ವಾಕ್ಸಿನ್ ಸೆಂಟರ್ ನಿಂದ ಟೆಸ್ಟಿಂಗ್ ಕೇಂದ್ರದವರೆಗೆ ಎಲ್ಲಾ ಮಾಹಿತಿ ನೀಡುತ್ತದೆ Google Map

Google Map ಮೂಲಕ ನಿಮ್ಮ ಸುತ್ತ ಕರೋನಾ ವ್ಯಾಕ್ಸಿನೇಷನ್ ಎಲ್ಲಿ ನಡೆಯುತ್ತಿದೆ ಎಂಬುದರ ಕುರಿತು ನಿಖರ ಮಾಹಿತಿ ಪಡೆಯಬಹುದು. ಗೂಗಲ್ ಮ್ಯಾಪ್ ನಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸರ್ಚ್ ಮಾಡಿದರೆ,  ಹತ್ತಿರದ ಎಲ್ಲಾ ಕೇಂದ್ರಗಳ ಮಾಹಿತಿ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸಿತ್ತದೆ.
 

ನವದೆಹಲಿ: ದೇಶಾದ್ಯಂತ ಕರೋನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕರೋನದ ವಿರುದ್ಧ ಹೋರಾಡಲು ಕೆಲವೊಂದು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಅವಶ್ಯಕ. ಅಷ್ಟೇ ಅಲ್ಲ, ಲಸಿಕೆ ಪಡೆಯುವ ಅರ್ಹತೆ ಇರುವವರು ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವುದು ಕೂಡಾ ಬಹಳ ಮುಖ್ಯ. ಇನ್ನು ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಪಡುವುದು ಕೂಡಾ ಮುಖ್ಯ. ಲಸಿಕೆ ಪಡೆಯಬೇಕಾದರೆ ಅಥವಾ ಪರೀಕ್ಷೆಗೆ ಒಳಗಾಗಬೇಕಾದರೆ, ಲಸಿಕಾ ಕೇಂದ್ರ ಪರೀಕ್ಷಾ ಸೆಂಟರ್ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೆಕಗುತ್ತದೆ. ಈಗ ದನ್ನು ಕಂಡುಹಿಡಿಯುವುದು ಬಹಳ ಸುಲಭ. ಗೂಗಲ್ ಮ್ಯಾಪ್ನಲ್ಲಿ ಈ ಬಗ್ಗೆ ಸರ್ಚ್ ಹಾಕಿದರೆ ಕರೋನಾ ಲಸಿಕಾ ಕೇಂದ್ರ ಮತ್ತು ಪರೀಕ್ಷಾ ಕೇಣದ್ರಗಳ ವಿಳಾಸ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /4

Google ಮ್ಯಾಪ್ ಮೂಲಕ  ನಿಮ್ಮ ಸುತ್ತ ವ್ಯಾಕ್ಸಿನೇಷನ್ ಎಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿಯನ್ನು ಪಡೆಯಬಹುದು. ಗೂಗಲ್ ನಕ್ಷೆಗಳ ಬಳಕೆದಾರರು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಅಪ್ಲಿಕೇಶನ್‌ನಲ್ಲಿ ಹುಡುಕಿದಾಗ, ಹತ್ತಿರದ ಎಲ್ಲಾ ಕೇಂದ್ರಗಳನ್ನು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. ಅಲ್ಲದೆ ಈ ಕೇಂದ್ರಗಳು ಓಪನ್ ಇವೆಯಾ ಅಥವಾ ಕ್ಲೋಸ್ ಆಗಿದೆಯಾ ಎಂಬ ಮಾಹಿತಿ ಕೂಡಾ ಲಭಿಸುತ್ತದೆ.

2 /4

ಗೂಗಲ್ ಮ್ಯಾಪ್ ನಲ್ಲಿ ಕೇಂದ್ರದ ಫೋನ್ ನಂಬರ್ ಗಳನ್ನು ಕೂಡಾ ಒದಗಿಸಲಾಗಿದೆ. ಈ ಕಾರಣದಿಂದಾಗಿ, ಅಗತ್ಯವಿರುವವರು ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿಕೊಂಡು ಲಸಿಕೆ ಪಡೆಯಲು ಹೋಗಬಹುದು. ಇನ್ನು ಪರೀಕ್ಷೆ ಮಾಡಿಸಬೇಕಾದರೆ ಇದರಲ್ಲಿ, ಲ್ಯಾಬ್ ನ  ಫೋನ್ ನಂಬರ್ ಕೂಡಾ ನೀಡಲಾಗಿರುತ್ತದೆ.   

3 /4

ನಿಮ್ಮ ಫೋನ್‌ನ Google ಅಪ್ಲಿಕೇಶನ್‌ಗೆ ಅಥವಾ Chrome ಬ್ರೌಸರ್‌ನಲ್ಲಿ ಹೋಗಿ "COVID 19 ಲಸಿಕೆ" ಎಂದು ಟೈಪ್ ಮಾಡಿ ಮತ್ತು ಸರ್ಚ್ ಕೊಡಿ. ಇದರ ನಂತರ “Where to Get it” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.  ಆಗ ನಿಮ್ಮ ಸುತ್ತಲಿನ ಎಲ್ಲಾ ಆಸ್ಪತ್ರೆಗಳ ಪಟ್ಟಿಯಲ್ಲಿ ಎಲ್ಲಿ  ಕರೋನಾ ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. 

4 /4

ಅಲ್ಲದೆ ಇದರಲ್ಲಿ “More places”  ಎಂಬ ಯ್ಕೆಯನ್ನು ಕೂಡಾ ನೀಡಲಾಗಿದೆ. ಇದನ್ನುಕ್ಲಿಕ್ ಮಾಡಿದರೆ, ಇತರ ಕರೋನಾ ಲಸಿಕೆ ಕೇಂದ್ರಗಳ ಬಗ್ಗೆ ಮಾಹಿತಿ ದೊರೆಯಲಿದೆ.