Venus Vargottam: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು ಮತ್ತು ವೈಭವವನ್ನು ಕರುಣಿಸುವ ಶುಕ್ರನು ಮೇಷ ರಾಶಿಯಲ್ಲಿ ವರ್ಗೊತ್ತಮನಾಗಿ ನೆಲೆಗೊಂಡಿದ್ದಾನೆ. ಇದರಿಂದಾಗಿ 4 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭವಾಗಲಿವೆ..
Venus Vargottam In Aries: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ ಮತ್ತು ವರ್ಗೊತ್ತಮವಾಗುತ್ತವೆ. ಇದು ಭೂಮಿಯ ಮೇಲಿನ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಗ್ರಹ ಒಂದು ರಾಶಿಯಲ್ಲಿ ವರ್ತೋತ್ತಮವಾಗಿದೆ ಎಂದರೆ ಅದು ಆ ಜಾತಕದ ಲಗ್ನ ಕುಂಡಲಿ ಮತ್ತು ನವಾಂಶ ಕುಂಡಲಿಯಲ್ಲಿ ಬರುತ್ತದೆ ಮತ್ತು ಆ ಗ್ರಹದ ಬಲವು ಹೆಚ್ಚಾಗುತ್ತದೆ ಎಂದರ್ಥ. ಇದರಿಂದ ಆ ಗ್ರಹ ತನ್ನ ಸಂಪೂರ್ಣ ಫಲವನ್ನು ನೀಡುತ್ತದೆ ಎಂದರ್ಥ. ಪ್ರಸ್ತುತ ಸಂಪತ್ತು ಮತ್ತು ವೈಭವವನ್ನು ನೀಡುವ ಶುಕ್ರ ಮೇಷ ರಾಶಿಯಲ್ಲಿ ವರ್ಗೋತ್ತಮನಾಗಿದ್ದಾನೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಉಂಟಾಗಲಿದೆ. ಆದರೆ 4 ರಾಶಿಗಳ ಜನರು ಇದರಿಂದ ಅಪಾರ ಧನಸಂಪತ್ತು ಗಳಿಸಲಿದ್ದಾರೆ, ಆ ಅದೃಷ್ಟವಂತ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Mars Transit 2023: ಉಚ್ಛ ದೃಷ್ಟಿಯ ಮೂಲಕ ಮಂಗಳನ ಭ್ರಮಣ ಆರಂಭ, 3 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ಯಾ ರಾಶಿ-ನಿಮಗೆ, ಶುಕ್ರನ ವರ್ಗೊತ್ತಮ ಸ್ಥಿತಿ ಆರ್ಥಿಕ ದೃಷ್ಟಿಕೋನದಿಂದ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಸಂಪತ್ತಿನ ಅಧಿಪತಿ ಅಷ್ಟಮ ಭಾವದಲ್ಲಿದ್ದುಕೊಂಡು ನಿಮ್ಮ ಮನೆಯನ್ನೂ ನೋಡುತ್ತಿದ್ದಾನೆ. ಹೀಗಾಗಿ ನೀವು ಈ ಅವಧಿಯಲ್ಲಿ ಅಪಾರ ಲಾಭವನ್ನು ಪಡೆಯಬಹುದು. ಇದರೊಂದಿಗೆ, ಶುಕ್ರವು ಎಂಟನೇ ಮನೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಈ ಸಮಯದಲ್ಲಿ ದಿನನಿತ್ಯದ ವ್ಯಾಪಾರಿಗಳ ಆದಾಯ ಹೆಚ್ಚಾಗಬಹುದು. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯೂ ಬಲವಾಗಿರುತ್ತದೆ.
