ದಿನಭವಿಷ್ಯ 05-06-2024: ಇಂದು ಸುಕರ್ಮ ಯೋಗ, ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ

Today Horoscope 05th June 2024: ಇಂದು ಸುಕರ್ಮ ಯೋಗದ ಫಲವಾಗಿ ಕೆಲವು ರಾಶಿಯ ಉದ್ಯೋಗಿಗಳಿಗೆ ಪ್ರಮೋಷನ್ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ದಿನ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 5, 2024, 07:47 AM IST
  • ಕರ್ಕಾಟಕ ರಾಶಿಯ ಉದ್ಯೋಗಸ್ಥರು ಉದ್ಯೋಗಸ್ಥರು ಕೆಲಸದಲ್ಲಿನ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸಿ.
  • ವೃಶ್ಚಿಕ ರಾಶಿಯವರಿಗೆ ಕಛೇರಿಯಲ್ಲಿ ಕೆಲಸಗಳು ಸುಗಮವಾಗಿ ನಡೆದರೆ ಬಡ್ತಿ ಸಿಗುವ ಸಂಭವವಿದೆ.
  • ಕುಂಭ ರಾಶಿಯವರಿಗೆ ಕಚೇರಿಯಲ್ಲಿ ನಿಮ್ಮ ದಕ್ಷತೆಯನ್ನು ಪ್ರಶಂಸಿಸಲಾಗುತ್ತದೆ.
ದಿನಭವಿಷ್ಯ 05-06-2024:  ಇಂದು ಸುಕರ್ಮ ಯೋಗ, ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ  title=

Budhvara Dina Bhavishya In Kannada: ವೈಶಾಖ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಬುಧವಾರದ ಈ ದಿನದಂದು ಕೃತಿಕಾ ನಕ್ಷತ್ರ, ಸುಕರ್ಮ ಯೋಗ ಯಾವ ರಾಶಿಯವರಿಗೆ ಏನು ಫಲ ನೀಡಲಿದೆ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯ ಜನರಿಗೆ ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ದಿನದ ಮೊದಲಾರ್ಧ ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಆದಾಗ್ಯೂ,  ಸುಕರ್ಮ ಯೋಗದ ಫಲವಾಗಿ ದಿನಾಂತ್ಯದ ವೇಳೆಗೆ ನಿಮ್ಮ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರಿಗೆ ಅಧಿಕೃತ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ದಿನವು ಸಾಮಾನ್ಯವಾಗಿರುತ್ತದೆ. ಉದ್ಯೋಗಸ್ಥರಿಗೂ ಅಪೇಕ್ಷಿತ ಯಶಸ್ಸು ಸಿಗದೇ ಇರಬಹುದು. ಉದ್ಯಮಿಗಳು ಹೊಸ ಕಂಪನಿಯಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಬೇಕಾಗಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರೇ ಹೆಚ್ಚು ಕೆಲಸ ಇದ್ದಾಗ ಕೋಪ ಮಾಡಿಕೊಳ್ಳಬೇಡಿ. ಬದಲಿಗೆ ಸಾಧ್ಯವಾದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಕೋಪ ಮತ್ತು ಸೋಮಾರಿತನದಿಂದಾಗಿ ಬರುವ ಲಾಭವನ್ನೂ ಕಳೆದುಕೊಳ್ಳಬಹುದು. ಮಕ್ಕಳ ನಡವಳಿಕೆಯಲ್ಲಿ ಕೆಲವು ನಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯ ಉದ್ಯೋಗಸ್ಥರು ಉದ್ಯೋಗಸ್ಥರು ಕೆಲಸದಲ್ಲಿನ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸಿ. ಎಲೆಕ್ಟ್ರಿಕಲ್ ವ್ಯಾಪಾರ ಮಾಡುವ ಜನರು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಂಭವವಿದೆ. 

