದ ವೇಳೆ ರಾಶಿ ಬದಲಾಯಿಸುವುದರ ಜೊತೆಗೆ ಹಿಮ್ಮುಖವಾಗಿಯೂ ಪ್ರಯಾಣಿಸುತ್ತವೆ. ಗ್ರಹಗಳು ವಕ್ರ ಸ್ಥಾನದಲ್ಲಿ ಸಂಚರಿಸಿದಾಗ ಅದರ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ. ನವಗ್ರಹಗಳ ಪೈಕಿ ಶನಿಯು 30 ವರ್ಷಗಳ ನಂತರ ತನ್ನ ಮೂಲತ್ರಿಕೋನ ರಾಶಿ ಕುಂಭದಲ್ಲಿ ಸಂಚರಿಸಲಿದ್ದಾನೆ. ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿಯು ವಕ್ರ ಸ್ಥಾನದಲ್ಲಿ ಸಂಚರಿಸಲಿದೆ. ಅದು ನವೆಂಬರ್‌ವರೆಗೆ ಈ ವಕ್ರ ಸ್ಥಾನದಲ್ಲಿರುತ್ತದೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಮತ್ತು ಇದರಿಂದ ಯಾರಿಗೆ ಲಾಭವಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /3

ಕುಂಭ ರಾಶಿಯಲ್ಲಿ ಶನಿಯ ಹಿಮ್ಮೆಟ್ಟುವಿಕೆಯಿಂದ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಶನಿಯು ಮೇಷ ರಾಶಿಯ 11ನೇ ಮನೆಗೆ ಸಾಗಲಿದ್ದು, ಈ ಕಾರಣದಿಂದ ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಇದು ಆದಾಯದ ಹೊಸ ಮೂಲಗಳನ್ನು ಸೃಷ್ಟಿಸಲಿದೆ. ಹೂಡಿಕೆಯಿಂದ ಉತ್ತಮ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಗೌರವ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.  

2 /3

ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆಯು ಮಿಥುನ ರಾಶಿಯ ಜನವರಿಗೆ ಆರ್ಥಿಕ ಲಾಭವನ್ನು ತಂದುಕೊಡಲಿದೆ. ಶನಿಯು ಮಿಥುನ ರಾಶಿಯ 9ನೇ ಮನೆಗೆ ಸಾಗಲಿದೆ. ಪರಿಣಾಮ ಜೂನ್ ತಿಂಗಳಿನಿಂದ ಈ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ. ನಿಮ್ಮ ಬಾಕಿ ಕೆಲಸಗಳನ್ನು ಪೂರ್ಣವಾಗುತ್ತವೆ. ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ನಿಮಗೆ ಶುಭ ಸುದ್ದಿಗಳು ದೊರೆಯಲಿವೆ.   

3 /3

ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆಯಿಂದ ಮಕರ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಶನಿಯು ಮಕರ ರಾಶಿಯ 2ನೇ ಮನೆಯಲ್ಲಿ ಹಿಮ್ಮುಖವಾಗಲಿದೆ. ಪರಿಣಾಮ ಜೂನ್ ತಿಂಗಳಿನಿಂದ ಈ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹಣದ ಲಾಭ ಸಿಗಲಿದೆ.