ಪಂದಳ ಕಂದ ಅಯ್ಯಪ್ಪ ಸ್ವಾಮಿಯ ನಿಜವಾದ ಫೋಟೋ ಇದೆ..! ʼಸ್ವಾಮಿಯೇ ಶರಣಂ ಅಯ್ಯಪ್ಪʼ

Ayyappa swamy real photo:  ಅನಾಥ ರಕ್ಷಕ ಸೃಷ್ಟಿಯ ಅಣು ಅಣುವಿನಲ್ಲಿ ಇರುವುದಂತೂ ಖಂಡಿತ. ಕರ್ಪೂರ ಪ್ರಿಯ ಯಾವ ರೂಪದಲ್ಲಿದ್ದರೂ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ.. ಅಂತ ಕೂಗಿದರೆ ಪ್ರೀತಿಯಿಂದ ಓಡಿಬರುವ ಚಿನ್ಮಯ ರೂಪನ ನಿಜವಾದ ಫೋಟೋವನ್ನು ನೋಡಿ ಕಣ್ತುಂಬಿಕೊಳ್ಳಿ..

Written by - Krishna N K | Last Updated : Nov 29, 2023, 03:51 PM IST
  • ಕರ್ಪೂರ ಪ್ರಿಯ ಯಾವ ರೂಪದಲ್ಲಿದ್ದರೂ ಭಕ್ತರ ಕೂಗಿದೆ ಓಗೊಡುವ.
  • ಅನಾಥ ರಕ್ಷಕ ಸೃಷ್ಟಿಯ ಅಣು ಅಣುವಿನಲ್ಲಿ ಇರುವುದಂತೂ ಖಂಡಿತ.
  • ಚಿನ್ಮಯ ರೂಪನ ನಿಜವಾದ ಫೋಟೋವನ್ನು ನೋಡಿ ಕಣ್ತುಂಬಿಕೊಳ್ಳಿ..
ಪಂದಳ ಕಂದ ಅಯ್ಯಪ್ಪ ಸ್ವಾಮಿಯ ನಿಜವಾದ ಫೋಟೋ ಇದೆ..! ʼಸ್ವಾಮಿಯೇ ಶರಣಂ ಅಯ್ಯಪ್ಪʼ title=

Ayyappa Swamy photo : ಕಲಿಯುಗದ ಪ್ರತ್ಯಕ್ಷ ದೈವ ಅಯ್ಯಪ್ಪ ಸ್ವಾಮಿ ನಂಬಿದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡುವ ನಿಜ ದೈವ. ಇಂದು ವಿಳ್ಳಾಳಿ ವೀರನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪಂದಳ ಸಾಮ್ರಾಜ್ಯದಲ್ಲಿ ಉದಿಸಿದ ಹರಿ ಹರ ಪುತ್ರನ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಕಾರುಣ್ಯ ಮೂರ್ತಿ, ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿಯ ನಿಜವಾದ ಫೋಟೋವನ್ನು ನೀವು ಎಂದಾದರೂ ನೋಡಿದ್ದೀರಾ.. ಇಲ್ಲಿದೆ ನೋಡಿ..

ಹೌದು.. ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಅಯ್ಯಪ್ಪ ಸ್ವಾಮಿ ಕಲಿಯುಗದಲ್ಲಿ ಅಯ್ಯಪ್ಪ..... ಅಂತ ಬೇಡಿ ಬರುವ ಬಕ್ತರನ್ನು ಹರಸುವ ನಿಜ ದೈವ. ಶಬರಿ ಮಲೆ ಏರಿ ಕುಳಿತು ಭೂಮಂಡಲ ರಕ್ಷಿಸುವ ದೊರೆ ವೀರ ಮಣಿಕಂಠನನ್ನು ನಂಬಿ ಪಂಪಾನದಿ ದಾಟಿ, ಕಲ್ಲು ಮುಳ್ಳು ತುಳಿದು ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ಅಪಾರ. ಸೋಷಿಯಲ್‌ ಮೀಡಿಯಾದಲ್ಲಿ ಅಯ್ಯಪ್ಪ ಸ್ವಾಮಿಯ ಕುರಿತು ಅನೇಕ ಸುದ್ದಿಗಳು ಇದೀಗ ಕೇಳಿಬರುತ್ತಿವೆ ಅದಕ್ಕೆ ಕಾರಣ ಅಸಂಖ್ಯಾತ ಭಕ್ತರು ಮಾಲಾಧಾರಣೆ ಧರಿಸುತ್ತಿದ್ದಾರೆ.

