ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕೂಡಿ ಬರುವುದು ಕಂಕಣ ಭಾಗ್ಯ.!

2023 ರಲ್ಲಿ, ಸಿಂಹ ರಾಶಿಯವರ ಭವಿಷ್ಯ ಹೇಗೆ ಎಂದು ತಿಳಿದುಕೊಳ್ಳುವುದಾದರೆ, ಜಾತಕದಲ್ಲಿನ ಗ್ರಹಗಳ ಸ್ಥಾನವು ಈ ರಾಶಿಯವರ ಜೀವನದಲ್ಲಿ ಅನೇಕ ಏರಿಳಿತಗಳಿಗೆ ಕಾರಣವಾಗಬಹುದು

Written by - Ranjitha R K | Last Updated : Dec 13, 2022, 02:24 PM IST
  • ಹೇಗಿರಲಿದೆ 2023 ರ ರಾಶಿ ಭವಿಷ್ಯ
  • ಸಿಂಹ ರಾಶಿಯವರ ಭವಿಷ್ಯ ಹೇಗಿರಲಿದೆ ?
  • ಕೂಡಿ ಬರುವುದು ವಿವಾಹ ಯೋಗ
ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕೂಡಿ ಬರುವುದು ಕಂಕಣ ಭಾಗ್ಯ.!  title=
Leo Horoscope 2023

ಬೆಂಗಳೂರು : ಹೊಸ ವರ್ಷ ಹತ್ತಿರವಾಗುತ್ತಿದ್ದಂತೆಯೇ ಹೊಸ ವರ್ಷದ ರಾಶಿ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ತವಕ ಬಹುತೇಕರಲ್ಲಿ ಇರುತ್ತದೆ. ಹೊಸ ವರ್ಷದಲ್ಲಿ ನಮ್ಮ ಜೀವನದಲ್ಲಿ ಘಟಿಸಬಹುದಾದ ಘಟನೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಶಿಕ್ಷಣ, ಉದ್ಯೋಗ, ವ್ಯವಹಾರ, ವೈವಾಹಿಕ  ಜೀವನ ಮದುವೆ  ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಉತ್ಸುಕರಾಗಿರುತ್ತಾರೆ. 2023 ರಲ್ಲಿ, ಸಿಂಹ ರಾಶಿಯವರ ಭವಿಷ್ಯ ಹೇಗೆ ಎಂದು ತಿಳಿದುಕೊಳ್ಳುವುದಾದರೆ, ಜಾತಕದಲ್ಲಿನ ಗ್ರಹಗಳ ಸ್ಥಾನವು ಈ ರಾಶಿಯವರ ಜೀವನದಲ್ಲಿ ಅನೇಕ ಏರಿಳಿತಗಳಿಗೆ ಕಾರಣವಾಗಬಹುದು. 

ಮುಂಬರುವ ವರ್ಷ ಅಂದರೆ 2023 ರಲ್ಲಿ ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುತ್ತದೆಯೇ ಅಥವಾ  ಬೇರೆಡೆ ವಾಲುತ್ತದೆಯೇ ? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವುದೇ?  ವಿದೇಶಕ್ಕೆ ಹೋಗುವ ಕನಸು ಈ ವರ್ಷವೇ ನನಸಾಗಲಿದೆಯೇ?   ಮದುವೆಯ ಮಾತುಕತೆ ಫಲ ನೀಡುವುದೇ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಸಿಗಲಿದೆ. 
 
ಇದನ್ನೂ ಓದಿ : Garuda Purana: ಯೋಗ್ಯ ಸಂತಾನ ಪಡೆಯುವ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?

2023 ರಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯ ಅವಕಾಶಗಳು  ಇವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.   ಬುದ್ಧಿವಂತಿಕೆ ಹೆಚ್ಚುತ್ತದೆ. ನೆನಪಿನ ಶಕ್ತಿ ಕೂಡಾ ಉತ್ತಮವಾಗಿರುತ್ತದೆ.  ಹೀಗಾಗಿ ನೀವು ಓದಿರುವುದನ್ನು ಸುಲಭವಾಗಿ ನೆನಪಿನಲ್ಲಿಟ್ಟು ಕೊಳ್ಳುವುದು ಸಾಧ್ಯವಾಗುತ್ತದೆ. ಮನಸ್ಸು ನಿಗೂಢ ವಿಷಯಗಳ ಕಡೆಗೆ ಹೆಚ್ಚು ಒಲವು ತೋರುತ್ತದೆ. ಆದರೂ ಕೂಡಾ ಅಧ್ಯಯನದ ಕಡೆಗೆ ಸಂಪೂರ್ಣ ಗಮನ ಹರಿಸುವುದು ಕೂಡಾ ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಉನ್ನತ ಶಿಕ್ಷಣ ಪಡೆಯುವವರಿಗೆ ಈ ವರ್ಷ ಏರಿಳಿತಗಳಿಂದ ಕೂಡಿರುತ್ತದೆ. 

ಸೆಪ್ಟಂಬರ್ ತಿಂಗಳಲ್ಲಿ ನಿಮ್ಮ ಮಾತಿನ ಮೇಲೆ ಗಮನ ಹರಿಸಬೇಕಾಗುತ್ತದೆ. ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದು ಒಳ್ಳೆಯದು. ನಿಮ್ಮ ಕಹಿ ಮಾತುಗಳಿಂದ ಕೆಲಸ ಕೆಡಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಅಕ್ಟೋಬರ್ ನಂತರವಷ್ಟೇ  ಉತ್ತಮ ಫಲಿತಾಂಶಗಳು ಬರಲು ಪ್ರಾರಂಭವಾಗುತ್ತದೆ. ಅಲ್ಲಿಯವರೆಗೆ ನೀವು ನಿಮ್ಮ ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ. ಇದಾದ ಮೇಲೆ ಮತ್ತೆ ಡಿಸೆಂಬರ್‌ನಲ್ಲಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. 

ಇದನ್ನೂ ಓದಿ : Adhik Masa 2023: 2023 ರ ವರ್ಷ 13 ತಿಂಗಳದ್ದಾಗಿರಲಿದೆ, 19 ವರ್ಷಗಳ ಬಳಿಕ ಅದ್ಭುತ ಕಾಕತಾಳೀಯ ನಿರ್ಮಾಣ

ಸಿಂಹ ರಾಶಿಯವರು 2023 ರಲ್ಲಿ ಪ್ರೇಮ ವ್ಯವಹಾರಗಳಲ್ಲಿ ಸಾಕಷ್ಟು ಯಶಸ್ಸನ್ನು ನಿರೀಕ್ಷಿಸಬಹುದು. ಆದರೆ ಮಾರ್ಚ್ ವರೆಗೆ ಪ್ರೀತಿ ಪ್ರೇಮ ವ್ಯವಹಾರಹಗಳಿಂದ ದೂರ ಉಳಿದರೆ ಒಳ್ಳೆಯದು. ಏಪ್ರಿಲ್ 22 ರ ನಂತರದ ಸಮಯವು ಪ್ರೀತಿಯ ವ್ಯವಹಾರಗಳಿಗೆ ಉತ್ತಮವಾಗಿರುತ್ತದೆ. ಅಕ್ಟೋಬರ್ 30 ರ ನಂತರ,  ವಿವಾಹ ಯೋಗ ಕೂಡಿ ಬರಲಿದೆ. ಪ್ರೀತಿಯಲ್ಲಿರುವವರಿಗೆ ಮದುವೆಯ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಒಪ್ಪಿಗೆಯೂ ಸಿಗುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News