ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಗೋಚರ, 4 ರಾಶಿಗಳ ಜನರಿಗೆ ಅಷ್ಟಶ್ವರ್ಯ ಪ್ರಾಪ್ತಿ ಯೋಗ!

Surya Pushya Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಹೇಗಿರುವಾಗ ಇದೀಗ ಗ್ರಹಗಳ ರಾಜ ಎಂದೇ ಹೇಳಲಾಗುವ ಸೂರ್ಯ ದೇವ ಪುಷ್ಯ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ಇದರ ವಿಶೇಷ ಲಾಭ ಪ್ರಾಪ್ತಿಯಾಗಲಿದ್ದು, ಅವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. 
 

ಜೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳ ರಾಶಿ ಪರಿವರ್ತನೆಯ ಜೊತೆಗೆ ಗ್ರಹಗಳ 27 ನಕ್ಷತ್ರ ಪರಿವರ್ತನೆಗೂ ಕೂಡ ವಿಶೇಷ ಮಹತ್ವ ಕೊಡಲಾಗಿದೆ. ಪ್ರತಿಯೊಂದು ನಕ್ಷತ್ರಕ್ಕೆ ಗ್ರಹಗಳ ಪ್ರವೇಶದ ಪ್ರಭಾವ ಭಿನ್ನ-ಭಿನ್ನವಾಗಿರುತ್ತದೆ. ಪ್ರಸ್ತುತ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ, ನಕ್ಷತ್ರಗಳಲ್ಲಿ ಅತ್ಯಂತ ಶುಭ ನಕ್ಷತ್ರ ಎಂದೇ ಕರೆಯಲಾಗುವ ಪುಷ್ಯ ನಕ್ಸತ್ರಕ್ಕೆ ಪ್ರವೇಶಿಸಿದ್ದಾನೆ. ಸೂರ್ಯನ ಈ ನಕ್ಷತ್ರ ಗೋಚರ ಅತ್ಯಂತ ಮಹತ್ವಪೂರ್ಣ ಎಂದೇ ಹೇಳಲಾಗುತ್ತಿದೆ. ಜುಲೈ 20, 2023 ರಂದು ಸಾಯಂಕಾಲ 5 ಗಂಟೆ 08 ನಿಮಿಷಕ್ಕೆ ಸೂರ್ಯ ಪುಷ್ಯ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ. 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರ 8ನೇ ನಕ್ಷತ್ರವಾಗಿದ್ದು, ಈ ನಕ್ಷತ್ರದ ಮೇಲೆ ದೇವ ಗುರು ಬೃಹಸ್ಪತಿ ಹಾಗೂ ಶನಿಯ ಆಧಿಪತ್ಯವಿದೆ. ಹೀಗಿರುವಾಗ ಈ ನಕ್ಷತ್ರ ಗೋಚರ ಹಲವು ರಾಶಿಗಳಿಗೆ ತುಂಬಾ ವಿಶೇಷವಾಗಿರಲಿದೆ. ಇನ್ನೊಂದೆಡೆ ಕೆಲ ರಾಶಿಗಳ ಜನರು ಇದರಿಂದ ಎಚ್ಚರದಿಂದಿರಬೇಕಾದ ಕಾಲ ಇದೆ. ಹಾಗಾದರೆ ಬನ್ನಿ ಸೂರ್ಯನ ಈ ಪುಷ್ಯ ನಕ್ಷತ್ರಗೋಚರದಿಂದ ಯಾವ ರಾಶಿಗಳ ಜನರಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ಸಿಂಹ ರಾಶಿಯಲ್ಲಿ ಚಂದ್ರ-ಮಂಗಳರ ಜೊತೆ ಶುಕ್ರನ ಮೈತ್ರಿ ತ್ರಿಗ್ರಹಿ ಯೋಗದಿಂದ ಈ ಜಾತಕದವರ ಮೇಲೆ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮೇಷ ರಾಶಿ: ನಿಮ್ಮ ರಾಶಿಯ ಪುಷ್ಯ ನಕ್ಷತ್ರದಲ್ಲಿ ಗೋಚರಿಸಿ ಸೂರ್ಯ ಚತುರ್ಥಭಾವದಲ್ಲಿರಲಿದ್ದಾನೆ. ಹೀಗಿರುವಾಗ ನಿಮ್ಮ ಜಾತಕದ ಮೇಲೆ ಸೂರ್ಯನ ಜೊತೆಗೆ ಗುರುವಿನ ವಿಶೇಷ ಕೃಪೆ ಇರಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುವುದರ ಜೊತೆಗೆ ಗೃಹ ಕಲಹದಿಂದ ಮುಕ್ತಿ ಸಿಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. ಆಕಸ್ಮಿಕ ಧನಲಾಭದ ಜೊತೆಗೆ ವ್ಯಾಪಾರದಲ್ಲಿಯೂ ಕೂಡ ಸಂಪೂರ್ಣ ಲಾಭ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ.  

