ಈ ಐದು ವಿಷಯಗಳನ್ನು ಪ್ರತಿ ಪತ್ನಿ ತನ್ನ ಪತಿಯಿಂದ ಮುಚ್ಚಿಡುತ್ತಾಳೆಯಂತೆ!

ಪ್ರತಿಯೊಬ್ಬ ಪತ್ನಿ ಕೂಡಾ ತನ್ನ ಪತಿಯಿಂದ ಐದು ವಿಚಾರಗಳನ್ನು ಮುಚ್ಚಿಡುತ್ತಾಳೆಯಂತೆ.  ಏನೇ ಆದರೂ ಈ ಐದು ವಿಚಾರಗಳ ಬಗ್ಗೆ ತನ್ನ ಪತಿಯೊಂದಿಗೆ ಚರ್ಚಿಸುವುದಿಲ್ಲವಂತೆ. ಈ ಬಗ್ಗೆ ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. 

Written by - Ranjitha R K | Last Updated : Jul 27, 2023, 09:44 AM IST
  • ಸುಖಕರ ವೈವಾಹಿಕ ಜೀವನಕ್ಕೆ ಸೂತ್ರ
  • ಚಾಣಾಕ್ಯ ನೀತಿಯಲ್ಲಿ ಹೇಳಲಾದ ಕೆಲವು ಅಂಶ
  • ಪತ್ನಿ ಪತಿಯಿಂದ ಮುಚ್ಚಿಡುವ ಸಂಗತಿಗಳು
ಈ ಐದು ವಿಷಯಗಳನ್ನು ಪ್ರತಿ ಪತ್ನಿ ತನ್ನ ಪತಿಯಿಂದ ಮುಚ್ಚಿಡುತ್ತಾಳೆಯಂತೆ! title=

ಬೆಂಗಳೂರು : ವೈವಾಹಿಕ ಜೀವನ ಸುಖಕರವಾಗಿರಬೇಕು, ಸಂತೋಷಮಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ವೈವಾಹಿಕ ಜೀವನ ಸುಖಕರವಾಗಿರಬೇಕು ಎಂದಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿಯೇ ಮೊದಲನೆಯದ್ದು ನಂಬಿಕೆ. ಯಾವುದೇ ಸಂಬಂಧದ ತಳಪಾಯವೇ ನಂಬಿಕೆ. ಒಂದು ಸಲ ಸಂಬಂಧದಲ್ಲಿ ನಂಬಿಕೆ ಕಳೆದುಕೊಂಡರೆ ಮತ್ತೆ ಅದನ್ನು ಗಳಿಸುವುದು ಬಹಳ ಕಷ್ಟ. ಅದು ಕೂಡಾ ಪತಿ ಪತ್ನಿ ಮಧ್ಯೆ ನಂಬಿಕೆ ವಿಶ್ವಾಸ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. 

ಗಂಡ ಹೆಂಡತಿ ಜೀವನ ಹೇಗಿರಬೇಕು ಹೇಗಿರುತ್ತದೆ ಎನ್ನುವುದನ್ನು ಚಾಣಾಕ್ಯ ನೀತಿಯಲ್ಲಿ ವಿವರಿಸಿ ಹೇಳಲಾಗಿದೆ. ಇಲ್ಲಿ ಸುಖಕರ ದಾಂಪತ್ಯ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಕೆಲವು ಸೂತ್ರಗಳ ಬಗ್ಗೆ ಕೂಡಾ ತಿಳಿಸಿ ಹೇಳಲಾಗಿದೆ. ಇನ್ನು ಪ್ರತಿಯೊಬ್ಬ ಪತ್ನಿ ಕೂಡಾ ತನ್ನ ಪತಿಯಿಂದ ಐದು ವಿಚಾರಗಳನ್ನು ಮುಚ್ಚಿಡುತ್ತಾಳೆಯಂತೆ.  ಏನೇ ಆದರೂ ಈ ಐದು ವಿಚಾರಗಳ ಬಗ್ಗೆ ತನ್ನ ಪತಿಯೊಂದಿಗೆ ಚರ್ಚಿಸುವುದಿಲ್ಲವಂತೆ. ಈ ಬಗ್ಗೆ ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ : Surya Gochara: ವಾಶಿ ರಾಜಯೋಗದಿಂದ ಸೂರ್ಯನಂತೆ ಕಂಗೊಳಿಸಲಿದೆ ಮೂರು ರಾಶಿಯವರ ಭವಿಷ್ಯ

ರಹಸ್ಯ ಮೋಹ :  
ಹೆಚ್ಚಿನ ಮಹಿಳೆಯರು ಕೆಲವು ರಹಸ್ಯ ಮೋಹವನ್ನು ಹೊಂದಿರುತ್ತಾರೆ. ಆ ಮಹಿಳೆಯರು ತನ್ನ ಮನಸ್ಸಿನಲ್ಲಿ ಬೇರೆ ಯಾರನ್ನೋ ಇಷ್ಟಪಡುತ್ತಾಳೆ. ಈ ಬಗ್ಗೆ ಕೆಲವೊಮ್ಮೆ ತನ್ನ ಸ್ನೇಹಿತರೊಂದಿಗೆ ಚರ್ಚಿಸಿರುವ ಸಾಧಯ್ತೆ ಇರುತ್ತದೆ. ಆದರೆ ಈ ಬಗ್ಗೆ ತನ್ನ ಪತಿಯ ಜೊತೆ ಮಾತ್ರ ಮಾತಿಗಿಳಿಯುವುದಿಲ್ಲ. ಅಂದರೆ ಈ  ಸತ್ಯವನ್ನು ಪತಿಯಿಂದ ಮುಚ್ಚಿಟ್ಟಿರುತ್ತಾಳೆ.

