ಬೆಂಗಳೂರು : ರಾಹು ಮತ್ತು ಕೇತು ಗ್ರಹಗಳ ಹೆಸರು ಕೇಳುವಾಗಲೇ ಜನ ಆತಂಕಗೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ರಾಹು ಕೇತು ಕಷ್ಟಗಳನ್ನು ನೀಡುವುದೇ ಹೆಚ್ಚು. ಈ ಕಾರಣದಿಂದ ಜಾತಕದಲ್ಲಿ ರಾಹು ಮತ್ತು ಕೇತು ಸ್ಥಾನ ಯಾವ ಸ್ಥಿತಿಯಲ್ಲಿದೆ ಎಂದು ನೋಡಲಾಗುತ್ತದೆ. ರಾಹು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುವ ಗ್ರಹ. ರಾಹು ಕೇವಲ ನಕಾರಾತ್ಮಕ ಫಲಿತಾಂಶಗಳನ್ನು ನೀಡುವ ಗ್ರಹ ಎನ್ನುವುದೇ ಸಾಮಾನ್ಯ ನಂಬಿಕೆ. ಆದರೆ ಎಲ್ಲಾ ಸಂದರ್ಭದಲ್ಲಿಯೂ ಹಾಗಾಗುವುದಿಲ್ಲ. ರಾಹು ಗ್ರಹ ಕೂಡಾ ಶುಭ ಫಲಗಳನ್ನು ನೀಡುತ್ತವೆ. ಯಾರ ಜಾತಕದಲ್ಲಿ ರಾಹು ಉತ್ಕೃಷ್ಟನಾಗಿರುತ್ತಾನೆಯೋ ಅವರು ಅಪಾರ ಜನಪ್ರಿಯತೆ ಗಳಿಸುವುದರೊಂದಿಗೆ, ಉನ್ನತ ಸ್ಥಾನಮಾನ ಮತ್ತು ಹಣವನ್ನು ಪಡೆಯುತ್ತಾರೆ. ರಾಹು ಮತ್ತು ಕೇತು ಗ್ರಹಗಳು ಒಂದೂವರೆ ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಿಸಲಿದ್ದಾನೆ. ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಹೊರ ಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ. ಆದರೆ 3 ರಾಶಿಯವರಿಗೆ ಮಾತ್ರ ಅಪಾರ ಸಂಪತ್ತು, ಉನ್ನತ ಸ್ಥಾನ ಮತ್ತು ಪ್ರತಿಷ್ಠೆಯನ್ನು ನೀಡುತ್ತದೆ.
ರಾಹು ಸಂಚಾರವು ಈ ರಾಶಿಯವರ ಅದೃಷ್ಟವನ್ನು ಬದಲಾಯಿಸುತ್ತದೆ :
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ರಾಹು ಸಂಕ್ರಮಣವು ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಇದ್ದಕ್ಕಿದ್ದಂತೆ ಹಣಕಾಸಿನ ಪ್ರಯೋಜನಗಳನ್ನು ಪಡೆಯಬಹುದು. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ಲಾಭವು ವೇಗವಾಗಿ ಹೆಚ್ಚಾಗುತ್ತದೆ. ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ.
ಇದನ್ನೂ ಓದಿ : ಶನಿಯ ರಾಶಿಯಲ್ಲಿ ಪ್ಲುಟೊ ಗ್ರಹ ಸಂಚಾರ: ಈ ರಾಶಿಯವರಿಗೆ ಧನ ವೃಷ್ಟಿ
ಮಕರ ರಾಶಿ : ರಾಹುವಿನ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರ ಧೈರ್ಯ ಮತ್ತು ಶೌರ್ಯವು ಹೆಚ್ಚುತ್ತಲೇ ಇರುತ್ತದೆ. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುತ್ತಾರೆ. ಕೆಲವು ದೊಡ್ಡ ಯಶಸ್ಸು ಅಥವಾ ಸಾಧನೆ ನಿಮ್ಮದಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಲಾಭ ದೊರೆಯಲಿದೆ. ನೀವು ಮಾಡುವ ಕೆಲಸಗಳಿಗೆ ನಿಮ್ಮ ಒಡಹುಟ್ಟಿದವರ ಸಹಕಾರವು ದೊಡ್ಡ ಮಟ್ಟದಲ್ಲಿಯೇ ಸಿಗುತ್ತದೆ. ಆಸ್ತಿ ಖರೀದಿಸುವ ಅವಕಾಶವಿದೆ.
ಕುಂಭ ರಾಶಿ : ಶನಿಯು ಪ್ರಸ್ತುತ ತನ್ನ ರಾಶಿಯಾದ ಕುಂಭದಲ್ಲಿದ್ದು ಮಾರ್ಚ್ 2025 ರವರೆಗೆ ಅಲ್ಲಿಯೇ ಇರಲಿದ್ದಾನೆ. ಶನಿ ಮತ್ತು ರಾಹು ಇಬ್ಬರೂ ಸ್ನೇಹಿ ಗ್ರಹಗಳು. ಈ ಕಾರಣದಿಂದಾಗಿ ರಾಹು ಸಂಚಾರವು ಕುಂಭ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ರಾಶಿಯವರು ಹಠಾತ್ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರಿಂದ ಕುಂಭ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಕಂಡು ಬರುತ್ತದೆ. ಉದ್ಯೋಗಿಗಳು ಹೊಸ ಕೆಲಸದ ಆಫರ್ ಪಡೆಯಬಹುದು.
ಇದನ್ನೂ ಓದಿ : Chandra Grahan 2023: ನಾಲ್ಕು ರಾಶಿಯವರಿಗೆ ತುಂಬಾ ಮಂಗಳಕರ ವರ್ಷದ ಮೊದಲ ಚಂದ್ರ ಗ್ರಹಣ
( ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.