ಇದನ್ನೂ ಓದಿ: ಏಕಾದಶಿ ಉಪವಾಸ ವೃತ  ಆಚರಿಸುವ ಮೊದಲು ಅದರ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳಿ

ಅಯ್ಯಪ್ಪ ಪವಿತ್ರ ಮಾಲೆಯನ್ನು ಧರಿಸಿ, ವೃತ ಆಚರಿಸಿ ವಿಲ್ಲಾಳಿವೀರನ ದರ್ಶನ ಮಾಡಲು ಭಕ್ತರು ಶಬರಿ ಮೇಲೆಗೆ ಹೋಗುತ್ತಾರೆ. ಪವಿತ್ರ ಮಕರ ಸಂಕ್ರಮಣದಂದು ಜ್ಯೋತಿ ದರ್ಶನವಾಗುತ್ತದೆ. ಅದಕ್ಕಾಗಿ ಒಂದು ಮಂಡಲ ವೀರ ಮಣಿಕಂಠನ ವೃತವನ್ನು ಆಚರಿಸಲಾಗುತ್ತದೆ. ಪ್ರಸ್ತುತ ಅಯ್ಯಪ್ಪ ಮಾಲಾಧಾರಣೆ ಸಮಯ. ಇದೇ ವೇಳೆ ಸೋಷಿಯಲ್‌ ಮೀಡಿಯಾದಲ್ಲಿ ಹರಿಹರ ಸುತನ ನಿಜವಾದ ಫೋಟೋ ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದ ಒಂದು ವೈರಲ್‌ ಆಗುತ್ತಿದೆ.

ಯಸ್‌.. ಈ ಫೋಟೋವನ್ನು ಸಾಕ್ಷಾತ್‌ ಅಯ್ಯಪ್ಪ ಸ್ವಾಮಿಯನ್ನು ಕುರಿಸಿ ಬಿಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ ಸೇರಿದಂತೆ ಎಲ್ಲೇಡೆ ಈ ಚಿತ್ರ ವೈರಲ್‌ ಆಗುತ್ತಿದ್ದು, ಜನ ಭಕ್ತಿ ಭಾವದಿಂದ ಹಂಚಿಕೊಳ್ಳುತ್ತಿದ್ದಾರೆ. ಈ ಭಾವಚಿತ್ರವನ್ನು ಪಂದಳದ ರಾಣಿ ಅಯ್ಯಪ್ಪನ ಭಕ್ತ, ಗಾಯಕ ವೀರಮಣಿ ರಾಜು ಅವರಿಗೆ ನೀಡಿದ್ದರಂತೆ.

ಇದನ್ನೂ ಓದಿ: Dev Uthani Ekadashi 2023: ದೇವುತನಿ ಏಕಾದಶಿ ಮಹತ್ವ & ಪೂಜೆಯ ವಿಧಿ-ವಿಧಾನ

ಒಟ್ಟಾರೆಯಾಗಿ ಅನಾಥ ರಕ್ಷಕ ಸೃಷ್ಟಿಯ ಅಣು ಅಣುವಿನಲ್ಲಿ ಇರುವುದಂತೂ ಖಂಡಿತ. ಕರ್ಪೂರ ಪ್ರಿಯ ಯಾವ ರೂಪದಲ್ಲಿದ್ದರೂ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ.. ಅಂತ ಕೂಗಿದರೆ ಪ್ರೀತಿಯಿಂದ ಓಡಿಬರುವ ಚಿನ್ಮಯ ರೂಪನಿಗೆ ಶಿರಸಾಷ್ಟಾಂಗ ನಮಸ್ಕಾರಗಳು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News