2 /4

ಮಿಥುನ ರಾಶಿ: ಪುಷ್ಯ ನಕ್ಷತ್ರದಲ್ಲಿ ಗೋಚರಿಸಲಿರುವ ಸೂರ್ಯ ನಿಮ್ಮೆ ಜಾತಕದ ದ್ವಿತೀಯ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಅವರ ಪರಿಶ್ರಮದ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. ಇಂತಹ ಸಂದರ್ಭದಲ್ಲಿ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಹೂಡಿಕೆ ಕೂಡ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಎದುರಾಳಿಗಳ ಜೊತೆಗೆ ತೀವ್ರ ಪ್ರತಿಸ್ಪರ್ಧೆ ಏರ್ಪಡಲಿದೆ. ಆದರೆ ವಿಜಯಲಕ್ಷ್ಮಿ ನಿಮ್ಮ ಕೊರಳಿಗೆ ಮಾಲೆ ಹಾಕುವಳು.   

3 /4

ಕರ್ಕ ರಾಶಿ: ಪುಷ್ಯ ನಕ್ಷತ್ರದಲ್ಲಿ ಗೋಚರಿಸುವ ಸೂರ್ಯ ನಿಮ್ಮ ಗೋಚರ ಜಾತಕದ ಪ್ರಥಮ ಭಾವದಲ್ಲಿ ಸ್ಥಿತನಾಗಲಿದ್ದಾನೆ. ಹೀಗಿರುವಾಗ ಸರ್ಕಾರಿ ನೌಕರಿಯ ಸಿದ್ಧತೆಯಲ್ಲಿ ತೊಡಗಿರುವವರಿಗೆ ಯಶಸ್ಸು ಸಿಗಲಿದೆ. ಸರ್ಕಾರಿ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಇದರಿಂದ ಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳು ಇವೆ. ಆತ್ಮ ವಿಶ್ವಾಸದಲ್ಲಿ ಬದಲಾವಣೆ ಕಂಡುಬರಲಿದೆ. ಇದರಿಂದ ನೀವು ಯಾವುದಾದರೊಂದು ದೊಡ್ಡ ನಿರ್ಧಾರ ಕೈಗೊಳ್ಳುವಿರಿ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ.   

4 /4

ಧನು ರಾಶಿ: ಪುಷ್ಯ ನಕ್ಷತ್ರದಲ್ಲಿ ಪ್ರವೇಶಿಸಿರುವ ಸೂರ್ಯ ನಿಮ್ಮ ಗೋಚರ ಜಾತಕದ ಆಷ್ಟಮ ಭಾವದಲ್ಲಿರಲಿದ್ದಾನೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಬಲವಾಗಿರಲಿದೆ. ಅನಾವಶ್ಯಕ ವೆಚ್ಚದ ಮೇಲೂ ಕೂಡ ನಿಯಂತ್ರಣ ಹೇರುವಲ್ಲಿ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜೊತೆಗೆ ಅಥವಾ ಬಂಧು-ಮಿತ್ರರ ಜೊತೆಗೆ ಪ್ರವಾಸದ ಯೋಜನೆಯನ್ನು ನೀವು ಯೋಜಿಸುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)