ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ದಿನ ಸಾವನ್ನಪ್ಪುತ್ತಾನೆ. ಮೃತರಾದ ಬಳಿಕ ಅವರವರ ಧರ್ಮಕ್ಕೆ ಅನುಗುಣವಾಗಿ ಅಂತ್ಯ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇನ್ನು ಹಿಂದೂ ಧರ್ಮದಲ್ಲಿ ಮೃತದೇಹವನ್ನು ಸುಡುವ ಪದ್ಧತಿ ಇದೆ. ಜೊತೆಗೆ ವಿಭಿನ್ನವಾದ ಅಂತ್ಯಕ್ರಿಯೆಯ ಬಗೆಗಿನ ನಿಯಮಗಳಿವೆ. ಅವುಗಳನ್ನು ಅನುಸರಿಸುವುದು ಅವಶ್ಯಕ.
ಹಿಂದೂ ಧರ್ಮದಲ್ಲಿ ಮೃತ ದೇಹವನ್ನು ಸುಡುವುದಕ್ಕೂ ಸಂಪ್ರದಾಯವಿದೆ. ಇನ್ನು ಗರುಡ ಪುರಾಣವು ಇದಕ್ಕೆ ಸಂಬಂಧಿಸಿದ ಕೆಲವು ಶಾಸನಗಳನ್ನು ಹೇಳುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟರೆ ಆ ಮೃತದೇಹವನ್ನು ಸೂರ್ಯಾಸ್ತದ ನಂತರ ಸುಡುವುದಿಲ್ಲ. ಹಾಗೆಯೇ ಮೃತ ದೇಹವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ. ಇದಕ್ಕೆ ಕಾರಣ ಏನುಗೊತ್ತಾ. ಇಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ: ಇದು ಪ್ರೀತಿಯ ವಿಷ್ಯ : ಪ್ರೇಮಿಗಳ ವಿಡಿಯೋ ವೈರಲ್
ಒಬ್ಬ ವ್ಯಕ್ತಿಯು ಸೂರ್ಯಾಸ್ತದ ನಂತರ ಸತ್ತರೆ, ಅವನ ಅಂತ್ಯಕ್ರಿಯೆಯನ್ನು ಮರುದಿನ ಬೆಳಿಗ್ಗೆ ಮಾತ್ರ ಮಾಡಲಾಗುತ್ತದೆ. ಈ ಸಮಯದಲ್ಲಿ, ಮೃತ ದೇಹವನ್ನು ರಾತ್ರಿಯಿಡೀ ನೆಲದ ಮೇಲೆ ಇರಿಸಲಾಗುತ್ತದೆ. ಅಷ್ಟೇ ಅಲ್ಲ ಆ ಮೃತದೇಹದ ಪಕ್ಕದಲ್ಲಿ ಇನ್ನೊಬ್ಬರು ಖಂಡಿತವಾಗಿಯೂ ರಾತ್ರಿಯಿಡೀ ಕುಳಿತುಕೊಳ್ಳುತ್ತಾರೆ. ಇದರ ಹಿಂದಿನ ಕಾರಣವನ್ನು ಗರುಡ ಪುರಾಣದಲ್ಲಿ ನೀಡಲಾಗಿದೆ. ಮೊದಲನೆಯದಾಗಿ, ಸೂರ್ಯಾಸ್ತದ ನಂತರ ಯಾರನ್ನಾದರೂ ದಹನ ಮಾಡಿದರೆ, ಆ ವ್ಯಕ್ತಿಗೆ ಮೋಕ್ಷ ಸಿಗುವುದಿಲ್ಲ. ಜೊತೆಗೆ ಆತ್ಮವು ಪಿಶಾಚಿ ಅಥವಾ ಅಸುರ ಯೋನಿಯಲ್ಲಿ ಮರುಹುಟ್ಟು ಪಡೆಯುತ್ತದೆ ಎಂದು ನಂಬಲಾಗಿದೆ.
ಶವಸಂಸ್ಕಾರಕ್ಕೆ ಸರಿಯಾದ ಸಮಯವನ್ನು ಆರಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಪಂಚಕ (ಸೂರ್ಯಾಸ್ತ ಅಥವಾ ರಾತ್ರಿ) ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ, ಅವರ ಅಂತ್ಯ ಸಂಸ್ಕಾರವನ್ನು ಅವಧಿ ಮುಗಿದ ನಂತರವೇ ಮಾಡಲಾಗುತ್ತದೆ. ಪಂಚಕ ಮುಗಿಯುವವರೆಗೆ ಯಾರಾದರೂ ಮೃತದೇಹದೊಂದಿಗೆ ಕುಳಿತುಕೊಳ್ಳಬೇಕು. ಪಂಚಕ ಕಾಲದಲ್ಲಿ ಯಾರನ್ನಾದರೂ ದಹನ ಮಾಡಿದರೆ, ಆ ವ್ಯಕ್ತಿಯ ಕುಟುಂಬದಲ್ಲಿ ಇತರ ಐದು ಜನರು ಸಹ ಸಾಯಬಹುದು ಎಂದು ಹೇಳಲಾಗಿದೆ. ಇನ್ನು ಇದಕ್ಕೆ ಪರಿಹಾರವನ್ನೂ ಹೇಳಲಾಗಿದ್ದು, ಅದರ ಪ್ರಕಾರ ಮೃತದೇಹದ ಜೊತೆಗೆ 5 ಕಾಳು ಹಿಟ್ಟು ಅಥವಾ ಒಣ ಹುಲ್ಲಿನ ಪ್ರತಿಕೃತಿಗಳನ್ನು ಸಹ ಸಂಪೂರ್ಣ ನಿಯಮಗಳೊಂದಿಗೆ ಸುಡಲಾಗುತ್ತದೆ.
