ಸೂರ್ಯ-ಶುಕ್ರನ ಮೈತ್ರಿಯಿಂದ ರಾಜಭಂಗ ಯೋಗ ನಿರ್ಮಾಣ, ಈ ಜನರಿಗೆ ಸಿಗಲಿದೆ ಅಪಾರ ಧನಸಂಪತ್ತು-ಸ್ಥಾನಮಾನ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಶುಕ್ರ ಹಾಗೂ ಸೂರ್ಯನ ಮೈತ್ರಿಯ ಕಾರಣ ರಾಜಭಂಗ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಕೆಲ ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದ್ದು, ಅವರಿಗೆ ಅಪಾರ ಧನಸಂಪತ್ತು-ಸ್ಥಾನಮಾನ ಕರುಣಿಸಲಿದೆ.

Spiritual News In Kannada: ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಗೋಚರಿಸಿ ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುತ್ತವೆ. ನವಗ್ರಹಗಳ ಈ ಮೈತ್ರಿಯಿಂದ ಕೆಲವೊಮ್ಮೆ ಶುಭ ಯೋಗಗಳು ನಿರ್ಮಾಣಗೊಂಡರೆ, ಕೆಲವೊಮ್ಮೆ ಅಶುಭ ಯೋಗಗಳು ನಿರ್ಮಾಣಗೊಳ್ಳುತ್ತವೆ. ಈ ಯೋಗಗಳು ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಶುಕ್ರ ಹಾಗೂ ಸೂರ್ಯನ ಮೈತ್ರಿಯ ಕಾರಣ ಕರ್ಕ ರಾಶಿಯಲ್ಲಿ ರಾಜಭಂಗ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಮೂರು ರಾಶಿಗಳ ಜನರಿಗೆ ಅಪಾರ ಸಿರಿ=ಸಂಪತ್ತು ಸ್ಥಾನಮಾನ ಕರುಣಿಸಲಿದೆ. ಬನ್ನಿ ತಿಳಿದುಕೊಳ್ಳೋಣ.

 

ಇದನ್ನೂ ಓದಿ-48 ಗಂಟೆಗಳಲ್ಲಿ ಅಸ್ತನಾಗಲಿರುವ ಶುಕ್ರ, ಈ ಜನರಿಗೆ ಧನ-ಸಂಪತ್ತು ಮತ್ತು ಅದೃಷ್ಟದ ಹೊಸ ಬಾಗಿಲೇ ತೆರೆಯಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಶುಕ್ರ ಹಾಗೂ ಸೂರ್ಯನ ಮೈತ್ರಿಯ ಕಾರಣ ರಾಜಭಂಗ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಕೆಲ ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದ್ದು, ಅವರಿಗೆ ಅಪಾರ ಧನಸಂಪತ್ತು-ಸ್ಥಾನಮಾನ ಕರುಣಿಸಲಿದೆ.  

2 /5

ಮೇಷ ರಾಶಿ: ಸೂರ್ಯ-ಶುಕ್ರನ ಮೈತ್ರಿಯ ಕಾರಣ ನಿರ್ಮಾಣಗೊಳ್ಳುತ್ತಿರುವ ಈ ರಾಜಭಂಗ ಯೋಗ ಮೇಷ ರಾಶಿಯ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸನು ಕರುಣಿಸಲಿದೆ. ಈ ಯೋಗ ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತಿರುವ ಕಾರಣ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಹಳೆ ಹೂಡಿಕೆಗಳು ನಿಮಗೆ ಆದಾಯ ತಂದುಕೊಡಲಿವೆ. ಆರ್ಥಿಕ ಸ್ಥಿತಿ ಬಲವಾಗಲಿದೆ. ನೌಕರವರ್ಗದ ಜನರಿಗೆ ವೃತ್ತಿಜೀವನದಲ್ಲಿ ಉನ್ನತಿ ಹಾಗೂ ಉತ್ತಮ ಅವಕಾಶಗಳನ್ನು ಇದು ತಂದುಕೊಡಲಿದೆ. ನೀವು ಆಸ್ತಿಪಾಸ್ತಿ ಖರೀದಿಸಬಹುದು. ಆರೋಗ್ಯ ಸುಧಾರಿಯಲಿದೆ, ತೀರ್ಥಯಾತ್ರೆಗೆ ಹೋಗಬಹುದು.  

3 /5

ತುಲಾ ರಾಶಿ: ರಾಜಭಂಗ ಯೋಗ ತುಲಾ ರಾಶಿಯವರ ಗೋಚರ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನೀವು ಉತ್ತಮ ಅಭಿವೃದ್ಧಿಯನ್ನು ಸಾಧಿಸುವಿರಿ. ನೌಕರ ವರ್ಗದ ಜನರಿಗೆ ಇಂಕ್ರಿಮೆಂಟ್-ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗಲಿದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಲಾಭದ ಯೋಗ ಇದೆ. ವ್ಯಾಪಾರಿಗಳ ವ್ಯಾಪಾರ ಅಭಿವೃದ್ಧಿ ಹೊಂದಿ ಅಪಾರ ಧನಲಾಭ ಸಿಗಲಿದೆ.   

4 /5

ಕರ್ಕ ರಾಶಿ: ನಿಮ್ಮ ರಾಶಿಯಲ್ಲೀಯೇ ಈ ಯೋಗ ರೂಪುಗೊಳ್ಳುತಿರುವ ಕಾರಣ ಅದು ನಿಮ್ಮ ಪಾಲಿಗೆ ಸಾಕಷ್ಟು ಶುಭ ಸಾಬೀತಾಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಾಮಾಜಿಕ-ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ರುಚಿ ಹೆಚ್ಚಾಗಲಿದೆ. ಘನತೆ ಗೌರವ ಹೆಚ್ಚಾಗಲಿದೆ. ನೌಕರವರ್ಗದ ಜನರಿಗೆ ಪದೋನ್ನತಿ-ವೇತನ ಹೆಚ್ಚಳ ಭಾಗ್ಯ ಪ್ರಾಪ್ತಿಯಾಗಲಿದೆ. ಎಲ್ಲಾ ವರ್ಗದ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ. ಸಂಗಾತಿಯ ಜೊತೆಗೆ ಪ್ರವಾಸ ಮಾಡುವ ಅವಕಾಶ ಕೂಡ ಇದೆ ಹೀಗಾಗಿ ಇಂದೇ ಪ್ಲಾನ್ ಮಾಡಿ. ಪಾಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ನಿಮ್ಮದಾಗಲಿದೆ.    

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)