ಅಡುಗೆ ಮನೆಯಲ್ಲಿ ʻಈʼ ವಸ್ತುಗಳನ್ನು 3 ವಸ್ತುಗಳನ್ನು ಸೂಕ್ತ ಸ್ಥಳದಲ್ಲಿಡಿ, ಇಲ್ಲವಾದಲ್ಲಿ ಅನರೋಗ್ಯ ಹಾಗೂ ಬಡತನ ನಿಮ್ಮನ್ನು ಕಾಡುತ್ತದೆ!

Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.

Written by - Zee Kannada News Desk | Last Updated : Sep 4, 2024, 08:59 AM IST
  • ಹಿಂದೂ ಧರ್ಮದಲ್ಲಿ, ಜನರು ತಮ್ಮ ಮನೆಗಳನ್ನು ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ವಾಸ್ತು ಪ್ರಕಾರ ಮನೆ ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
  • ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ.
  • ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ಮನೆಯ ಪೂರ್ವ-ದಕ್ಷಿಣ ದಿಕ್ಕಿನಲ್ಲಿ ಅಂದರೆ ಬೆಂಕಿಯ ಕೋನದಲ್ಲಿ ನಿರ್ಮಿಸಬೇಕು.
ಅಡುಗೆ ಮನೆಯಲ್ಲಿ ʻಈʼ ವಸ್ತುಗಳನ್ನು 3 ವಸ್ತುಗಳನ್ನು ಸೂಕ್ತ ಸ್ಥಳದಲ್ಲಿಡಿ, ಇಲ್ಲವಾದಲ್ಲಿ ಅನರೋಗ್ಯ ಹಾಗೂ ಬಡತನ ನಿಮ್ಮನ್ನು ಕಾಡುತ್ತದೆ! title=

Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.

ಹಿಂದೂ ಧರ್ಮದಲ್ಲಿ, ಜನರು ತಮ್ಮ ಮನೆಗಳನ್ನು ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ವಾಸ್ತು ಪ್ರಕಾರ ಮನೆ ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮುಖ್ಯವಾಗಿ ಒಂದು ಮನೆಯಲ್ಲಿ ಅಡುಗೆ ಮನೆಯ ವಾಸ್ತು ಬಹಳ ಮುಖ್ಯ, ಮನೆಯ ಸುಖ, ನೆಮ್ಮದಿ ಸಂಪತ್ತು ಇವೆಲ್ಲಾ ಸುದಾರಿಸಬೇಕಾದರೆ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ವಾಸ್ತು ಕೂಡ ಇದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಹಲವು ರೀತಿಯ ಸಮಸ್ಯೆಗಳು ಎಂದರೆ  ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ಮನೆಯ ಪೂರ್ವ-ದಕ್ಷಿಣ ದಿಕ್ಕಿನಲ್ಲಿ ಅಂದರೆ ಬೆಂಕಿಯ ಕೋನದಲ್ಲಿ ನಿರ್ಮಿಸಬೇಕು. ಈ ದಿಕ್ಕಿನಲ್ಲಿ ಅಡುಗೆಮನೆಯನ್ನು ನಿರ್ಮಿಸುವುದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಹಾಗೂ ಆಹಾರದ ಕೊರತೆ ಇರದಂತೆ ಕಷ್ಟಗಳನ್ನು ನೀಗಿಸುತ್ತದೆ. 

ದಕ್ಷಿಣಾಭಿಮುಖವಾಗಿ ರೊಟ್ಟಿಯನ್ನು ಮಾಡುವುದು ಯಾವುದೇ ಕಾರಣಕ್ಕೂ ಮಂಗಳಕರವಲ್ಲ, ದಕ್ಷಿಣಾಭಿಮುಖವಾಗಿ ಅಡುಗೆ ಮಾಡುವುದು ಸರಿಯಲ್ಲ, ಈ ದಿಕ್ಕನ್ನು ಯಮ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿಕ್ಕಿನಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಮನೆಯ ಆರ್ಥಿಕ ಸ್ಥಿತಿಯೂ ಹದಗೆಡಬಹುದು. ಸಾಮಾನ್ಯವಾಗಿ ಈ ದಿಕ್ಕನ್ನು ರಾಹುವಿನ ಸಂಕೇತವೆಂದು ನಂಬಲಾಗುತ್ತದೆ, ಈ ಪರಿಸ್ಥಿತಿಯಲ್ಲಿ ಶಾಸ್ತ್ರಗಳ ಪ್ರಕಾರ, ಒಲೆಯನ್ನು ಈ ದಿಕ್ಕಿನಲ್ಲಿ ಇರಿಸುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವವು ಹೆಚ್ಚಾಗುತ್ತದೆ, ಇದರಿಂದಾಗಿ ಮನೆಯಲ್ಲಿ ಪರಸ್ಪರ ಸಂಘರ್ಷದ ಸಾಧ್ಯತೆಯು ಹೆಚ್ಚಾಗುತ್ತದೆ.

