ಮಾರ್ಚ್ 15 ರಂದು ಮಹಾ ಗೋಚರ ! ಸೂರ್ಯನಂತೆ ಹೊಳೆಯುವುದು ಈ ರಾಶಿಯವರ ಅದೃಷ್ಟ

ಸೂರ್ಯನು ಒಂದು ರಾಶಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ಇರುತ್ತಾನೆ. ಸೂರ್ಯ ಸಂಕ್ರಮಿಸಿದಾಗಲೆಲ್ಲ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ರಾಶಿಯನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Mar 3, 2023, 03:30 PM IST
  • ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
  • ಕೇವಲ ಒಂದು ತಿಂಗಳು ಮಾತ್ರ ಸೂರ್ಯ ಅಲ್ಲಿ ಇರುತ್ತಾನೆ.
  • ಸೂರ್ಯ ಸಂಚಾರ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ
ಮಾರ್ಚ್ 15 ರಂದು ಮಹಾ ಗೋಚರ ! ಸೂರ್ಯನಂತೆ ಹೊಳೆಯುವುದು  ಈ ರಾಶಿಯವರ ಅದೃಷ್ಟ  title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯನು ಒಂದು ರಾಶಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ಇರುತ್ತಾನೆ. ಸೂರ್ಯ ಸಂಕ್ರಮಿಸಿದಾಗಲೆಲ್ಲ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ತಿಂಗಳು, ಮಾರ್ಚ್ 15 ರಂದು, ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯ ರಾಶಿಯನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ, ಮೀನ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹದ ಸಂಯೋಗವೂ ಇರುತ್ತದೆ.  

ಸೂರ್ಯನ ಸಂಚಾರ ಬೆಳಗುವುದು ಈ ರಾಶಿಯವರ ಅದೃಷ್ಟ : 
ವೃಷಭ ರಾಶಿ : ವೃಷಭ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಶುಭಕರವಾಗಿರುತ್ತದೆ. ಈ ರಾಶಿಯವರ ಆದಾಯದಲ್ಲಿ  ಹೆಚ್ಚಳವಾಗಲಿದೆ.  ಇರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. ಬಡ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.  

ಇದನ್ನೂ ಓದಿ : Shukra Gochar 2023: ಈ ರಾಶಿಯವರ ಮೇಲೆ ಬಿದ್ದಿದೆ ಶುಕ್ರನ ಕಣ್ಣು: ಭಾರೀ ಅಪರೂಪದ ಸರ್ಪೈಸ್ ಕಾದಿದೆ!

ಮಿಥುನ ರಾಶಿ : ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಉದ್ಯೋಗಕ್ಕಾಗಿ ನಡೆಸುತ್ತಿರುವ ಹುಡುಕಾಟವು ಪೂರ್ಣಗೊಳ್ಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಬಡ್ತಿ-ಮುಂಬಡ್ತಿ ದೊರೆಯಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. 

ಕರ್ಕಾಟಕ ರಾಶಿ : ಸೂರ್ಯನ ರಾಶಿಯಲ್ಲಿನ ಬದಲಾವಣೆ ಮತ್ತು ಸೂರ್ಯ ಮತ್ತು ಗುರುಗಳ ಸಂಯೋಗವು ಕರ್ಕಾಟಕ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.  ಇದರಿಂದಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ವೃತ್ತಿಜೀವನಕ್ಕೆ ಉತ್ತಮ ಸಮಯ. 

ಇದನ್ನೂ ಓದಿ : Saturn Transit 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಗೋಚರ, 7 ತಿಂಗಳು ಈ 5 ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News