ಬೆಂಗಳೂರು : ಜ್ಯೋತಿಷ್ಯದಲ್ಲಿ, ಗುರು ಬೃಹಸ್ಪತಿಯನ್ನು ದೇವ ಗುರು ಎಂದೇ ಕರೆಯಲಾಗುತ್ತದೆ. ಗುರುವು ಅದೃಷ್ಟ, ಮದುವೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಯಾರ ಜಾತಕದಲ್ಲಿ ಗುರುವು ಮಂಗಳಕರವಾಗಿರುತ್ತಾನೆಯೋ ಅವರ ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯುತ್ತದೆ. ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಕೊರತೆ ಇರುವುದೇ ಇಲ್ಲ. ದೇವಗುರು ಬೃಹಸ್ಪತಿ ಏಪ್ರಿಲ್ 22, 2023 ರಂದು, ರಾಶಿ ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಗುರುವಿನ ರಾಶಿ ಬದಲಾವಣೆಯಿಂದಾಗಿ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಗಜಲಕ್ಷ್ಮಿ ರಾಜಯೋಗದ ಕಾರಣ ಗುರು ಗ್ರಹ ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾರೆ.
ಆ ಅದೃಷ್ಟ ರಾಶಿಗಳು ಯಾವುವು ಎಂದರೆ :
ಮೇಷ ರಾಶಿ : ಗುರುವಿನ ಸಂಕ್ರಮಣದಿಂದ ಉಂಟಾಗುವ ಗಜಲಕ್ಷ್ಮಿ ರಾಜಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಇಲ್ಲಿ ಗುರುವು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ ಮೇಷ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುವ ಅವಕಾಶಗಳಿವೆ. ಉದ್ಯೋಗದಲ್ಲಿರುವವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಉದ್ಯಮಿಗಳಿಗೂ ಲಾಭವಾಗುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಳೆಯ ಎಲ್ಲಾ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತದೆ.
ಇದನ್ನೂ ಓದಿ : ಮಾಳವ್ಯ ರಾಜಯೋಗ ರೂಪಿಸುವ ಶುಕ್ರ ಹೊಸ ವರ್ಷದಲ್ಲಿ ಈ ಮೂರು ರಾಶಿಯವರ ಕಷ್ಟಗಳಿಗೆ ಹಾಕಲಿದ್ದಾನೆ ಪೂರ್ಣ ವಿರಾಮ.!
ಮಿಥುನ ರಾಶಿ : ಗುರುವಿನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಅಪಾಯಕಾರಿ ಹೂಡಿಕೆ ಕೂಡಾ ಈ ಸಮಯದಲ್ಲಿ ಲಾಭವಣು ತಂದು ಕೊಡಬಹುದು. ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಧನು ರಾಶಿ: ಗುರುವಿನ ಸಂಚಾರದಿಂದ ಧನು ರಾಶಿಯವರಿಗೆ ಹಠಾತ್ ಆರ್ಥಿಕ ಲಾಭವಾಗುತ್ತದೆ. ವಿಶೇಷವಾಗಿ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಉದ್ಯೋಗದಲ್ಲಿರುವವರಿಗೂ ಸಮಯ ಉತ್ತಮವಾಗಿರುತ್ತದೆ. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ಒಂಟಿಯಾಗಿದ್ದವರು ಜೋಡಿ ಯಾಗುವ ಕಾಲ ಹತ್ತಿರವಾಗಿದೆ. ಪತಿ-ಪತ್ನಿಯರ ನಡುವೆ ಪ್ರೀತಿಯೂ ಹೆಚ್ಚಾಗುತ್ತದೆ.
ಇದನ್ನೂ ಓದಿ : ಈ ದಿನ ಉಗುರು ಕತ್ತರಿಸಿದರೆ ಶುಭ ! ಆರ್ಥಿಕ ಸಂಕಷ್ಟದಿಂದ ಸಿಗುವುದು ಶಾಶ್ವತ ಮುಕ್ತಿ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
.ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.