ಸಾಡೇಸಾತಿ ನಡೆಯುತ್ತಿದ್ದರೂ ಈ ರಾಶಿಯವರ ಮೇಲೆ ಕೃಪಾ ದೃಷ್ಟಿಯೇ ಬೀರುತ್ತಿರುತ್ತಾನೆ ಶನಿದೇವ! ಎಂದಿಗೂ ಸೋಲಲು ಬಿಡುವುದಿಲ್ಲ

ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವುದು ಕೂಡಾ ಸರಿಯಲ್ಲ.  ಶನಿಯ ಸ್ಥಿತಿಯು ಜಾತಕದಲ್ಲಿ ಶುಭವಾಗಿದ್ದರೆ, ಆಗ ವ್ಯಕ್ತಿಯು ರಾಜಪಥ, ವೈಭವ, ಸಂಪತ್ತು, ಆಸ್ತಿ ಮತ್ತು ಗೌರವವನ್ನು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ. 
 

ಬೆಂಗಳೂರು : ನವಗ್ರಹಗಳ ಪೈಕಿ ಜನ ಅತ್ಯನ್ತ ಭಯ ಪಡುವ ಗ್ರಹ ಎಂದರೆ ಅದು ಶನಿ ಗ್ರಹ. ಜಾತಕದಲ್ಲಿ ಶನಿ ದೆಸೆ ಆರಂಭವಾದರೆ ಜೀವನವೇ ಅಲ್ಲೋಲ ಕಲ್ಲೋಲ ಆಗುವುದು ಎನ್ನುವ ಭಯ ಕಾಡುತ್ತದೆ. ಶನಿಯ ವಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಂತ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವುದು ಕೂಡಾ ಸರಿಯಲ್ಲ. ಶನಿಯ ಕಾರಣದಿಂದಲೇ ವ್ಯಕ್ತಿ ಯಶಸ್ಸಿನ ಮೆಟ್ಟಿಲು ಹತ್ತುವುದೂ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಶನಿಯು ಎಲ್ಲಾ ಗ್ರಹಗಳಿಗೆ ಹೋಲಿಸಿದರೆ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದರಿಂದಾಗಿ ಈ ಗ್ರಹದ ಪರಿಣಾಮ ಜಾತಕದ ಮೇಲೆ ದೀರ್ಘ ಕಾಲದವರೆಗೆ ಉಳಿಯುತ್ತದೆ. ಯಾರ ಜಾತಕದಲ್ಲಿ ಶನಿಯ ಸಾಡೇ ಸಾತಿ ಮತ್ತು ಧೈಯಾ ಇರುತ್ತದೆಯೋ ಅವರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

2 /6

ಮಕರ ಮತ್ತು ಕುಂಭ ರಾಶಿಯ ಅಧಿಪತಿ ಶನಿ.  ದ್ವಾದಶ ರಾಶಿಗಳ ಪೈಕಿ ಕೆಲವು ರಾಶಿಯವರ ಮೇಲೆ ಶನೀಶ್ವರ ವಿಶೇಷ ಕೃಪೆ ತೋರುತ್ತಾನೆ. ಸಾಡೇ ಸಾತಿ ಮತ್ತು ಎರದೂವರೆ ವರ್ಷದ ಶನಿ ದೆಸೆ ನಡೆಯುತ್ತಿದ್ದರೂ ಈ ರಾಶಿಯವರನ್ನು ಶನಿ ಮಹಾತ್ಮ ವಿಶೇಷವಾಗಿ ಕಾಯುತ್ತಾನೆ.

3 /6

ಮಕರ ರಾಶಿ : ಶನಿ ದೇವರ ನೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಮೊದಲನೆಯದ್ದು. ಈ ರಾಶಿಯ ಅಧಿಪತಿ ಶನಿ ದೇವನೇ. ಶನಿಯು ಮಕರ ರಾಶಿಯವರನ್ನು ಸಾಡೇ ಸಾತಿಯ ಸಂದರಭಾದಲ್ಲಿಯೂ ಹೆಚ್ಚು ಕಾಡುವುದಿಲ್ಲ. ಮಕರ ರಾಶಿಯವರು ಶನಿದೇವನನ್ನು ಆರಾಧಿಸುತ್ತಿದ್ದರೆ ಜೀವನದಲ್ಲಿ ಸೋಲೇ ಇಲ್ಲದೆ ಮುಂದುವರಿಯುವುದು ಸಾಧ್ಯವಾಗುತ್ತದೆ.  ಶನಿದೆಸೆ ಇವರಿಗೆ ತೊಂದರೆ ನೀಡುವುದಿಲ್ಲ.

4 /6

ತುಲಾ ರಾಶಿಯನ್ನು ಶನಿ ದೇವನ ಅತ್ಯಂತ ಪ್ರಿಯ ರಾಶಿ ಎಂದು ಪರಿಗಣಿಸಲಾಗಿದೆ. ಇವರ ಜೀವನದಲ್ಲಿ ಏನೇ ಸಮಸ್ಯೆ ಎದುರಾದರೂ ಶನಿ ದೇವನ ಕೃಪೆಯಿಂದಾಗಿ ಆ ಸಮಸ್ಯೆಗಳು ಸರಿದು ಬಿಡುತ್ತವೆ. ಈ ರಾಶಿಯ ಜನರು ಎಂದಿಗೂ ದೀರ್ಘಕಾಲ ತೊಂದರೆ ಅನುಭವಿಸಬೇಕಾಗಿಲ್ಲ. 

5 /6

ದೇವಗುರು  ಧನು ರಾಶಿಯ ಅಧಿಪತಿ. ಶನಿ ಮತ್ತು ಗುರುಗಳು ಪರಸ್ಪರ ಸ್ನೇಹ ಪ್ರಜ್ಞೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ, ಶನಿದೇವನು ಧನು ರಾಶಿಯವರ ಮೇಲೆ ಕೂಡಾ ದಯೆ ತೋರುತ್ತಾನೆ. ಶನಿದೇವನು ಧನು ರಾಶಿಯವರಿಗೆ ಸುಖ-ಸಮೃದ್ಧಿ ಮತ್ತು ಸಂಪತ್ತನ್ನು ದಯಪಾಲಿಸುತ್ತಾನೆ.  

6 /6

ವೃಷಭ ರಾಶಿಯ ಮೇಲೂ ಶನಿದೇವನ ವಿಶೇಷ ಕೃಪೆ ಇರುತ್ತದೆ . ಈ ರಾಶಿಯ ಅಧಿಪತಿ ಗ್ರಹ ಶುಕ್ರ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ಯಾವಾಗಲೂ ವೃಷಭ ರಾಶಿಯವರ ಮೇಲೆ ತನ್ನ ಆಶೀರ್ವಾದವನ್ನು ಕರುಣಿಸುತ್ತಲೇ ಇರುತ್ತಾನೆ.