Benefits of Burning Camphor : ಕರ್ಪೂರವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಇದು ಪರಿಮಳವನ್ನು ನೀಡುವುದಲ್ಲದೆ, ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಕರ್ಪೂರ ಎಂದರೆ ಧನಾತ್ಮಕತೆ, ಇದು ದೃಷ್ಟಿ ದೋಷವನ್ನೂ ದೂರ ಮಾಡುತ್ತದೆ. ಮನೆಯಲ್ಲಿ ಕರ್ಪೂರವನ್ನು ಉರಿಸುವುದು ದೇವರ ಗಮನ ಸೆಳೆಯುವಂತೆ ಮಾಡುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರಕ್ಕೆ ವಿಶೇಷ ಮಹತ್ವವಿದೆ. ದೇವತೆಗಳಿಗೆ ಕರ್ಪೂರದ ಆರತಿಯನ್ನು ನೀಡಿದ ನಂತರವೇ ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ. ಹವನ ಮತ್ತು ಹೋಮದಲ್ಲಿ ಕರ್ಪೂರವನ್ನು ಸಹ ಬಳಸಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಕೆಲವು ಲಾಭಗಳಿವೆ.
ವಾಸ್ತು ಪ್ರಕಾರ ಕರ್ಪೂರದ ಎಲೆಯನ್ನು ಮನೆಯಲ್ಲಿ ಸುಡುವುದರಿಂದ ಮನೆಯ ಗಾಳಿಯೂ ಶುದ್ಧವಾಗುತ್ತದೆ. ವಾಸ್ತು ಪ್ರಕಾರ, ಕರ್ಪೂರದ ಜೊತೆ ಲವಂಗವನ್ನು ರಾತ್ರಿ ಸುಡುವುದರಿಂದ ಮನೆಯಲ್ಲಿರುವ ಗಾಳಿ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ:ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಏಕೆ ಧರಿಸಬಾರದು ಗೊತ್ತೆ..? ತಪ್ಪದೇ ತಿಳಿಯಿರಿ
ಲವಂಗ ಮತ್ತು ಕರ್ಪೂರವನ್ನು ಮನೆಯಲ್ಲಿ ಸುಡುವುದರಿಂದ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರ್ಥಿಕ ಸಮಸ್ಯೆ ಇರುವವರು ಹಗಲು ಮತ್ತು ರಾತ್ರಿ ಕರ್ಪೂರವನ್ನು ಉರಿಸಬೇಕು. ಹಗಲು ಮತ್ತು ರಾತ್ರಿ ಐದು ಲವಂಗಗಳನ್ನು ಕರ್ಪೂರದ ಜೊತೆ ಸುಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಅಷ್ಟೇ ಅಲ್ಲ, ಮೆದುಳು ಮತ್ತು ದೇಹಕ್ಕೆ ನೆಮ್ಮದಿ ಸಿಗುತ್ತದೆ.
ಮನೆಯಲ್ಲಿ ಯಾವುದೇ ವಾಸ್ತು ದೋಷ ಕಂಡುಬಂದಲ್ಲಿ ಎರಡು ಲವಂಗದಿಂದ ಕರ್ಪೂರವನ್ನು ಸುಟ್ಟು ಹಾಕಿ. ಇದರಿಂದ ಶಾಂತಿ, ಆರ್ಥಿಕ ಸಮೃದ್ಧಿ ಬರುತ್ತದೆ. ವಾಸ್ತು ಪ್ರಕಾರ, ಬಿರಿಯಾನಿ ಎಲೆಯೊಂದಿಗೆ ಕರ್ಪೂರವನ್ನು ಸುಡುವುದರಿಂದಲೂ ಮನೆಯ ವಾತಾವರಣ ಸುಧಾರಿಸುತ್ತದೆ ಎಂದು ಹೇಳಾಗುತ್ತದೆ.
ಇದನ್ನೂ ಓದಿ:Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ
ಇದಲ್ಲದೆ, ಬಿರಿಯಾನಿ ಎಲೆಗಳೊಂದಿಗೆ ಕರ್ಪೂರವನ್ನು ಸುಡುವುದರಿಂದ ಮನೆಯ ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಕರ್ಪೂರವನ್ನು ಮನೆಯಲ್ಲಿ ಸುಡುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. (ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