ಗಂಡನ ನಿರ್ಧಾರಕ್ಕೆ ಒಪ್ಪಿಗೆ : 
ಅನೇಕ ಬಾರಿ ಮನೆಯಲ್ಲಿ ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಮನೆಯ ವಿಚಾರಕ್ಕೆ ಬಂದಾಗ ಗಂಡ ಮತ್ತು ಹೆಂಡತಿ ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಪದ್ಧತಿ. ಇಲ್ಲಿ  ಪತಿ ಮತ್ತು ಪತ್ನಿ ಇಬ್ಬರ ಒಪ್ಪಿಗೆ ಕೂಡಾ ಅಗತ್ಯ. ಆದರೆ ಕೆಲವೊಮ್ಮೆ ಗಣದನ ನಿರ್ಧಾರ ಹೆಂಡತಿಗೆ ಸರಿ ಕಾಣದೆ ಹೋಗಬಹುದು. ಆ ಸಂದರ್ಭದಲ್ಲಿ ಹೆಂಡತಿ ಅರೆ ಮನಸ್ಸಿನಿಂದಲೇ ಪತಿಯ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸುತ್ತಾರೆ. ಆದರೆ ಪತಿಯ ಮುಂದೆ ಮಾತ್ರ ತನಗೆ ಈ ನಿರ್ಧಾರ ಒಪ್ಪಿಗೆ ಎನ್ನುವ್ನತೆ ನಟಿಸುತ್ತಾಳೆ. 

ಇದನ್ನೂ ಓದಿ : Chaturgrahi Yoga: 21 ದಿನಗಳ ಬಳಿಕ ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ

ಪ್ರಣಯದ ಆಸೆ : 
ಸಾಮಾನ್ಯವಾಗಿ ಹೆಂಡತಿಯರು ಪ್ರಣಯದ ಆಸೆಗಳನ್ನು ಹೊಂದಿರುತ್ತಾರೆ.  ಆದರೆ ಈ ಬಗ್ಗೆ ಪತಿಗೆ ಹೇಳುವ ಬದಲು ಅದನ್ನು ಮುಚ್ಚಿಡುತ್ತಾರೆ. ಗಂಡನ ಮನಸ್ಸಿನ ಭಾವ ಅಥವಾ ಆಸೆಯ  ಪ್ರಕಾರವೇ ನಡೆದುಕೊಳ್ಳುತ್ತಾಳೆ. ತನ್ನ ಮನಸ್ಸಿನಲ್ಲಿ ಪ್ರಣಯದ ಬಲವಾದ ಆಸೆಗಳನ್ನು  ಪತಿಯ ಬಳಿ ಹೇಳದೆ ಮುಚ್ಚಿಕೊಳ್ಳುತ್ತಾಳೆ.  

ಹಣ ಕೂಡಿಡುವುದು :  
ಮನೆಯ ಹೆಂಡತಿಯನ್ನು ಮನೆಯಲಕ್ಷ್ಮೀ ಎಂದು ಕರೆಯುವುದನ್ನು ಕೇಳಿರಬೇಕು. ಹೆಂಡತಿಯರು ಉಳಿತಾಯದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಭವಿಷ್ಯದ ಅಗತ್ಯಕ್ಕಾಗಿ ಯಾರಿಗೂ ತಿಳಿಯದಂತೆ ಮುಖ್ಯವಾಗಿ ಗಂಡನಿಗೆ ತಿಳಿಯಂದಂತೆ ಹಣವನ್ನು ಕೂಡಿಡುತ್ತಾ ಬರುತ್ತಾರೆ.  

ಇದನ್ನೂ ಓದಿ : 13 ವರ್ಷಗಳ ಬಳಿಕ ಈ ರಾಶಿಗೆ ಒಲಿದ ಶ್ರೀಮಂತಿಕೆ ಭಾಗ್ಯ! ಸಂಪತ್ತಿನ ಮಳೆ-ಶುಕ್ರನಿಂದ ಹೆಚ್ಚಾಗುವುದು ಅದೃಷ್ಟ, ಸಂಪತ್ತು

ತಮ್ಮ ಕಾಯಿಲೆಗಳ ಬಗ್ಗೆ : 
ಪತಿ-ಪತ್ನಿಯರ ನಡುವೆ ಅನೇಕ ವಿಷಯಗಳು ನಡೆಯುತ್ತವೆ. ಆದರೆ ಆಗಾಗ್ಗೆ ಹೆಂಡತಿ ತನ್ನ ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಪತಿಗೆ ಹೇಳಲು ಸಾಧ್ಯವಾಗುವುದಿಲ್ಲ. ಮಹಿಳೆಯರು ತಮ್ಮ ದೇಹಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಹೊಂದಿರುತ್ತಾರೆ ಆದರೆ ಕೆಲವೊಮ್ಮೆ ಗಂಡನಿಗೆ ಈ ಬಗ್ಗೆ ತಿಳಿಸುವುದು ಸಾಧ್ಯವಾಗುವುದಿಲ್ಲ. 

( ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News