Astro Tips: ರಾಹುಕಾಲದಲ್ಲಿ ಶುಭ ಕೆಲಸ ಏಕೆ ಮಾಡಬಾರದು ಗೊತ್ತಾ..?

Know About Rahu Kaal: ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ. ಪ್ರತಿದಿನ ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿಯವರಗೆ ರಾಹು ಕಾಲವಿರುತ್ತದೆ.

Written by - Puttaraj K Alur | Last Updated : May 23, 2024, 07:49 PM IST
  • ರಾಹುಕಾಲ, ಗುಳಿಕಕಾಲ, ಯಮಗಂಡಕಾಲ & ವಿಷಘಾತಿ ಕಾಲದ ಬಗ್ಗೆ ತಿಳಿಯಿರಿ
  • ಈ ಸಮಯವನ್ನು ವಿಶೇಷವಾಗಿ ಅಶುಭ ಅಥವಾ ಅಮಂಗಳಕರವೆಂದು ಪರಿಗಣಿಸಲಾಗಿದೆ
  • ರಾಹುಕಾಲವು ಪ್ರತಿದಿನವೂ 90 ನಿಮಿಷಗಳ ಅವಧಿಯವರಗೆ ಇರುತ್ತದೆ
Astro Tips: ರಾಹುಕಾಲದಲ್ಲಿ ಶುಭ ಕೆಲಸ ಏಕೆ ಮಾಡಬಾರದು ಗೊತ್ತಾ..? title=
ರಾಹುಕಾಲದ ಬಗ್ಗೆ ತಿಳಿಯಿರಿ

Know About Rahu Kaal: ಹಿಂದೂಧರ್ಮದಲ್ಲಿ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಮತ್ತು ವಿಷಘಾತಿ ಸಮಯಗಳನ್ನು ವಿಶೇಷವಾಗಿ ಅಶುಭ ಅಥವಾ ಅಮಂಗಳಕರವೆಂದು ಪರಿಗಣಿಸಲಾಗುತ್ತದೆ. ರಾಹುಕಾಲದಲ್ಲಿ ಪ್ರಯಾಣ ಹಾಗೂ ಶುಭ ಕೆಲಸ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. 

ರಾಹುಕಾಲ ಒಂದು ದಿನದಲ್ಲಿ ಎಷ್ಟು ಹೊತ್ತು ಇರುತ್ತದೆ? ಆ ಹೊತ್ತಿನಲ್ಲಿ ಶುಭ ಕೆಲಸವನ್ನು ಏಕೆ ಮಾಡಬಾರದು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ರಾಹು ಎಂಬುದು ಅಶುಭದ ಸಂಕೇತವಾಗಿದ್ದು, ಇದು ದೇವಾನುದೇವತೆಗಳನ್ನೂ ಬಿಟ್ಟಿಲ್ಲವೆಂದು ಹೇಳಲಾಗಿದೆ.

ಇದನ್ನೂ ಓದಿ: Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ

ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ. ಪ್ರತಿದಿನ ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿಯವರಗೆ ರಾಹು ಕಾಲವಿರುತ್ತದೆ.

ಈ ಸಮಯದಲ್ಲಿ ಹೊಸ ಉದ್ಯೋಗಕ್ಕೆ ಹೋಗುವುದು, ಹೊಸ ಕೆಲಸಗಳಿಗೆ ಕೈ ಹಾಕುವುದು, ಮಂಗಳಕಾರ್ಯ ನೆರವೇರಿಸುವುದು, ಪ್ರಯಾಣ ಮಾಡಿದರೆ ಯಶಸ್ಸು ಸಿಗುವುದಿಲ್ಲ. ರಾಹುಕಾಲದಲ್ಲಿ ಪ್ರಯಾಣ ಮಾಡುವುದರಿಂದ ಅಪಘಾತ ಭಯವಿರುತ್ತದೆ ಮತ್ತು ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ತಿಯಾಗದೇ ಇರಬಹುದು ಎಂದು ಹೇಳಲಾಗಿದೆ. 

ಇದನ್ನೂ ಓದಿ: Garuda Purana: ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಈ ರೀತಿ ಅನುಭವವಾಗುತ್ತದೆ!

ಒಂದು ವೇಳೆ ಅನಿವಾರ್ಯವಾಗಿ ರಾಹುಕಾಲದ ಸಮಯಕ್ಕೆ ಪ್ರಯಾಣ ಮಾಡಬೇಕಾದರೆ ಹನುಮಂತನನ್ನು ಪೂಜಿಸಿ ಅಥವಾ ಆಂಜನೇಯನ ಮಂತ್ರ ಜಪಿಸಿ ಕೆಲಸ ಮುಂದುವರಿಸಬೇಕು. ರಾಹುಕಾಲದಲ್ಲಿ ಹೊರಗಡೆ ಹೋಗಬೇಕಾದರೆ ಮೊಸರು, ಸಕ್ಕರೆ ಸೇವಿಸಬೇಕು. ಇದರಿಂದ ರಾಹುವಿನ ಪ್ರಭಾವ ತಕ್ಕಮಟ್ಟಿಗೆ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಪ್ರತಿಯೊಬ್ಬರೂ ರಾಹುಕಾಲದ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News