ದಿನಭವಿಷ್ಯ 19-08-2024: ಸೋಮವಾರ ಶ್ರವಣ ನಕ್ಷತ್ರ, ಶೋಭನ ಯೋಗದಲ್ಲಿ 'ರಾಖಿ ಹಬ್ಬ' ನಿಮ್ಮ ರಾಶಿಗೆ ಹೇಗಿದೆ!

Today Horoscope 19th August 2024: ಸೋಮವಾರ ಶ್ರವಣ ನಕ್ಷತ್ರ, ಶೋಭನ ಯೋಗದಲ್ಲಿ 'ರಾಖಿ ಹಬ್ಬ' ದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 19, 2024, 06:01 AM IST
  • ವೃಷಭ ರಾಶಿಯವರಿಗೆ ಇಂದು ಮಿಶ್ರ ಫಲಗಳಿಂದ ಕೂಡಿದ ದಿನ.
  • ಸಿಂಹ ರಾಶಿಯವರು ಉದ್ಯೋಗದಲ್ಲಿ ಉತ್ತಮ ಲಾಭಗಳನ್ನು ಗಳಿಸುವಿರಿ
  • ವೃಶ್ಚಿಕ ರಾಶಿಯವರಿಗೆ ಇಂದು ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ.
ದಿನಭವಿಷ್ಯ 19-08-2024:  ಸೋಮವಾರ ಶ್ರವಣ ನಕ್ಷತ್ರ, ಶೋಭನ ಯೋಗದಲ್ಲಿ 'ರಾಖಿ ಹಬ್ಬ' ನಿಮ್ಮ ರಾಶಿಗೆ ಹೇಗಿದೆ!  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿಯ ಈ ದಿನ ಸೋಮವಾರ ಶ್ರವಣ ನಕ್ಷತ್ರ, ಶೋಭನ ಯೋಗ ಇರಲಿದೆ. ಇಂದು ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಲಾಭದಾಯಕ ದಿನ. ಹೊಸ ವಾಹನ ಖರೀದಿ ಯೋಗವೂ ಇದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ನಿಮ್ಮ ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಯಶಸ್ಸು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ವೃತ್ತಿಪರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕಾರಾತ್ಮಕವಾದ ದಿನ. ಆರೋಗ್ಯದಲ್ಲಿ ಪ್ರಗತಿ ಕಂಡುಬರಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ದಿನವಿಡೀ ಕೆಲಸದ ಒತ್ತಡದಿಂದ ಆಯಾಸ ಉಂಟಾಗಬಹುದು. ದುಡ್ಡಿನ ವಿಚಾರದಲ್ಲಿ ಲಾಭದಾಯಕವಾಗಿದೆ. 

ಇದನ್ನೂ ಓದಿ- ಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್  

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಉದ್ಯೋಗದಲ್ಲಿ ಉತ್ತಮ ಲಾಭಗಳನ್ನು ಗಳಿಸುವಿರಿ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ವ್ಯವಹಾರಸ್ಥರಿಗೆ ಲಾಭದಾಯಕ ದಿನವಾಗಿದೆ. ಪ್ರಣಯ ಜೀವನವು ಅನ್ಯೋನ್ಯತೆಯಿಂದ ಕೂಡಿರಲಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ವಿನೋದ ಮತ್ತು ಉತ್ತಮ ದಿನವಾಗಿದೆ. ನೀವು ಇಂದು ನಿಮ್ಮ ಭಾವೋದ್ರೇಕಗಳು ಮತ್ತು ಸ್ವಯಂ ಬೆಳವಣಿಗೆಗೆ ಹೆಚ್ಚಿನ ಒಟ್ಟು ನೀಡಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯ ಜನರು ಇಂದು ನಿಮ್ಮ ಸುತ್ತಮುತ್ತಲಿನ ಜನರಿಗೆ ನೀಡುವುದಕ್ಕಿಂತ ಹೆಚ್ಚಿನದನ್ನು ಪಡೆಯುತ್ತೀರಿ.  ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. 

ಇದನ್ನೂ ಓದಿ- ಕಷ್ಟಪಟ್ಟರೂ ಜೇಬು ಖಾಲಿಯಾಗುತ್ತಾ? ಈ 5 ಪರಿಹಾರಗಳಲ್ಲಿ ಒಂದನ್ನು ಅಳವಡಿಸಿಕೊಳ್ಳಿ, ಮನೆಯಲ್ಲಿ ಆದಾಯ ದುಪ್ಪಟ್ಟಾಗುತ್ತದೆ..!

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಪ್ರಯಾಣದ ಮೌಲ್ಯವನ್ನು ನೀವು ಅರಿತುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪ್ರಗತಿಯ ದಿನ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನೀವು ಸ್ವಯಂ-ಅಭಿವೃದ್ಧಿಗೆ ಕೆಲಸ ಮಾಡಲು ಸಮಯವನ್ನು ಮೀಸಲಿಡಿ.  ಆಸ್ತಿಯನ್ನು ಖರೀದಿಸಲು ಶುಭ ದಿನ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಸಂಬಂಧದಲ್ಲಿ ಬಿರುಕು ಸುಧಾರಿಸಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಯಶಸ್ಸನ್ನು ಸಾಧಿಸಲು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ಪಡೆದುಕೊಳ್ಳಿ. ಪ್ರತಿಕೂಲ ಸಂದರ್ಭಗಳಲ್ಲಿ ಧೈರ್ಯವನ್ನು ಬಿಡಬೇಡಿ. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News