ಇದನ್ನೂ ಓದಿ- Surya Nakshtra Gochar: ಶನಿ ಜಯಂತಿ ಬಳಿಕ ಸೂರ್ಯ ಸಂಚಾರ ಬದಲಾವಣೆ, ಈ ರಾಶಿಯವರಿಗೆ ಧನವೃಷ್ಟಿ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರು ಕೆಲಸದ ಸ್ಥಳದಲ್ಲಿ ಬಾಸ್‌ನ ಮಾರ್ಗದರ್ಶನವನ್ನು ಪಾಲಿಸಿ. ಅಧಿಕೃತವಾಗಿ ಸಂವಹನ ಮಾಡುವಾಗ ಉದ್ಯೋಗಿಗಳು ತಿಳುವಳಿಕೆಯನ್ನು ತೋರಿಸಬೇಕು. ವ್ಯಾಪಾರ ಸಂಬಂಧಿತ ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ನಿಮ್ಮ ಗಂಭೀರ ಮಾತುಗಳು ಪ್ರತಿಯೊಬ್ಬರಿಗೂ ನಿಮ್ಮ ಮೇಲೆ ಗೌರವವನ್ನು ಹುಟ್ಟಿಸುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯವಿರುವವರಿಗೆ ಸಹಾಯಮಾಡಿ. ನೇತ್ರ ಸಂಬಂಧಿ ಸಮಸ್ಯೆ ಇರುವವರು ಕಾನೀನ ತಪಾಸಣೆ ಮಾಡಿಸಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ಮತ್ತು ಮುಖ್ಯಸ್ಥರು ನೀಡಿದ ಕೆಲಸವನ್ನು ನೀವೇ ಮಾಡಿ. ಈ ಕೆಲಸಗಳನ್ನು ನಿಮ್ಮ ಸಹೋದ್ಯೋಗಿಗೆ ನೀಡುವುದರಿಂದ ತೊಂದರೆಯಾಗಬಹುದು. ವ್ಯಾಪಾರಸ್ಥರಿಗೆ ಶುಭ ದಿನ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯವರಿಗೆ ಕಛೇರಿಯಲ್ಲಿ ಕೆಲಸಗಳು ಸುಗಮವಾಗಿ ನಡೆದರೆ ಬಡ್ತಿ ಸಿಗುವ ಸಂಭವವಿದೆ. ನಿಮಗೆ ಈ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವಿದ್ದರೆ, ಆ ವಿವಾದದಲ್ಲಿ ನೀವು ಪರಿಹಾರವನ್ನು ಪಡೆಯಬಹುದು. 

ಇದನ್ನೂ ಓದಿ- Astro Tips: ನಿಮ್ಮ ಅಡುಗೆ ಮನೆಯಲ್ಲಿ ಇವು ಖಾಲಿಯಾದ್ರೆ ಬಡತನ ಬೆನ್ನಟ್ಟಿ ಬರುತ್ತದೆ..!

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರು ಉದ್ಯೋಗಸ್ಥರು ಕಚೇರಿಗೆ ಸಂಬಂಧಿಸಿದ ಯಾರೊಂದಿಗೂ ವಾದ ಮಾಡುವುದನ್ನು ತಪ್ಪಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಪೂರ್ವಿಕರ ವ್ಯಾಪಾರ ಮಾಡುವ ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುತ್ತಾರೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರು ಕಚೇರಿಯಲ್ಲಿ ಉತ್ತಮ ಕಾರ್ಯಕ್ಷಮತೆಯಿಂದಾಗಿ ನೀವು ಪ್ರಶಸ್ತಿಯನ್ನು ಪಡೆಯಬಹುದು. ಉದ್ಯೋಗಸ್ಥರು ಸಣ್ಣ ವಿಷಯಗಳಿಗೆ ಅಧೀನ ಅಧಿಕಾರಿಗಳ ಮೇಲೆ ಕೋಪಗೊಳ್ಳುವುದನ್ನು ತಪ್ಪಿಸಬೇಕು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರಿಗೆ ಕಚೇರಿಯಲ್ಲಿ ನಿಮ್ಮ ದಕ್ಷತೆಯನ್ನು ಪ್ರಶಂಸಿಸಲಾಗುತ್ತದೆ. ಜನರಿಂದ ಪ್ರಶಂಸೆ ಪಡೆದ ನಂತರ ಅಹಂಕಾರದಿಂದ ದೂರವಿರಬೇಕು. ಸಗಟು ಉದ್ಯಮಿಯ ಆದಾಯವು ಹೆಚ್ಚಾಗಬಹುದು. ವ್ಯಾಪಾರ ಪ್ರಯಾಣವನ್ನು ತಪ್ಪಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರಿಗೆ ಇಂದು ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಉದ್ಯಮಿಗಳು ಹಳೆಯ ಗ್ರಾಹಕರ ಮೂಲಕ ಹೊಸ ಆರ್ಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಕಟುವಾದ ಮಾತುಗಳನ್ನು ಆಡುವುದನ್ನು ತಪ್ಪಿಸಬೇಕು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News