smoking cigarettes and tea together: ಅನೇಕ ಜನರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಅದರ ಜೊತೆಗೆ ಸಿಗರೇಟ್ ಕೂಡ ಸೇದುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂದು ಇನ್ನೂ ಕೆಲವರಿಗೆ ತಿಳಿದಿಲ್ಲ.. ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.
ಅನೇಕ ಜನರು ಸ್ಟೈಲಲ್ಲಿ ನಿಂತು ಸ್ಮೋಕ್ ಮಾಡುತ್ತಾ ಖುಷಿಯಿಂದ ಟೀ ಕುಡಿಯುತ್ತಾರೆ.. ಆ ಒಂದು ಕ್ಷಣದ ಸಂತೋಷ ನಿಮ್ಮ ಇಡೀ ಜೀವನವನ್ನೇ ನಾಶ ಮಾಡಬಹುದೆಂದು ನಿಮಗೆ ತಿಳಿದಿದೆಯೇ?
ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಸಾಮಾನ್ಯವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಒಂದಲ್ಲ ಎರಡಕ್ಕಿಂತ ಹೆಚ್ಚು ಬಾರಿ ಕುಡಿದರೆ ಖಂಡಿತ ಹೃದಯಾಘಾತವಾಗುವ ಸಾಧ್ಯತೆಗಳಿವೆ.
ಟೀ ಜೊತೆಗೆ ಸಿಗರೇಟ್ ಸೇದಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಶೇ.30ರ ವರೆಗೆ ಹೆಚ್ಚಾಗುವುದು ಖಂಡಿತ ಎಂದು ಇತ್ತೀಚಿನ ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಸಿಗರೇಟಿನ ಹೊಗೆಯೊಂದಿಗೆ ಚಹಾದಲ್ಲಿ ವಿಷ ಬೆರೆಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಲಾಗುತ್ತಿದೆ.
ಈ ಎರಡರ ಸಂಯೋಜನೆಯಿಂದ ಬಂಜೆತನ ಸಮಸ್ಯೆ, ಹೊಟ್ಟೆ ಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಶ್ವಾಸಕೋಶ ಕುಗ್ಗುವಿಕೆ, ಜ್ಞಾಪಕ ಶಕ್ತಿ ನಷ್ಟ ಮತ್ತು ಬ್ರೈನ್ ಸ್ಟ್ರೋಕ್ ಅಪಾಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಸೂಚನೆ: ಈ ಲೇಖನದಲ್ಲಿನ ಮಾಹಿತಿಯು ಮನೆಮದ್ದುಗಳನ್ನು ಆಧರಿಸಿದೆ. ವೈದ್ಯರ ಸಲಹೆ ಬಳಿಕ ಅನುಸರಿಸುವುದು ಸೂಕ್ತ. ಜೀ ಕನ್ನಡ ನ್ಯೂಸ್‌ಇದಕ್ಕೆ ಹೊಣೆಯಲ್ಲ.