ನವದೆಹಲಿ: ರಕ್ತನಾಳಗಳಲ್ಲಿ ಸಂಗ್ರಹವಾಗುವ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ಆರೋಗ್ಯದ ದೊಡ್ಡ ಶತ್ರುವಾಗಿದೆ. ಇದು ಸ್ಥೂಲಕಾಯತೆಯನ್ನು ಹೆಚ್ಚಿಸುತ್ತದೆ, ನಂತರ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಅಂದರೆ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆ ಅಪಾಯವು ಉದ್ಭವಿಸಲು ಪ್ರಾರಂಭಿಸುತ್ತದೆ.
ಇದಕ್ಕಾಗಿಯೇ ನಾವು ನಮ್ಮನ್ನು ದೈಹಿಕವಾಗಿ ಸಕ್ರಿಯವಾಗಿರಿಸಿಕೊಳ್ಳುವುದು ಉತ್ತಮ. ಹೀಗಾಗಿ ನಮ್ಮ ದೈನಂದಿನ ಆಹಾರ ಅಭ್ಯಾಸಗಳಲ್ಲಿ ಬದಲಾವಣೆ ತರುವುದು ಬಹಳ ಮುಖ್ಯ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಯಸಿದರೆ ಕೆಲವು ಆಹಾರಗಳಿಂದ ದೂರವಿರುವುದು ಉತ್ತಮವೆಂದು ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳಿದ್ದಾರೆ.
ಇದನ್ನೂ ಓದಿ: Side Effects of Ginger: ಅತಿಯಾದ ಶುಂಠಿ ಟೀ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ
ಪೂರ್ಣ ಕೊಬ್ಬಿನ ಹಾಲಿನ ಉತ್ಪನ್ನ
ಹಾಲು ನಮಗೆ ಸಂಪೂರ್ಣ ಆಹಾರವಿದ್ದಂತೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದಕ್ಕೆ ಹೆಚ್ಚುವರಿ ಕೊಬ್ಬಿನ ಹಾಲು, ಕ್ರೀಮ್ ಮೊಸರು ಇವುಗಳಿಂದ ದೂರವಿರಬೇಕು. ಚೀಸ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಅಧಿಕವಾಗಿರುತ್ತದೆ. ಆದ್ದರಿಂದ ಇದನ್ನು ಹೆಚ್ಚು ಸೇವಿಸುವುದು ಅಪಾಯಕಾರಿ.
ಹೆಚ್ಚು ಮಾಂಸ ಸೇವನೆ ಅಪಾಯಕಾರಿ
ಕೆಂಪು ಮಾಂಸವನ್ನು ಸಾಮಾನ್ಯವಾಗಿ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಸೇವಿಸಲಾಗುತ್ತದೆ. ಆದರೆ ಇದರಲ್ಲಿ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಕೆಂಪು ಮಾಂಸವನ್ನು ಬೇಯಿಸಲು ಬಹಳಷ್ಟು ಎಣ್ಣೆ ಮತ್ತು ಮಸಾಲೆಗಳನ್ನು ಬಳಸಲಾಗುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ತುಂಬಾ ಹೆಚ್ಚಿಸುತ್ತದೆ.
ಇದನ್ನೂ ಓದಿ: Diabetes: ಅಡುಗೆಮನೆಯಲ್ಲಿರುವ ಈ ಮಸಾಲೆ ಮಧುಮೇಹಿಗಳ ಪಾಲಿನ ಸಂಜೀವಿನಿ.!
ಡೀಪ್ ಫ್ರೈಡ್ ಫುಡ್ಸ್
ಭಾರತೀಯ ಜನರು ಕರಿದ ಹುರಿದ ಆಹಾರವನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಆದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅದರಲ್ಲೂ ಮಾರುಕಟ್ಟೆಗಳಲ್ಲಿ ಸಿಗುವ ಕರಿದ ಪದಾರ್ಥಗಳು ಆರೋಗ್ಯವನ್ನು ಹಾಳುಮಾಡುತ್ತವೆ. ಫ್ರೆಂಚ್ ಫ್ರೈಸ್ ಮತ್ತು ಫ್ರೈಡ್ ಚಿಕನ್ ನಂತಹ ಆಹಾರ ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು.
ಸಕ್ಕರೆ
ಸಕ್ಕರೆಯನ್ನು ಬಿಳಿ ವಿಷ ಎನ್ನಲಾಗುತ್ತದೆ. ಆದರೆ ಇದರಿಂದ ತಯಾರಿಸಿದ ಸಿಹಿ ಆಹಾರಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತವೆ, ಆದರೆ ಇದು ನಮ್ಮ ಆರೋಗ್ಯದ ದೊಡ್ಡ ಶತ್ರುವಾಗಿದೆ. ಸಿಹಿ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು. ಏಕೆಂದರೆ ಇದು ಕೊಲೆಸ್ಟ್ರಾಲ್ ಹೆಚ್ಚಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.