ದಿನಭವಿಷ್ಯ 13-08-2024: ಮಂಗಳವಾರ ವಿಶಾಖಾ ನಕ್ಷತ್ರ, ಬ್ರಹ್ಮಾ ಯೋಗ: ಇಂದಿನ ದ್ವಾದಶ ರಾಶಿಗಳ ಫಲಾಫಲ!

Today Horoscope 13th August 2024: ಮಂಗಳವಾರ ವಿಶಾಖಾ ನಕ್ಷತ್ರ, ಬ್ರಹ್ಮಾ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 13, 2024, 08:01 AM IST
  • ಕನ್ಯಾ ರಾಶಿಯವರಿಗೆ ಇಂದು ನಿಮ್ಮ ಗುಪ್ತ ಸತ್ಯಗಳು ಹೊರಬರುವ ಸಂಭವವಿದೆ.
  • ತುಲಾ ರಾಶಿಯವರು ಇಂದು ಆರ್ಥಿಕ ಪ್ರಗತಿಯನ್ನು ಕಾಣುವಿರಿ.
  • ಮಕರ ರಾಶಿಯವರೇ ನಿಮ್ಮ ಕನಸುಗಳನ್ನು ನನಸಾಗಿಸಲು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ.
ದಿನಭವಿಷ್ಯ 13-08-2024:  ಮಂಗಳವಾರ ವಿಶಾಖಾ ನಕ್ಷತ್ರ, ಬ್ರಹ್ಮಾ ಯೋಗ: ಇಂದಿನ ದ್ವಾದಶ ರಾಶಿಗಳ ಫಲಾಫಲ!  title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಮಂಗಳವಾರ ವಿಶಾಖಾ ನಕ್ಷತ್ರ, ಬ್ರಹ್ಮಾ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ತಿಳಿಯಿರಿ.  

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಮಾನಸಿಕ ನೋವಿನಿಂದ ಹೊರಬರಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿ. ಅನುಮಾನದಲ್ಲಿ ಜೀವಿಸುವ ಬದಲು ಮುಕ್ತವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಕಾಯ್ದುಕೊಳ್ಳುವ ಸಮಯ. ಯಾವುದೇ ಕೆಟ್ಟ ಸನ್ನಿವೇಶದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಮನದ ನೋವನ್ನು ಹಂಚಿಕೊಳ್ಳಿ. ಯಾರೊಂದಿಗೂ ದ್ವೇಷದ ಭಾವನೆಯನ್ನು ಮುಂದುವರೆಸಬೇಡಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮೊಳಗಿನ ಉಜ್ವಲವಾದ ಬೆಳಕನ್ನು ಜಾಗೃತಗೊಳಿಸಿ, ಸಕಾರಾತ್ಮಕತೆಯತ್ತ ಮುಂದುವರೆಯಿರಿ. ನಿಮ್ಮ ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವು ನಿಮ್ಮ ಜೀವನದ ಗೇಮ್ ಚೇಂಜರ್ ಆಗಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ನಾಯಕತ್ವದ ಗುಣಗಳಿಂದಾಗಿ ಉದ್ಯೋಗದಲ್ಲಿ ಬೇರೆಯವರನ್ನು ನಿಮ್ಮತ್ತ ಸೆಳೆಯುವಿರಿ. ನಿಮ್ಮ ಸುತ್ತಮುತ್ತಲಿನವರು ಸಹ ದೊಡ್ಡ-ದೊಡ್ಡ ಕನಸುಗಳನ್ನು ಕಾಣುವಂತೆ ಅವರನ್ನು ಪ್ರೇರೇಪಿಸುವಿರಿ. 

ಇದನ್ನೂ ಓದಿ- ಫಾಲ್ಗುಣ ನಕ್ಷತ್ರದಲ್ಲಿ ಶುಕ್ರ: ಈ ರಾಶಿಯವರಿಗೆ ಕುಬೇರ ಯೋಗದಿಂದ ತುಂಬಲಿದೆ ಖಜಾನೆ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಪ್ರೀತಿಯಲ್ಲಿರುವವರಿಗೆ ಕಠಿಣ ಸಮಯ. ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಬದಲಿಗೆ ಶಾಂತ ಚಿತ್ತತೆಯಿಂದ ಪರಿಸ್ಥಿತಿಯಿಂದ ಹೊರಬರುವ ಬಗ್ಗೆ ಚಿಂತಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಗುಪ್ತ ಸತ್ಯಗಳು ಹೊರಬರುವ ಸಂಭವವಿದೆ. ಈ ಭಯದ ನೆರಳಿನಲ್ಲೇ ದಿನಗಳೆಯುವಿರಿ. ನೈಸರ್ಗಿಕ ಪ್ರಪಂಚವು ನಿಮ್ಮನ್ನು ಕೇಂದ್ರಕ್ಕೆ ಮರಳಿ ತರಲು ಅನುಮತಿಸಿ.

