ದಿನಭವಿಷ್ಯ : ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ:
ಇಂದಿನ ದಿನ ಮೇಷ ರಾಶಿಯವರ ಪರವಾಗಿರಲಿದೆ. ಇಂದು ವೃತ್ತಿಪರವಾಗಿ ಪರಿವರ್ತನೆಯನ್ನು ನಿರೀಕ್ಷಿಸಬಹುದು. ಜೀವನದಲ್ಲಿ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಆದರೂ, ಎಲ್ಲವನ್ನೂ ಮೆಟ್ಟಿ ನಿಂತು ಯಶಸ್ಸು ಗಳಿಸುವಿರಿ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ನ್ಯಾಯಾಲಯದ ಪ್ರಕರಣಗಳು ಇಂದು ನಿಮ್ಮ ಪರವಾಗಿ ಬರಲಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಶ್ರಮವಹಿಸಿ ಓದಬೇಕು. ವ್ಯಾಪಾರಸ್ಥರು ಹಣಕಾಸು ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ.
ಮಿಥುನ ರಾಶಿ:
ಮಿಥುನ ರಾಶಿಯವರು ದೀರ್ಘ ಸಮಯದ ಬಳಿಕ ಇಂದು ನೀವು ನಿಮ್ಮ ಆತ್ಮೀಯರನ್ನು ಭೇಟಿಯಾಗಬಹುದು. ಇದು ನಿಮಗೆ ಭಾವನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಬಲವನ್ನು ತುಂಬಲಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಈ ದಿನ ನಿಮ್ಮ ಕುಟುಂಬಸ್ಥರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ನಿಮ್ಮಲ್ಲಿರುವ ಸಂಪತ್ತನ್ನು ಕೂಡಿಡುವುದರ ಜೊತೆಗೆ ಅಗತ್ಯ ಇರುವವರಿಗೆ ಸಹಾಯ ಹಸ್ತವನ್ನು ಚಾಚುವುದನ್ನು ಪರಿಗಣಿಸಿ.
ಇದನ್ನೂ ಓದಿ- Astro Tips: ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಲಕ್ಷ್ಮಿ ಆಗಮನ, ಆರೋಗ್ಯಕ್ಕೂ ಒಳ್ಳೆಯದಲ್ಲ
ಸಿಂಹ ರಾಶಿ:
ಹೊಸ ಆಸ್ತಿ ಖರೀದಿಸಲು ಯೋಚಿಸುತ್ತಿರುವ ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೂ, ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಸಂಗ್ರಹಿಸಿ.
ಕನ್ಯಾ ರಾಶಿ:
ಕನ್ಯಾ ರಾಶಿಯವರೇ ಬದಲಾವಣೆ ಜಗದ ನಿಯಮ. ಇದಕ್ಕೆ ನೀವು ಹೊಂದಿಕೊಳ್ಳುವುದು ಬುದ್ದಿವಂತಿಕೆಯಾಗಿದೆ. ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಲು ಹಲವು ಅವಕಾಶಗಳಿದ್ದು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ.
ತುಲಾ ರಾಶಿ:
ತುಲಾ ರಾಶಿಯವರು ಇಂದು ಕೆಲವು ಮಾನಸಿಕ ಒತ್ತಡವನ್ನು ನಿಭಾಯಿಸಬೇಕಾಗಬಹುದು. ಆದಾಗ್ಯೂ, ಧೈರ್ಯದಿಂದ ಮುಂದುವರೆಯಿರಿ, ಜಯ ನಿಮ್ಮದೇ ಆಗಿರುತ್ತದೆ. ಮಕ್ಕಳಿಂದ ಶುಭ ಸುದ್ದಿ ಸ್ವೀಕರಿಸುವಿರಿ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ವೃತ್ತಿಪರ ದೃಷ್ಟಿಯಿಂದ ಇಂದು ಅತ್ಯುತ್ತಮ ದಿನ ಎಂದು ಸಾಬೀತುಪಡಿಸಲಿದೆ. ನಿಮ್ಮ ಕೆಲಸದ ವೈಕರಿಗೆ ಮೆಚ್ಚಿ ಮೇಲಾಧಿಕಾರಿಗಳು ಪ್ರಮೋಷನ್ ನೀಡಬಹುದು. ಆರೋಗ್ಯವೂ ಉತ್ತಮವಾಗಿರಲಿದೆ.
ಇದನ್ನೂ ಓದಿ- 2025ರವರೆಗೆ ಈ ರಾಶಿಗೆ ಸೋಲೆಂಬುದೇ ಇಲ್ಲ: ಅಪಾರ ಧನಸಂಪತ್ತಿನ ಜೊತೆ ಅದೃಷ್ಟ ಬೆಳಗಿ ಯಶಸ್ಸನ್ನೇ ನೀಡುವನು ಮಾಯಾವಿ ಕೇತು
ಧನು ರಾಶಿ:
ಧನು ರಾಶಿಯವರು ಇಂದು ಮನೆಯಿಂದ ಹೊರಡುವಾಗ ಹಿರಿಯರ ಆಶೀರ್ವಾದ ಪಡೆಯಿರಿ. ಇದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಲಾಭವಾಗಲಿದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಸ್ವಯಂ ಅನ್ವೇಷಣೆಗೆ ಇಂದು ಉತ್ತಮ ದಿನ. ಆದಾಗ್ಯೂ, ಕೆಲವು ಅನಿರೀಕ್ಷಿತ ಕೆಟ್ಟ ಸುದ್ದಿಗಳನ್ನು ಸ್ವೀಕರಿಸಬಹುದು. ಇಂದು ಯಾವುದೇ ರೀತಿಯ ಕಾನೂನು ವ್ಯವಹಾರಗಳಲ್ಲಿ ಮುಂದುವರೆಯುವಾಗ ಎಚ್ಚರಿಕೆ ಅಗತ್ಯ.
ಕುಂಭ ರಾಶಿ:
ನೀವು ದೀರ್ಘ ಕಾಲದಿಂದ ಪೂರ್ಣಗೊಳಿಸಲು ಇಚ್ಚಿಸುತ್ತಿದ್ದ ಕೆಲಸಗಳು ಇಂದು ಮುಗಿಯಲಿವೆ. ನೀವನದಲ್ಲಿ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತವಾಗಿದೆ.
ಮೀನ ರಾಶಿ:
ಮೀನ ರಾಶಿಯವರು ಈ ದಿನವನ್ನು ಹೊಸ ಆರಂಭವೆಂದು ಪರಿಗಣಿಸಿ. ನೀವು ಸಕಾರಾತ್ಮಕ ಚಿಂತನೆಗಳೊಂದಿಗೆ ಮುಂದುವರೆದರೆ ಸ್ವರ್ಗದಂತಹ ಜೀವನ ನಿಮ್ಮದಾಗಲಿದೆ. ಸಂಜೆ ವೇಳೆಗೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.