ಇದನ್ನೂ ಓದಿ: ಮನೆ ಮುಖ್ಯ ದ್ವಾರದ ಎದುರು ಈ ವಸ್ತುಗಳನ್ನು ಇಡುವುದನ್ನು ಬಿಡಿ.. ಹೀಗೆ ಮಾಡುವುದರಿಂದ ಜಗಳ, ನಷ್ಟ, ಕಲಹಕ್ಕೆ ಇದೆ ಕೊನೆ!

ಒಲೆ ಮತ್ತು ಸಿಂಕ್ 
ಗ್ಯಾಸ್ ಸ್ಟೌವ್ ಮತ್ತು ಸಿಂಕ್ ಪರಸ್ಪರ ಹತ್ತಿರ ಇರಬಾರದು, ಏಕೆಂದರೆ ಒಂದೇ ಸ್ಥಳದಲ್ಲಿ ಬೆಂಕಿ ಮತ್ತು ನೀರು ಇರುವುದರಿಂದ ಇದು ಘರ್ಷಣೆಯ ಸಂಕೇತ. ಹೀಗೆ ಈ ಎರಡು ವಸ್ತುಗಳು ಅಡುಗೆ ಮನೆಯಲ್ಲಿ ಒಟ್ಟಿಗೆ ಇಡುವುದರಿಂದ ಕುಟುಂಬದ ಸದಸ್ಯರ ನಡುವೆ ಆಗಾಗ ಜಗಳಗಳು ನಡುತ್ತಿರುತ್ತವೆ.

ಅಡುಗೆ ಸಲಕರಣೆಗಳು
ಅಡುಗೆ ಮನೆಯೊಳಗಿನ ಎಲ್ಲಾ ವಸ್ತುಗಳು ಬೆಂಕಿಯನ್ನು ಪ್ರತಿನಿಧಿಸುತ್ತವೆ, ಆದ್ದರಿಂದ ಗ್ಯಾಸ್ ಸ್ಟೌವ್, ಸಿಲಿಂಡರ್, ಮೈಕ್ರೋವೇವ್ ಓವನ್ ಮತ್ತು ಟೋಸ್ಟರ್ ಮುಂತಾದ ಇತರ ಉಪಕರಣಗಳನ್ನು ಅಡುಗೆಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಈ ವಸ್ತುಗಳನ್ನು ಅಡುಗೆ ಮಾಡುವಾಗ ವ್ಯಕ್ತಿಯ ಮುಖವು ಪೂರ್ವಕ್ಕೆ ಇರುವ ರೀತಿಯಲ್ಲಿ ಇಡಬೇಕು.

ಇದನ್ನೂ ಓದಿ: ಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟ

ಅಡುಗೆ ಮನೆ ನಿರ್ಮಿಸುವಾಗ ಈ ಮುನ್ನೆಚ್ಚರಿಕೆಗಳನ್ನು ವಹಿಸಿ:
• ವಾಯುವ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸುವುದನ್ನು ತಪ್ಪಿಸಿ.

• ದಕ್ಷಿಣ ದಿಕ್ಕಿನಲ್ಲಿ ಗ್ಯಾಸ್ ಅಥವಾ ಒಲೆ ಇಡಬಾರದು.

• ಕಿಚನ್ ಸಿಂಕ್ ಅಡುಗೆ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಸಕಾರಾತ್ಮಕ ಪರಿಣಾಮಕ್ಕಾಗಿ, ಫ್ರಿಜ್ ಮತ್ತು ಶೇಖರಣಾ ಕಪಾಟುಗಳನ್ನು ದಕ್ಷಿಣ ಮತ್ತು ಪಶ್ಚಿಮ ಗೋಡೆಗಳ ಉದ್ದಕ್ಕೂ ಜೋಡಿಸಬೇಕು.

ಸೂಚನೆ:  ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News