ತುಲಾ ರಾಶಿಯವರ ಭವಿಷ್ಯ (Libra Horoscope): 
ಆರ್ಥಿಕ ಪ್ರಗತಿಯನ್ನು ಕಾಣುವಿರಿ. ನಿಮ್ಮ ವೃತ್ತಿ ಮತ್ತು ಹಣಕಾಸಿನ ವಿಷಯಕ್ಕೆ ಬಂದಾಗ ಈ ದಿನ ಅತ್ಯುತ್ತಮ ದಿನಗಳಲ್ಲಿ ಒಂದು. ಪ್ರಮುಖ ಹೂಡಿಕೆಯ ಬಗ್ಗೆ ಮರೆಯದಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಸಂಬಂಧಗಳು ಗಟ್ಟಿಯಾಗಲಿವೆ ವಿನೋದ ಮತ್ತು ಉಲ್ಲಾಸದ ಶಕ್ತಿಯು ನಿಮ್ಮನ್ನು ಸುತ್ತುವರೆದಿದೆ. ನಿಮ್ಮ ಹಿರಿಯರು ನೀಡುವ ಎಲ್ಲಾ ಆಶೀರ್ವಾದಗಳಿಗೆ ನೀವು ಅರ್ಹರು. ಇದನ್ನು ಆನಂದಿಸಿ. 

ಇದನ್ನೂ ಓದಿ- ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಕೈ ಇಟ್ಟಲೆಲ್ಲಾ ಹಣ ಉಕ್ಕುವ ಕಾಲ !ಯಶಸ್ಸು, ಕೀರ್ತಿ ಗೌರವಕ್ಕೆ ಕೊನೆಯೇ ಇಲ್ಲ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಮಾತಿನಲ್ಲಿ ಸಂಯಮವನ್ನು ಕಾಯ್ದುಕೊಳ್ಳುವುದರಿಂದ ಪರಸ್ಪರ ಸಂಬಂಧಗಳು ಬದುಕುಳಿಯಲಿವೆ. ಆದರೆ ನೆನಪಿಡಿ, ಪ್ರತಿ ಸಂಬಂಧವು ದ್ವಿಮುಖ ರಸ್ತೆಯಾಗಿದೆ!  ಸಮಯ, ಶಕ್ತಿ ಅಥವಾ ಸಲಹೆ ಏನೇ ಇದ್ದರೂ ನೀವಂದುಕೊಂಡತೆ ಎದುರಿನವರೂ ಇರಬೇಕು ಎಂದೇನಿಲ್ಲ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಕನಸುಗಳನ್ನು ನನಸಾಗಿಸಲು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. ಸಂಭಾಷಣೆಗಳು ನಿಮ್ಮ ಸಂಬಂಧದಲ್ಲಿ ಹೊಸ ಆಯಾಮಗಳನ್ನು ತೆರೆಯಬಹುದು. ಪ್ರಕೃತಿಯಲ್ಲಿ ದೀರ್ಘ ನಡಿಗೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವೃತ್ತಿಪರ ಉದ್ಯಮದ ಮೂಲಕ ನೀವು ಪ್ರಗತಿಯನ್ನು ಕಾಣಬಹುದು. ಆತ್ಮವಿಶ್ವಾಸ ಮತ್ತು ಚತುರತೆಯೊಂದಿಗೆ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹ ನಿಮ್ಮತ್ತ ತಿರುಗಿಸುವ ಶಕ್ತಿ ನಿಮಗಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಸಂಭವಿಸಬಹುದು. ಯಾವುದೇ ವಿಚಾರದಲ್ಲಿ ಒಂದು ಬಾಗಿಲು ಮುಚ್ಚಿತೆಂದು ಕೈಕಟ್ಟಿ ಕೂರಬೇಡಿ. ಬದಲಿಗೆ ಹೊಸ ದಾರಿಯನ್ನು ಹುಡುಕಿದರಷ್ಟೇ ನಿಮ್ಮ ಜೀವನದಲ್ಲಿ ಬೆಳಕನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News