ಈ ರಾಶಿಯವರ ಜೀವನವನ್ನು ಹಣದ ರಾಶಿಯಿಂದ ತುಂಬಲಿದ್ದಾನೆ ಶನಿ

 

 

ಬೆಂಗಳೂರು : 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಕ್ರಮಿಸಿರುವ ಶನಿ ಇದೀಗ ಜನವರಿ 30, 2023 ರಂದು, ಅದೇ ರಾಶಿಯಲ್ಲಿ ಅಸ್ತಮಿಸಿದೆ. ಶನಿಯ  ಚಲನೆಯಲ್ಲಿನ ಈ ಬದಲಾವಣೆ ಎಲ್ಲಾ 12 ರಾಶಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.  ಈ ಪರಿಣಾಮವಾಗಿ 3 ರಾಶಿಯವರ ಜೀವನದಲ್ಲಿ ಎಲ್ಲವೂ  ಫಲಪ್ರದವಾಗಿರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮೇಷ ರಾಶಿ : ಶನಿಯ ಸಂಕ್ರಮಣ ಮತ್ತು ಶನಿಯ ಅಸ್ತ ಮೇಷ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಶನಿಯು ಈ  ರಾಶಿಯವರ ವೃತ್ತಿಜೀವನದಲ್ಲಿ ಬಲವಾದ ಲಾಭವನ್ನು ನೀಡಲಿದ್ದಾನೆ. ಬಡ್ತಿಯ ಅವಕಾಶವಿರುತ್ತದೆ. ಆದಾಯ ಹೆಚ್ಚಲಿದೆ. ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಬಯಸುವವರ ಆಸೆ ಈಡೇರುತ್ತದೆ. 

2 /4

ವೃಷಭ ರಾಶಿ :  ವೃಷಭ ರಾಶಿಯವರಿಗೆ ಶನಿ ಅಸ್ತ ಬಹಳಷ್ಟು ಲಾಭಗಳನ್ನು  ತಂದು ಕೊಡಲಿದೆ. ಇವರು ಜೀವನದಲ್ಲಿ ದೊಡ್ಡ ಮಟ್ಟದ ಅವಕಾಶಗಳನ್ನು ಪಡೆಯಲಿದ್ದಾರೆ.  ಇವರ ಆದಾಯದಲ್ಲಿ ಹೆಚ್ಚಳವಾಗಲಿದೆ. ವೃತ್ತಿಜೀವನದಲ್ಲಿ ಬಹಳ ದಿನಗಳಿಂದ ಕಾಯುತ್ತಿದ್ದ ಯಶಸ್ಸು  ಬಂದೊದಗಲಿದೆ. ಪ್ರಭಾವ ಮತ್ತು ಗೌರವ ಹೆಚ್ಚಾಗುತ್ತದೆ. ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಸಮಸ್ಯೆಗಳು ತಾನಾಗಿಯೇ ದೂರವಾಗುತ್ತವೆ.   

3 /4

ಕನ್ಯಾ ರಾಶಿ :  ಅಸ್ತಮ ಶನಿಯು ಕನ್ಯಾ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಶತ್ರುಗಳು ಜರ್ಜರಿತರಾಗುತ್ತಾರೆ. ರೋಗಗಳಿಂದ ಮುಕ್ತಿ ದೊರೆಯುತ್ತದೆ. ಕುಟುಂಬದ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ. ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಉದ್ಯೋಗ-ವ್ಯವಹಾರಗಳಿಗೆ ಸಮಯ ಉತ್ತಮವಾಗಿರುತ್ತದೆ.   

4 /4

ಮಕರ ರಾಶಿ :   ಶನಿ ಸಂಕ್ರಮಣ ಮತ್ತು ಶನಿ ಅಸ್ತ ಈ ಎರಡೂ ಬದಲಾವಣೆಗಳು ಮಕರ ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)