Shukra Gochar Effect: ಜ್ಯೋತಿಷ್ಯದಲ್ಲಿ ಸುಖ-ಸಂಪತ್ತು, ಐಶ್ವರ್ಯ, ವೈಭವದ ಅಂಶವೆಂದು ಪರಿಗಣಿಸಲಾಗಿರುವ ಶುಕ್ರನು 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ನಲ್ಲಿ ಎರಡು ಬಾರಿ ರಾಶಿ ಬದಲಾವಣೆ ಮಾಡಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ.
Shukra Gochar Effect: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಗ್ರಹದಲ್ಲಿನ ಸಣ್ಣ ಬದಲಾವಣೆಯೂ ಸಹ ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯದಲ್ಲಿ ಸುಖ-ಸಂಪತ್ತು, ಐಶ್ವರ್ಯ, ವೈಭವದ ಅಂಶವೆಂದು ಪರಿಗಣಿಸಲಾಗಿರುವ ಶುಕ್ರನು 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ನಲ್ಲಿ ಎರಡು ಬಾರಿ ರಾಶಿ ಬದಲಾವಣೆ ಮಾಡಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶುಕ್ರನು 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ನಲ್ಲಿ ಎರಡು ಬಾರಿ ರಾಶಿ ಬದಲಾವಣೆ ಮಾಡಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಮೇಷ ರಾಶಿಯವರ ಅದೃಷ್ಟದ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದಾಗಿ ಮೇಷ ರಾಶಿಯವರು ಈ ತಿಂಗಳು ಶುಕ್ರನ ಕೃಪೆಗೆ ಪಾತ್ರರಾಗಲಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಶುಕ್ರನ ರಾಶಿ ಪರಿವರ್ತನೆಯಿಂದಾಗಿ, ಈ ರಾಶಿಯವರ ಅದೃಷ್ಟವು ಹೊಳೆಯಲಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಹೊಸ ಕೆಲಸಗಳನ್ನು ಆರಂಭಿಸಲು ಮಂಗಳಕರವಾಗಿರುತ್ತದೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ.
ಸಿಂಹ ರಾಶಿ: ಈ ರಾಶಿಯ ಐದನೇ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಐದನೇ ಮನೆಯನ್ನು ಪ್ರೀತಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹಾಗಾಗಿ, ಐದನೇ ಮನೆಯಲ್ಲಿ ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ಹೊತ್ತು ತರಲಿದೆ. ಈ ರಾಶಿಯ ಮಹಿಳೆಯರು ಈ ಸಮಯದಲ್ಲಿ ದೊಡ್ಡ ಕಂಪನಿಯಿಂದ ಉದ್ಯೋಗದ ಆಫರ್ ಪಡೆಯಬಹುದು. ಈ ಅವಧಿಯಲ್ಲಿ ಮಾಧ್ಯಮ, ಫ್ಯಾಷನ್ ಮತ್ತು ಗ್ಲಾಮರ್ ಉದ್ಯಮಕ್ಕೆ ಸಂಬಂಧಿಸಿದ ಜನರು ಹೊಸ ಎತ್ತರಕ್ಕೆ ಏರಬಹುದು.
ವೃಶ್ಚಿಕ ರಾಶಿ: ಐಶಾರಾಮಿ ಜೀವನ ಕಾರಕನಾದ ಶುಕ್ರನು ವೃಶ್ಚಿಕ ರಾಶಿಯ ಎರಡನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಎರಡನೇ ಮನೆಯನ್ನು ಸಂಪತ್ತಿನ ಮನೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ನಲ್ಲಿ ವೃಶ್ಚಿಕ ರಾಶಿಯವರಿಗೆ ವ್ಯವಹಾರಗಳು ವೇಗವನ್ನು ಪಡೆಯಲಿವೆ. ನಿಮ್ಮ ಮಧುರವಾದ ಮಾತುಗಳಿಂದ ದೊಡ್ಡ ಆರ್ಡರ್ ಪಡೆಯುವಲ್ಲಿ ನೀವು ಯಶಸ್ವಿಯಾಗುವಿರಿ. ನಿಮ್ಮ ಮಾತಿನಿಂದಾಗಿ ಯಾರನ್ನೇ ಆದರೂ ಮೋಡಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿ ಇರಲಿದೆ. ಈ ಸಮಯದಲ್ಲಿ ವಿದೇಶ ಪ್ರವಾಸ ಸಾಧ್ಯತೆ ಇದ್ದು, ರಹಸ್ಯ ಸಂಪತ್ತನ್ನು ಪಡೆಯುವ ಅವಕಾಶಗಳು ದಟ್ಟವಾಗಿವೆ.
ಕುಂಭ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಕುಂಭ ರಾಶಿಯವರ ಲಾಭದಾಯಕ ಮನೆಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಪ್ರತಿ ಕಾರ್ಯದಲ್ಲೂ ಕುಟುಂಬ ವರ್ಗದವರು ನಿಮಗೆ ಬೆನ್ನುಲುಬಾಗಿ ನಿಲ್ಲಲಿದ್ದಾರೆ. ವಿತ್ತೀಯ ಲಾಭದಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.