ಯಾವ ವ್ಯಕ್ತಿ ತನ್ನ ಮುಂದಿನ ಜನ್ಮದಲ್ಲಿ ಏನಾಗುತ್ತಾನೆ ಎಂಬುದು ಇದೇ ಜನ್ಮದಲ್ಲಿ ತಿಳಿಯಬೇಕೆ? ಈ ಲೇಖನ ಓದಿ!

Garud Puran: ಒಬ್ಬ ವ್ಯಕ್ತಿ ತಾನು ಈ ಜನ್ಮದಲ್ಲಿ ಮಾಡುವ ಕರ್ಮಗಳ ಆಧಾರದ ಮೇಲೆ ಸ್ವರ್ಗ ಅಥವಾ ನರಕದಲ್ಲಿ ಜಾಗ ಪಡೆಯುತ್ತಾನೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವ್ಯಕ್ತಿಯ ಈ ಜನ್ಮದ ಕರ್ಮಗಳು ಆತನ ಮುಂದಿನ ಜೀವನದಲ್ಲಿ ಅವನು ಯಾವ ರೂಪವನ್ನು ಪಡೆಯುತ್ತಾನೆ ಎಂಬುದನ್ನು ಸಹ ನಿರ್ಧರಿಸುತ್ತವೆ ಎನ್ನಲಾಗಿದೆ. Spiritual News In Kannada  

Written by - Nitin Tabib | Last Updated : Oct 10, 2023, 11:27 PM IST
  • ಗರ್ಭಪಾತ, ಸ್ತ್ರೀ ಹತ್ಯೆ ಇತ್ಯಾದಿ ಯಾವುದೇ ರೀತಿಯ ಪರೋಕ್ಷ ಕೊಲೆಯಲ್ಲಿ ನಿರತರಾಗಿರುವ ಜನರು ಭಿಲ್ಲಿ ರೋಗ,
  • ಬೆನ್ನುಬಾಕು ರೋಗಿಯಾಗಿ ಜನ್ಮ ಪಡೆಯುತ್ತಾರೆ. ಅಷ್ಟೇ ಅಲ್ಲ, ನರಕಯಾತನೆಗಳನ್ನು
  • ಅನುಭವಿಸುವ ಈ ಜನರು ಮುಂದಿನ ಜನ್ಮದಲ್ಲಿ ಚಂಡಾಲ್ ಯೋನಿಯಲ್ಲಿ ಜನಿಸುತ್ತಾರೆ.
ಯಾವ ವ್ಯಕ್ತಿ ತನ್ನ ಮುಂದಿನ ಜನ್ಮದಲ್ಲಿ ಏನಾಗುತ್ತಾನೆ ಎಂಬುದು ಇದೇ ಜನ್ಮದಲ್ಲಿ ತಿಳಿಯಬೇಕೆ? ಈ ಲೇಖನ ಓದಿ! title=

ಬೆಂಗಳೂರು: ಗರುಡ ಪುರಾಣದಲ್ಲಿ ವ್ಯಕ್ತಿಯ ಹುಟ್ಟಿನಿಂದ ಆತನ ಸಾವಿನವರೆಗೆ ಎಲ್ಲಾ ವಿಷಯಗಳ ಕುರಿತು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಕರ್ಮಗಳ ಆಧಾರದ ಮೇಲೆ ಸ್ವರ್ಗ ಅಥವಾ ನರಕದಲ್ಲಿ ಜಾಗಪಡೆಯುತ್ತಾನೆ ಎಂದು ಈ ಧಾರ್ಮಿಕ ಗ್ರಹ್ಥದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ವ್ಯಕ್ತಿಯ ಈ ಜನ್ಮದ ಕರ್ಮಗಳು ಆತನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎನ್ನಲಾಗಿದೆ. ಮುಂದಿನ ಜನ್ಮದ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ತಿಳಿದುಕೊಳ್ಳೋಣ ಬನ್ನಿ, Spiritual News In Kannada

ಗರುಡ ಪುರಾಣದ ಪ್ರಕಾರ ಮುಂದಿನ ಜನ್ಮವನ್ನು ಹೀಗೆ ನಿರ್ಧರಿಸಲಾಗುತ್ತದೆ?
>> ಗರುಡ ಪುರಾಣದ ಪ್ರಕಾರ ಯಾವುದೇ ಓರ್ವ ವ್ಯಕ್ತಿ ಹತ್ಯೆಗೈದು ತನ್ನ ಕುಟುಂಬವನ್ನು ಸಾಹಿಸುತ್ತಿದ್ದರೆ, ಕೊಳ್ಳೆ ಹೊಡೆಯುವ ಕೆಲಸದಲ್ಲಿ ನಿರತನಾಗಿದ್ದರೆ, ಪ್ರಾಣಿಗಳನ್ನು ಹತ್ಯೆಗೈಯುವ ಅಥವಾ ಬೇಟೆಯಾಡುವ ಕೆಲಸದಲ್ಲಿ ನಿರತನಾಗಿದ್ದಾರೆ, ಆತ ಮುಂದಿನ ಜನ್ಮದಲ್ಲಿ ಕಟುಕನ ಕೈಗೆ ಬಲಿಯಾಗುವ ಮೇಕೆಯಾಗಿ ಜನ್ಮತಾಳುತ್ತಾನೆ ಎನ್ನಲಾಗಿದೆ. 