ಮಕರ ರಾಶಿ-ಶುಕ್ರನ ಸಂಕ್ರಮವು ಮಕರ ರಾಶಿಯ ಜನರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಅತ್ಯಂತ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಶುಕ್ರನು ಮಕರ ರಾಶಿಯಲ್ಲಿ ಯೋಗಕಾರಕನಾಗುತ್ತಾನೆ. ಇದರೊಂದಿಗೆ ನಿಮ್ಮ ಸಂಕ್ರಮಣದ ಜಾತಕದ ಚತುರ್ಥ ಭಾವದಲ್ಲಿ ಆತ ವರ್ಗೋತ್ತಮನಾಗಿದ್ದಾನೆ. ಆದ್ದರಿಂದ, ಈ ಅವಧಿಯಲ್ಲಿ ನೀವು ವಾಹನಗಳು ಮತ್ತು ಆಸ್ತಿಯನ್ನು ಖರೀದಿಸಬಹುದು. ಅಲ್ಲದೆ, ಅವಿವಾಹಿತರಿಗೆ ಉತ್ತಮ ಸಂಬಂಧ ಪ್ರಸ್ತಾಪ ಬರುವ ನಿರೀಕ್ಷೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಪ್ರಾಪ್ತಿಯಾಗಬಹುದು.
ಮೇಷ ರಾಶಿ-ಶುಕ್ರನು ಮೇಷರಾಶಿಯಲ್ಲಿಯೇ ವರ್ಗೊತ್ತಮನಾಗಿದ್ದಾನೆ. ಹೀಗಾಗಿ ಮೇಷ ರಾಶಿಯ ಜನರಿಗೆ ಇದು ಅತ್ಯಂತ ಮಂಗಳಕರ ಮತ್ತು ಆರ್ಥಿಕವಾಗಿ ತುಂಬಾ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ರಾಹು ಮತ್ತು ಶುಕ್ರರ ಸಂಯೋಗವು ವರ್ಗೊತ್ತಮವಾಗಿದೆ. ಹೀಗಾಗಿ ನೀವು ಹಠಾತ್ ಹಣವನ್ನು ಪಡೆಯಬಹುದು. ಇದರೊಂದಿಗೆ ಬಾಲಸಂಗಾತಿಯ ಪ್ರಗತಿಯೂ ಸಾಧ್ಯ. ಇದೇ ವೇಳೆ, ನಿಮ್ಮ ಬಾಳ ಸಂಗಾತಿಯ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ. ಈ ಅವಧಿಯಲ್ಲಿ, ನೀವು ಹಳೆಯ ಹೂಡಿಕೆಗಳಿಂದ ಲಾಭ ಪಡೆಯಬಹುದು. ನೀವು ಹೊಸ ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು ಮತ್ತು ಇದರೊಂದಿಗೆ ನಿಮ್ಮ ಜೀವನದಲ್ಲಿ ಆರಾಮದಾಯಕ ವಸ್ತುಗಳು ಹೆಚ್ಚಾಗಲಿವೆ . ಮತ್ತೊಂದೆಡೆ, ಉದ್ಯೋಗಿಗಳು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ನೌಕರಿಯಲ್ಲಿ ಬಡ್ತಿ-ಇಂಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಮಿಥುನ ರಾಶಿ-ಶುಕ್ರನ ವರ್ಗೊತ್ತಮ ಸ್ಥಿತಿ ಆರ್ಥಿಕವಾಗಿ ನಿಮ್ಮ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ಸಂಕ್ರಮಣದ ಜಾತಕದ ಲಾಭದಾಯಕ ಸ್ಥಳದಲ್ಲಿ ರೂಪುಗೊಂಡಿದೆ. ಆದ್ದರಿಂದ, ಈ ಸಮಯವು ಉದ್ಯಮಿಗಳಿಗೆ ಉತ್ತಮವಾಗಿದೆ ಅಲ್ಲದೆ, ನಿಮ್ಮ ವ್ಯಾಪಾರವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಏರ್‌ಲೈನ್‌ಗಳು, ಪ್ರವಾಸೋದ್ಯಮ ಮತ್ತು ಐಷಾರಾಮಿ ವಸ್ತುಗಳಿಗೆ ಸಂಬಂಧಿಸಿದ್ದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ಯಾವುದೇ ಸರ್ಕಾರಿ ನೌಕರಿಯಲ್ಲಿ ಯಶಸ್ಸು ಪಡೆಯಲು ನೀವು ಯಾವುದಾದರೊಂದು ಪರೀಕ್ಷೆಯನ್ನು ನೀಡಿದ್ದಾರೆ, ಈ ಅವಧಿಯಲ್ಲಿ ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ನೀವು ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)