ಧರ್ಮವನ್ನು ಮೀರಿ ನಿಂತಿತ್ತು Sunil Shetty-Mana Shetty ಪ್ರೇಮ: 9 ವರ್ಷದ ಪ್ರೀತಿ ಕೊನೆಗೂ ಗೆದ್ದಿದ್ದೇ ವಿಚಿತ್ರ

Sunil Shetty and Mana Shetty: ಇತ್ತೀಚೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮತ್ತು ಪ್ರಸಿದ್ಧ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಅಂದಹಾಗೆ, ಅಥಿಯಾ ಮತ್ತು ಕೆಎಲ್ ರಾಹುಲ್ ಬಗ್ಗೆ ಎಲ್ಲರಿಗೂ ತಿಳಿದಿದೆ ಆದರೆ ಸುನೀಲ್ ಮತ್ತು ಮನ ಖಾದ್ರಿ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ? ಇವರ 9 ವರ್ಷದ ಪ್ರೀತಿಯ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.

1 /7

ಇತ್ತೀಚೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಮತ್ತು ಪ್ರಸಿದ್ಧ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಅಂದಹಾಗೆ, ಅಥಿಯಾ ಮತ್ತು ಕೆಎಲ್ ರಾಹುಲ್ ಬಗ್ಗೆ ಎಲ್ಲರಿಗೂ ತಿಳಿದಿದೆ ಆದರೆ ಸುನೀಲ್ ಮತ್ತು ಮನ ಖಾದ್ರಿ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ? ಇವರ 9 ವರ್ಷದ ಪ್ರೀತಿಯ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.

2 /7

ಮನ ಗುಜರಾತಿ ಮುಸ್ಲಿಂ ಕುಟುಂಬದಿಂದ ಬಂದವರು. ಸುನೀಲ್ ಶೆಟ್ಟಿ ಮತ್ತು ಮನ ಖಾದ್ರಿಯ ಪ್ರೇಮಕಥೆಯು ಪೇಸ್ಟ್ರಿ ಅಂಗಡಿಯಿಂದ ಪ್ರಾರಂಭವಾಯಿತು ಎಂದರೆ ನೀವು ನಂಬುತ್ತೀರಾ? ಹೌದು ಸುನೀಲ್ ಮನರನ್ನು ಕಂಡಿದ್ದು ಮೊದಲ ಬಾರಿಗೆ ಅಂಗಡಿಯಲ್ಲಿ.

3 /7

ಸುನಿಲ್ ಮನರನ್ನು ಎಷ್ಟರ ಮಟ್ಟಿಗೆ ಇಷ್ಟಪಟ್ಟಿದ್ದರೆಂದರೆ, ಮನ ಅವರಿಗೆ ಹತ್ತಿರವಾಗಲು, ಅವರ ಸಹೋದರಿ ಜೊತೆ ಸ್ನೇಹ ಬೆಳೆಸಿದ್ದರಂತೆ. ಇಬ್ಬರೂ ಮನ ಸಹೋದರಿಯ ಕಾರಣದಿಂದ ಮೊದಲ ಬಾರಿಗೆ ಮಾತನಾಡಿದ್ದಾರೆ.

4 /7

ಇದಾದ ನಂತರ ಸುನಿಲ್ ಮತ್ತು ಮನ ಪದೇ ಪದೇ ಮಾತನಾಡಲು ಆರಂಭಿಸಿದ್ದು ಮನ ಕೂಡ ಸುನಿಲ್ ನನ್ನು ಇಷ್ಟಪಡಲಾರಂಭಿಸಿದೆ. ನಂತರ ಸುನಿಲ್ ಮತ್ತು ಮನ ಪರಸ್ಪರ ದೀರ್ಘಕಾಲ ಡೇಟಿಂಗ್ ಮಾಡಿದ್ದು, 1991 ರಲ್ಲಿ ವಿವಾಹವಾದರು.

5 /7

ಮದುವೆಯಾದ ಒಂದು ವರ್ಷದ ನಂತರ ಸುನೀಲ್ ಮತ್ತು ಮನ ಶೆಟ್ಟಿ ಮಗಳು ಅಥಿಯಾಗೆ ಜನ್ಮ ನೀಡಿದರು. ಆ ಬಳಿಕ ಅಹಾನ್ ಶೆಟ್ಟಿ ಜನಿಸಿದರು. ಸುನಿಲ್ ಅವರ ಮಕ್ಕಳಿಬ್ಬರೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರೂ ಸಹ ತಂದೆಯಂತೆ ಹಿಟ್ ಆಗಲು ಸಾಧ್ಯವಾಗಿಲ್ಲ. ಪ್ರೇಕ್ಷಕರಿಂದ ಅಷ್ಟಾಗಿ ಪ್ರೀತಿ ಸಿಗಲಿಲ್ಲ.

6 /7

ಸುನೀಲ್ ಶೆಟ್ಟಿ ಮತ್ತು ಮನಗೆ ಧರ್ಮದ ಅಡೆತಡೆಯಿತ್ತು. ಏಕೆಂದರೆ ಮನ ಅವರ ತಂದೆ ಗುಜರಾತಿ ಮುಸ್ಲಿಂ ಮತ್ತು ತಾಯಿ ಪಂಜಾಬಿ ಹಿಂದೂ ಆಗಿದ್ದರು. ಇವೆಲ್ಲವನ್ನೂ ಮೆಟ್ಟಿ ನಿಂತು ಇದೀಗ ಕರ್ನಾಟಕದ ಮಂಗಳೂರು ಮೂಲದ ತುಳು ಭಾಷೆ ಮಾತನಾಡುವ ಬಂಟ ಸಮುದಾಯದ ಸುನಿಲ್ ಶೆಟ್ಟಿ ಅವರನ್ನು ಮನ ಮದುವೆಯಾಗಿದ್ದಾರೆ.

7 /7

ಇದೀಗ 30 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಸುನಿಲ್ ಶೆಟ್ಟಿ ಮತ್ತು ಮನ ಶೆಟ್ಟಿ ದಂಪತಿ, ಬಾಲಿವುಡ್ ನ ಮಾದರಿ ಜೋಡಿಯಾಗಿದ್ದಾರೆ.

You May Like

Sponsored by Taboola