Shash Mahapurush Rajyog: ಶನಿ ಉದಯದಿಂದ ಶಶ ಮಹಾಪುರುಷ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

Shani Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನ ಉದಯದಿಂದ ಶಶ ಮಹಾಪುರುಷ ರಾಜಯೋಗ ರೂಪುಗೊಂಡಿದೆ. ಇದರಿಂದ ಮೂರು ರಾಶಿಗಳ ಜಾತಕದವರಿಗೆ ಅಪಾರ ಧನ ಲಾಭ ಹಾಗೂ ಉನ್ನತಿ ಪ್ರಾಪ್ತಿಯಾಗಲಿದೆ. 
 

Shash Mahapurush Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ಕಾಲಾಂತರದಲ್ಲಿ ಉದಯಿಸುತ್ತವೆ ಮತ್ತು ಅಸ್ತಮಿಸುತ್ತವೆ. ಇದರಿಂದ ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಯಾಗುತ್ತವೆ. ಇವು ಮಾನವ ಜೀವನದ ಮೇಲೆ ಮತ್ತು ದೇಶ ಮತ್ತು ಇಡೀ ವಿಶ್ವದ ಮೇಲೆ ಪ್ರಭಾವ ಬೀರುತ್ತವೆ. ಮಾರ್ಚ್ 9 ರಂದು ಶನಿ ಗ್ರಹ ಉದಯಿಸಿದೆ. ಇದರಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗವು ಎಲ್ಲಾ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಆದರೆ 3 ರಾಶಿಗಳ ಜನರ ಪಾಲಿಗೆ ಇದು ಅತ್ಯಂತ ಸಕಾರಾತ್ಮಕ ಸಾಬೀತಾಗಲಿದೆ, ಅವರಿಗೆ ಈ ರಾಜಯೋಗವು ಅಪಾರ ಧನ ಸಂಪತ್ತು ಮತ್ತು ಉನ್ನತಿಯನ್ನು ನೀಡಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಶೀಘ್ರದಲ್ಲಿಯೇ ಶತ್ರುವಿನ ರಾಶಿ ತೊರೆಯಲಿರುವ ಗ್ರಹಗಳ ರಾಜ, ಯಾರಿಗೆ ಲಾಭ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿ-ಶನಿದೇವನ ಉದಯ ಮೇಷ ರಾಶಿಯವರಿಗೆ ಆರ್ಥಿಕವಾಗಿ ಅತ್ಯಂತ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಏಕಾದಶ ಭಾವದಲ್ಲಿ ಉದಯಿಸಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ನಿಮಗೆ ಇದ್ದಕ್ಕಿದ್ದಂತೆ ಭಾರಿ ಹಣ ಸಿಗುವ ಸಾಧ್ಯತೆ ಇದೆ. ಈ ರಾಜಯೋಗವು ದುಡಿಯುವ ಜನರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಮತ್ತೊಂದೆಡೆ, ಹೂಡಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇದರಿಂದ ಸಾಕಷ್ಟು ವಿತ್ತೀಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.  

2 /3

ಸಿಂಹ ರಾಶಿ-ಶಶ ಮಹಾಪುರುಷ ರಾಜಯೋಗ ನಿರ್ಮಾಣ ನಿಮ್ಮ ಪಾಲಿಗೂ ಕೂಡ ಶುಭಕರವಾಗಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ರೂಪುಗೊಂಡಿದೆ. ಇದು ಪಾರ್ಟ್ನರ್ಶಿಪ್ ಮತ್ತು ವೈವಾಹಿಕ ಜೀವನದ ಸ್ಥಾನವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಮೊದಲಿಗಿಂತ ಉತ್ತಮವಾಗಿರಲಿದೆ. ಅಲ್ಲದೆ, ಪಾರ್ಟ್ನರ್ಶಿಪ್  ಕೆಲಸ ಮಾಡಲು ಈ ಸಮಯ ಸೂಕ್ತವಾಗಿದೆ. ಮತ್ತೊಂದೆಡೆ, ಅವಿವಾಹಿತ ಜನರಿಗೆ ಪ್ರಯತ್ನಪಟ್ಟರೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇದರೊಂದಿಗೆ ಉದ್ಯೋಗ ವೃತ್ತಿಯಲ್ಲಿ ಇರುವವರಿಗೆ  ಬಡ್ತಿ ಸಿಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ನೀವು ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಇದರೊಂದಿಗೆ, ನಿಂತುಹೋದ  ನಿಮ್ಮ ಕೆಲಸವು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ.  

3 /3

ಕುಂಭ ರಾಶಿ-ಶಶ ಮಹಾಪುರುಷ ರಾಜಯೋಗದ ರಚನೆಯಿಂದ ಕುಂಭ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಏಕೆಂದರೆ ನಿಮ್ಮ ರಾಶಿಯ ಲಗ್ನ ಭಾವದಲ್ಲಿ  ಈ ಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಬಾಲಸಂಗಾತಿಯ ಬೆಂಬಲ ಸಿಗಲಿದೆ. ಇದಲ್ಲದೆ ಅವರ ಉನ್ನತಿಯು ಕೂಡ ಈ ಅವಧಿಯಲ್ಲಿ ಸಂಭವಿಸಲಿದೆ. ಕೆಲವು ವ್ಯಾಪಾರ ಒಪ್ಪಂದಗಳು ನಿರ್ಮಾಣಗೊಳ್ಳಲಿವೆ. ಅಲ್ಲದೆ ಆತ್ಮಸ್ಥೈರ್ಯವೂ ಹೆಚ್ಚಾಗಲಿದೆ.  ಈ ಅವಧಿಯಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಸಾಕಷ್ಟು  ಪ್ರಗತಿ ಕಂಡುಬರಬಹುದು. ಸಹಭಾಗಿತ್ವದ ಕೆಲಸವನ್ನು ಪ್ರಾರಂಭಿಸಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ. ಇದೇ ವೇಳೆ ಅವಿವಾಹಿತರ ಕಂಕಣ ಭಾಗ್ಯ ಕೂಡಿಬರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)