ರಾತ್ರಿಯಲ್ಲಿ ಮೃತದೇಹದೊಂದಿಗೆ ಏಕೆ ಕುಳಿತುಕೊಳ್ಳಬೇಕು?
ರಾತ್ರಿಯಿಡೀ ಮೃತದೇಹದೊಂದಿಗೆ ಕುಳಿತಿರುವುದರ ಹಿಂದಿನ ಕಾರಣವನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ, ರಾತ್ರಿಯ ಸಮಯದಲ್ಲಿ ದುಷ್ಟಶಕ್ತಿಯು ಅದರೊಳಗೆ ಪ್ರವೇಶಿಸಬಹುದು. ಆ ದೇಹದ ಮೂಲಕ ಕೆಲವು ಕೆಟ್ಟ ಕೆಲಸಗಳನ್ನು ಮಾಡಬಹುದು. ಹೀಗಾಗಿಯೇ ರಾತ್ರಿಯಲ್ಲಿ ಮೃತದೇಹವನ್ನು ಒಂಟಿಯಾಗಿ ಬಿಡಬಾರದು. ಇನ್ನು ಮೃತದೇಹ ಇರುವ ಆ ಸ್ಥಳವನ್ನು ಸ್ವಚ್ಛವಾಗಿಡಲು ಇದೂ ಒಂದು ಕಾರಣವಾಗಿದೆ. ಇದಲ್ಲದೆ, ಬೆಂಕಿಯ ಪವಿತ್ರ ಬೆಳಕಿನಲ್ಲಿ ಯಾವುದೇ ದುಷ್ಟಶಕ್ತಿಯು ಮೃತ ದೇಹವನ್ನು ಪ್ರವೇಶಿಸದಂತೆ ಅಲ್ಲಿ ಧೂಪದ್ರವ್ಯ ಅಥವಾ ದೀಪವನ್ನು ಬೆಳಗಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಮೃತದೇಹವನ್ನು ಇತರ ಯಾವುದೇ ಜೀವಿಗಳು ಸ್ಪರ್ಷಿಸದಂತೆ ಕಾಯುವುದಕ್ಕೆ ಸಹ ಹೀಗೆ ಜಾಗರಣೆ ಕುಳಿತುಕೊಳ್ಳುತ್ತಾರೆ.
ಇದನ್ನೂ ಓದಿ: Gmailನಲ್ಲಿನ ಅನಗತ್ಯ ಮೆಸೇಜ್ ಅಟೋಮ್ಯಾಟಿಕ್ ಆಗಿ ಡಿಲೀಟ್ ಆಗಬೇಕೆ? ಹಾಗಾದ್ರೆ ಈ ಟ್ರಿಕ್ ಬಳಸಿ
ಹಿಂದೂ ಧರ್ಮದಲ್ಲಿ ಮೃತದೇಹದ ಅಂತಿಮ ಸಂಸ್ಕಾರವನ್ನು ಸತ್ತವರ ಮಗ ಅಥವಾ ಮಗಳು ಮಾತ್ರ ಮಾಡಬೇಕು ಎಂಬ ನಂಬಿಕೆಯೂ ಇದೆ. ಸತ್ತವರ ಸಂಬಂಧಿಕರು ಅವರಿಂದ ದೂರವಿದ್ದರೆ, ಅವರು ಬರುವವರೆಗೆ ಮೃತದೇಹವನ್ನು ಇಟ್ಟು ಕಾಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಮೃತ ದೇಹವನ್ನು ಇಡೀ ರಾತ್ರಿ ಇಡಬೇಕಾಗುತ್ತದೆ. ಮೃತರ ಅಂತ್ಯಕ್ರಿಯೆಯನ್ನು ಮಗನ ಕೈಯಿಂದಲೇ ಮಾಡಬೇಕು ಎಂಬುದು ನಂಬಿಕೆ. ಪುತ್ರನಿಂದ ಅಂತಿಮ ಸಂಸ್ಕಾರ ಮಾಡಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬುದು ನಂಬಿಕೆ. ಇಲ್ಲದಿದ್ದರೆ ಆತ್ಮವು ಪುನರ್ಜನ್ಮ ಅಥವಾ ಮೋಕ್ಷದ ಹುಡುಕಾಟದಲ್ಲಿ ಅಲೆದಾಡುತ್ತಲೇ ಇರುತ್ತದೆ ಎಂದು ನಂಬಲಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.