Provident Fund ಏಕೆ ಮುಖ್ಯವಾಗಿದೆ? ಅದರ ಪ್ರಯೋಜನಗಳೇನೆಂದು ತಿಳಿಯಿರಿ

                      

PF Account Benefits: ಉದ್ಯೋಗದಲ್ಲಿರುವವರಿಗೆ ಖಂಡಿತವಾಗಿಯೂ ಪಿಎಫ್ ಖಾತೆ ತೆರೆಯಲಾಗುತ್ತದೆ. ನೀವು ಮತ್ತು ನಿಮ್ಮ ಉದ್ಯೋಗದಾತರು ಪ್ರತಿ ತಿಂಗಳು ಈ ಖಾತೆಗೆ ಕೊಡುಗೆ ನೀಡುತ್ತೀರಿ. ಈ ಖಾತೆಯಿಂದ ಅನೇಕ ಪ್ರಯೋಜನಗಳಿವೆ. ಭವಿಷ್ಯ ನಿಧಿಯನ್ನು ನಿರ್ವಹಿಸುವ ಸಂಸ್ಥೆ ಇಪಿಎಫ್‌ಒ ಈ ಖಾತೆಯಲ್ಲಿ ಚಂದಾದಾರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಪಿಎಫ್ ಖಾತೆ ಅಥವಾ ಭವಿಷ್ಯನಿಧಿ ಖಾತೆಯು ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತದೆ. ಇಪಿಎಸ್ 95 ಅಡಿಯಲ್ಲಿ ಜೀವಮಾನದ ಪಿಂಚಣಿ ಸಹ ಲಭ್ಯವಿದೆ.

2 /6

ನೀವು ಕೆಲಸ ಮಾಡುತ್ತಿದ್ದರೆ, ಪಿಎಫ್ ಖಾತೆಯ ಆಧಾರದ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ನೀವು ಪಡೆಯುತ್ತೀರಿ.

3 /6

ಕರೋನಾದಂತಹ ಸಾಂಕ್ರಾಮಿಕ ಅಥವಾ ವಿಶೇಷ ಕಾರಣದಿಂದ ಸ್ವಲ್ಪ ಸಮಯದವರೆಗೆ ನಿರುದ್ಯೋಗದ ಸಂದರ್ಭದಲ್ಲಿ  ಪಿಎಫ್ (Provident Fund) ಅಡ್ವಾನ್ಸ್ ತೆಗೆದುಕೊಳ್ಳಲು ಅವಕಾಶವಿದೆ.  ಇದನ್ನೂ ಓದಿ - PF Balance Transfer: ಹಳೆಯ ಕಂಪನಿಯ PF Balance ಹೊಸ ಖಾತೆಗೆ ವರ್ಗಾಯಿಸಲು ಈ ಸಿಂಪಲ್ ಕೆಲಸ ಮಾಡಿ

4 /6

ಯಾವುದೇ ಕಾರಣದಿಂದ ಪಿಎಫ್ ಖಾತೆದಾರರು ಮರಣ ಹೊಂದಿದರೆ ಅಂತಹ ಸಂದರ್ಭದಲ್ಲಿ ನಾಮಿನಿಗೆ ಕನಿಷ್ಠ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಇದನ್ನೂ ಓದಿ - BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ

5 /6

58 ರಿಂದ 60 ವರ್ಷ ವಯಸ್ಸಿನಲ್ಲಿ ನಿವೃತ್ತಿಯಾದ ನಂತರ ಪಿಂಚಣಿ ಯೋಜನೆ ಪ್ರಾರಂಭವಾಗುತ್ತದೆ. ನಿವೃತ್ತಿಯ ನಂತರವೂ ನೀವು ಮೂರು ವರ್ಷಗಳವರೆಗೆ ಹಣವನ್ನು ಹಿಂತೆಗೆದುಕೊಳ್ಳದಿದ್ದರೆ, ನಂತರ ಬಡ್ಡಿಯನ್ನು ಪಾವತಿಸುವುದು ಮುಂದುವರಿಯುತ್ತದೆ. ಮೂರು ವರ್ಷಗಳ ನಂತರ ಮಾತ್ರ ಅದನ್ನು ನಿಷ್ಕ್ರಿಯ ಖಾತೆಯ ವರ್ಗಕ್ಕೆ ಸೇರಿಸಲಾಗುತ್ತದೆ. ಆದಾಗ್ಯೂ, ಅದರ ನಂತರವೂ ಬಡ್ಡಿ ಲಭ್ಯವಿದೆ.

6 /6

ಉದ್ಯೋಗವನ್ನು ತೊರೆದ 1 ತಿಂಗಳ ನಂತರ ಶೇಕಡಾ 75 ರಷ್ಟು ಪಾಲನ್ನು ಹಿಂಪಡೆಯಬಹುದು. ನಿಮ್ಮ ಸೇವೆಯು ಹತ್ತು ವರ್ಷಗಳಿಗಿಂತ ಕಡಿಮೆಯಿದ್ದರೆ, ಪೂರ್ಣ ಪಿಂಚಣಿ ಹಣವನ್ನು ಸಹ ಹಿಂಪಡೆಯಬಹುದು.