WhatsApp : 2021ರಲ್ಲಿ ಹೊಸ ಫೀಚರ್ಸ್ ಜೊತೆ ನೂತನ ಸೇವೆ

ಹೊಸ ಹೊಸ ಫೀಚರ್ಸ್ ಜೊತೆಗೆ ನೂತನ ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ WhatsApp.. 

ನವದೆಹಲಿ : WhatsApp ಕಳೆದ ವರ್ಷವೂ ಅನೇಕ ಹೊಸ ಫೀಚರ್ಸ್ ಅನ್ನು ಗ್ರಾಹಕರಿಗೆ ಪರಿಚಯಿಸಿತ್ತು. ಇದಿಗ 2021ರಲ್ಲಿಯೂ ಅನೇಕ ನೂತನ ಫಿಚರ್ಸ್ ಗಳನ್ನು ತರಲು ವಾಟ್ಸ್ ಆ್ಯಪ್ ಸಜ್ಜಾಗಿದೆ.  ಈ ಮೆಸೆಜಿಂಗ್ ಆ್ಯಪ್ ಈ ಬಾರಿ ಯಾವೆಲ್ಲ ಹೊಸ ಫೀಚರ್ಸ್ ಅನ್ನು ಹೊರ ತರುತ್ತಿದೆ ಎಂಬ ಮಾಹಿತಿ ಇಲ್ಲಿದೆ.. 
 

1 /4

ಇನ್ನು ಮುಂದೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ನಿಂದಲೂ WhatsApp  ಕರೆ ಮಾಡಬಹುದು. ವಿಡಿಯೋ ಚಾಟ್ ಮಾಡಲೂಬಹುದು. ಇನ್ನು ಕೆಲವೇ ದಿನಗಳಲ್ಲಿ ಈಸೇವೆ  WhatsAppನಲ್ಲಿ ಲಭ್ಯವಿರಲಿದೆ. 

2 /4

ಇತ್ತೀಚೆಗಷ್ಟೇ WhatsApp Payment ಸೇವೆ ಆರಂಭವಾಗಿತ್ತು. ಇದೀಗ ಇನ್ಶುರೆನ್ಸ್ ಸೇವೆ ಕೂಡಾ WhatsAppನಲ್ಲಿ ಸಿಗಲಿದೆ. ಇನ್ಶುರೆನ್ಸ್ ಸೇವೆಗಾಗಿ ಈಗಾಗಲೇ SBI ಮತ್ತು HDFC ಜೊತೆ ಮಾತುಕತೆ ನಡೆಯುತ್ತಿದೆ.

3 /4

ಮಲ್ಟಿ ಡಿವೈಸ್ಗೆ WhatsApp ಸಪೋರ್ಟ್ ನೀಡುವ ಬಗ್ಗೆ ಕಂಪನಿ ಕೆಲಸ ಮಾಡುತ್ತಿದೆ.  ಹೀಗಾದರೆ ಒಂದೇ ವಾಟ್ಸ್ಆ್ಯಪ್ ಅಕೌಂಟನ್ನು ನಾಲ್ಕು ಡಿವೈಸ್ ಗಳಲ್ಲಿ  ಹಾಕಿಕೊಳ್ಳಬಹುದು

4 /4

ಶೀಘ್ರದಲ್ಲೇ WhatsAppನಲ್ಲಿ ರೀಡ್ ಲೇಟರ್ ಸೇವೆ ಕೂಡಾ ಲಭ್ಯವಾಗಲಿದೆ. ರೀಡ್ ಲೇಟರ್ ಅಂದರೆ ಯಾರ ಚ್ಯಾಟ್ ಅನ್ನು ರೀಡ್ ಲೇಟರ್ ಗೆ ಹಾಕಲಾಗುತ್ತದೆಯೋ ಆ ಚ್ಯಾಟ್ ನ ನೊಟಿಫಿಕೇಶನ್ ಬರುವುದು ನಿಂತು ಹೋಗುತ್ತದೆ.