ಲಸದ ಭರಾಟೆಯಲ್ಲಿ ಬೆಳೆಗಿನ ತಿಂಡಿಯನ್ನು ಸ್ಕಿಪ್ ಮಾಡುವವರ ಸಂಖ್ಯೆ ಕೂಡಾ ಹೆಚ್ಚಿದೆ. ಬಿಟ್ಟು ಆದರೆ ನಮ್ಮ ಕರುಳಿಗೆ ಪ್ರಯೋಜನಕಾರಿ ಮತ್ತು ಆರೋಗ್ಯಕರವಾದ ಹಲವು ಆಯ್ಕೆಗಳಿವೆ.
ನವದೆಹಲಿ : ನಿಮ್ಮ ಉಪಹಾರ ಆರೋಗ್ಯಕರವಾಗಿರಬೇಕು ಮತ್ತು ಬೆಳಗಿನ ಉಪಹಾರವನ್ನು ರಾಜನಂತೆ ತಿನ್ನಬೇಕು ಎಂಬ ಮಾತಿದೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಈ ನಿಯಮವನ್ನು ಅನುಸರಿಸುತ್ತಾರೆ? ಕೆಲಸದ ಒತ್ತಡ ಅಥವಾ ಬದಲಾಗುತ್ತಿರುವ ಜೀವನಶೈಲಿಯಿಂದ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದೇ ಇಲ್ಲ. ಕೆಲಸದ ಭರಾಟೆಯಲ್ಲಿ ಬೆಳೆಗಿನ ತಿಂಡಿಯನ್ನು ಸ್ಕಿಪ್ ಮಾಡುವವರ ಸಂಖ್ಯೆ ಕೂಡಾ ಹೆಚ್ಚಿದೆ. ಬಿಟ್ಟು ಆದರೆ ನಮ್ಮ ಕರುಳಿಗೆ ಪ್ರಯೋಜನಕಾರಿ ಮತ್ತು ಆರೋಗ್ಯಕರವಾದ ಹಲವು ಆಯ್ಕೆಗಳಿವೆ. ಬೆಳಗಿನ ಉಪಹಾರವು ಸಂಜೆಯವರೆಗೂ ನಿಮ್ಮನ್ನು ಚೈತನ್ಯದಿಂದಿರಿಸಲು ಸಹಾಯ ಮಾಡುತ್ತದೆ. ಕರುಳಿಗೆ ಆರೋಗ್ಯಕರವಾದ 5 ಆರೋಗ್ಯಕರ ಉಪಹಾರ ಆಯ್ಕೆಗಳು ಇಲ್ಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಬೆಳಗಿನ ಉಪಹಾರ ಪ್ರಮಾಣದಲ್ಲಿ ಹೆಚ್ಚಾಗಿರುವುದು ಮಾತ್ರವಲ್ಲ, ಆರೋಗ್ಯಕರವಾಗಿರುವುದು ಸಹ ಮುಖ್ಯವಾಗಿದೆ. ಆದ್ದರಿಂದ ಬೆಳಿಗ್ಗೆ ಆರೋಗ್ಯಕರ ಸಲಾಡ್ ಅನ್ನು ಆರಿಸಿಕೊಳ್ಳಬಹುದು. ಇದಕ್ಕಾಗಿ ಮೊಳಕೆ ಕಾಳು, ಮೆಂತ್ಯ, ಟೊಮೇಟೊ, ಸೌತೆಕಾಯಿ, ಒಣದ್ರಾಕ್ಷಿ, ಆಕ್ರೋಟ್, ಹಸಿರು ಮೆಣಸಿನಕಾಯಿ, ಒಂದು ಚಮಚ ಕುಂಬಳಕಾಯಿ ಸಿಪ್ಪೆ ಸುಲಿದ ಬೀಜಗಳು, ಪಾಲಕ್ ಮತ್ತು ಪುದೀನ ಎಲೆಗಳನ್ನು ಬೆರೆಸಿ ಆರೋಗ್ಯಕರ ಸಲಾಡ್ ತಯಾರಿಸಬಹುದು. ನೀವು ಬಯಸಿದರೆ, ಅರ್ಧ ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಸಹ ತಿನ್ನಬಹುದು. ನಿಮ್ಮ ಕರುಳಿನ ಜೊತೆಗೆ, ಈ ಸಲಾಡ್ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಒಂದೇ ರೀತಿಯ ಆಹಾದಿಂದ ಬೇಸರಗೊಂಡಿದ್ದರೆ ಆಹಾರದಲ್ಲಿ , ಬದಲಾವಣೆಗಳನ್ನು ಮಾಡುವುದು ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಪರ್ಯಾಯ ಆಯ್ಕೆಗಳಿಗೆ ಹೋಗಬೇಕು. ನೀವು ಒಂದು ದಿನ ಹೊರತುಪಡಿಸಿ ಒಂದು ದಿನ ಪೋಹಾ, ಉಪ್ಮಾ ಮತ್ತು ಗಂಜಿ ಸೇವಿಸಬಹುದು. ಇದರ ಹೊರತಾಗಿ, ಗೋಧಿ, ಜೋಳ ಮತ್ತು ರಾಗಿ ಗಂಜಿ ತಿಂದರೆ ಫಿಟ್ ಮತ್ತು ಆರೋಗ್ಯಕರವಾಗಿರುತ್ತೀರಿ.
ನೀವು ಬೆಳಿಗ್ಗೆ ಚಹಾವನ್ನು ಕುಡಿಯಲು ಇಷ್ಟಪಡುತ್ತಿದ್ದರೆ, ಈ ಅಭ್ಯಾಸವನ್ನು ಬದಲಾಯಿಸುವುದು ಒಳ್ಳೆಯದು. ಇದರ ಬದಲಾಗಿ ಗ್ರೀನ್ ಟೀ, ಬ್ಲಾಕ್ ಕಾಫಿ, ಅರ್ಲ್ ಗ್ರೇ ಟೀಗಳನ್ನೂ ಪ್ರಯತ್ನಿಸಬಹುದು. ಹಾಲು ಮತ್ತು ಸಕ್ಕರೆ ಇಲ್ಲದಿರುವುದರಿಂದ ಈ ಮೂರು ವಸ್ತುಗಳು ಆರೋಗ್ಯಕರವಾಗಿರುತ್ತವೆ. ಅವುಗಳನ್ನು ಡಿಟಾಕ್ಸ್ ಪಾನೀಯಗಳು ಎಂದೂ ಕರೆಯುತ್ತಾರೆ ಏಕೆಂದರೆ ಅವು ನಿಮ್ಮ ಕರುಳನ್ನು ಸ್ವಚ್ಛಗೊಳಿಸಲು ಸಹ ಕೆಲಸ ಮಾಡುತ್ತವೆ.
ನೀವು ಬೆಳಿಗ್ಗೆ ಎದ್ದ ನಂತರ ಹಾಲು ಕುಡಿಯಲು ಇಷ್ಟಪಡುವವರಾಗಿದ್ದರೆ, ನೀವು ಹಾಲನ್ನು ಮಾತ್ರ ಕುಡಿಯಬಾರದು ಎಂಬುದು \ತಿಳಿದಿರಲಿ. ಹಾಲು ಕುಡಿಯುವಾಗ ಅದಕ್ಕೆ ಸ್ವಲ್ಪ ಕೇಸರಿ ಮತ್ತು ಏಲಕ್ಕಿಯನ್ನು ಸೇರಿಸಬಹುದು ಅಥವಾ ಈ ಎರಡು ವಸ್ತುಗಳನ್ನು ಬೆರೆಸಿ ಕುಡಿಯಬಹುದು. ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇರಿಸಿದರೆ ಒಳ್ಳೆಯದು. ಬೆಲ್ಲವು ಕರುಳನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.