>> ಧಾರ್ಮಿಕ ಗ್ರಂಥಗಳ ಪ್ರಕಾರ, ಸ್ತ್ರೀಯರನ್ನು ಶೋಷಣೆ ಮಾಡುವವರು ಅಥವಾ ಅವರನ್ನು ದುಡಿಸಿಕೊಳ್ಳುವವರು ಮುಂದಿನ ಜನ್ಮದಲ್ಲಿ ಯಾವುದಾದರೂ ಭಯಾನಕ ಕಾಯಿಲೆಗೆ ತುತ್ತಾಗುತ್ತಾರೆ. ಇದೇ ವೇಳೆ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವ್ಯಕ್ತಿಯು ಮುಂದಿನ ಜನ್ಮದಲ್ಲಿ ದುರ್ಬಲನಾಗುತ್ತಾನೆ. ಗುರುವಿನ ಪತ್ನಿಯೊಡನೆ ಅನುಚಿತವಾಗಿ ವರ್ತಿಸುವವನಿಗೆ ಮುಂದಿನ ಜನ್ಮದಲ್ಲಿ ಕುಷ್ಠರೋಗ ಬರುತ್ತದೆ ಎಂದು ಹೇಳಲಾಗಿದೆ.

>> ಈ ಜನ್ಮದಲ್ಲಿ ಪುರುಷನು ಮಹಿಳೆಯಂತೆ ವರ್ತಿಸಿದರೆ ಅಥವಾ ಮಹಿಳೆಯರ ಗುಣಧರ್ಮಗಳನ್ನು ಹೊಂದಿರುತ್ತಾರೆಯೋ ಅಂತಹವರು ಮುಂದಿನ ಜನ್ಮದಲ್ಲಿ ಹೆಣ್ಣಿನ ರೂಪ ಪಡೆಯುತ್ತಾರೆ.

>> ಗರ್ಭಪಾತ, ಸ್ತ್ರೀ ಹತ್ಯೆ ಇತ್ಯಾದಿ ಯಾವುದೇ ರೀತಿಯ ಪರೋಕ್ಷ ಕೊಲೆಯಲ್ಲಿ ನಿರತರಾಗಿರುವ ಜನರು ಭಿಲ್ಲಿ ರೋಗ, ಬೆನ್ನುಬಾಕು ರೋಗಿಯಾಗಿ ಜನ್ಮ ಪಡೆಯುತ್ತಾರೆ. ಅಷ್ಟೇ ಅಲ್ಲ, ನರಕಯಾತನೆಗಳನ್ನು ಅನುಭವಿಸುವ ಈ ಜನರು ಮುಂದಿನ ಜನ್ಮದಲ್ಲಿ ಚಂಡಾಲ್ ಯೋನಿಯಲ್ಲಿ ಜನಿಸುತ್ತಾರೆ.

>>  ಸಾಯುತ್ತಿರುವಾಗ ದೇವರ ಹೆಸರನ್ನು ತೆಗೆದುಕೊಳ್ಳುವ ವ್ಯಕ್ತಿ, ಮರಣದ ನಂತರ, ಮೋಕ್ಷದ ಹಾದಿಯಲ್ಲಿ ಮುಂದುವರಿಯುತ್ತಾನೆ. ಆದ್ದರಿಂದಲೇ ಧಾರ್ಮಿಕ ಗ್ರಂಥಗಳಲ್ಲಿ ಸಾವಿನ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ.

>> ಗರುಡ ಪುರಾಣದ ಪ್ರಕಾರ, ತಮ್ಮ ತಂದೆ-ತಾಯಿ ಮತ್ತು ಮಕ್ಕಳಿಗೆ ತೊಂದರೆ ನೀಡುವವರು ಮುಂದಿನ ಜನ್ಮವನ್ನು ತಳೆಯುತ್ತಾರೆ, ಆದರೆ ಈ ಜನರು ಜನ್ಮ ಪಡೆಯುವ ಮುನ್ನವೇ ಸಾವನ್ನಪ್ಪುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ-ಸೂರ್ಯ ಗ್ರಹಣದ ದಿನ ತ್ರಿಗ್ರಹಿ ಯೋಗ ನಿರ್ಮಾಣ, ತಾಯಿ ಭಗವತಿಯ ಕೃಪೆಯಿಂದ ಜನರಿಗೆ ಬಂಬಾಟ್ ಲಾಟರಿ ಭಾಗ್ಯ!

>> ಶಾಸ್ತ್ರಗಳ ಪ್ರಕಾರ ಗುರುವನ್ನು ನಿಂದಿಸುವವರಿಗೆ ಉಪ್ಪಿನಲ್ಲಿ ಸ್ಥಾನ ಸಿಗುತ್ತದೆ. ಗುರುವನ್ನು ಅವಮಾನಿಸುವುದು ಎಂದರೆ ದೇವರನ್ನು ಅವಮಾನಿಸಿದಂತೆ ಎಂದು ಹೇಳಲಾಗಿದೆ. ಇತಹವರು ನೀರಿಲ್ಲದೆ ಬ್ರಹ್ಮರಾಕ್ಷಸನ ಜನ್ಮವನ್ನು ಪಡೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ-ಅಕ್ಟೋಬರ್ 30 ರಿಂದ ಈ ಜನರ ಜೀವನದಲ್ಲಿ ಮತ್ತೆ ಧನಕುಬೇರ ಪರ್ವ ಆರಂಭ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಭಾರಿ ಧನವೃಷ್ಟಿ!

>> ಮೋಸ ಹಾಗೂ ವಂಚನೆಯಲ್ಲಿ ತೊಡಗಿದವರು ಮುಂದಿನ ಜನ್ಮದಲ್ಲಿ ಗೂಬೆಯಾಗಿ ಜನ್ಮ ಪಡೆಯುತ್ತಾರೆ ಎಂದು ವಂಚಕರ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಯಾರಿಗಾದರೂ ಸುಳ್ಳು ಸಾಕ್ಷ್ಯವನ್ನು ನೀಡುವ ಜನರು ಕುರುಡರ ಜನ್ಮವನ್ನು ತಳೆಯುತ್ತಾರೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News