Sankranti 2023: ಈ ವರ್ಷದ ಮಕರ ಸಂಕ್ರಾಂತಿ ಐದು ರಾಶಿಯವರಿಗೆ ತುಂಬಾ ಶುಭ

Sankranti 2023 Horoscope: ಈ ವರ್ಷ ಜನವರಿ 15 ಭಾನುವಾರದಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಗೂ ಒಂದು ದಿನ ಮೊದಲು ಅಂದರೆ ಜನವರಿ 14ರಂದು ಗ್ರಹಗಳ ರಾಜ ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೆ, ಈ ಬಾರಿಯ ಮಕರ ಸಂಕ್ರಾಂತಿ ಕೆಲವು ರಾಶಿಯವರಿಗೆ ತುಂಬಾ ವಿಶೇಷವಾಗಿದೆ. ಈ ವರ್ಷದ ಮಕರ ಸಂಕ್ರಾಂತಿಯಲ್ಲಿ ಐದು ರಾಶಿಯವರ ಅದೃಷ್ಟವು ಸೂರ್ಯನಂತೆ ಬೆಳಗಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Jan 12, 2023, 09:26 AM IST
  • ಸಂಕ್ರಾಂತಿ ಹಬ್ಬವು ಜ್ಯೋತಿಷ್ಯದ ದೃಷ್ಟಿಯಿಂದಲೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.
  • ಈ ವರ್ಷ ಜನವರಿ 14, 2023 ರಂದು ರಾತ್ರಿ ಸುಮಾರು 8 ಗಂಟೆಗೆ ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಈ ಸಮಯದಲ್ಲಿ ಐದು ರಾಶಿಯವರ ಅದೃಷ್ಟವು ಸೂರ್ಯನಂತೆಯೇ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.
Sankranti 2023: ಈ ವರ್ಷದ ಮಕರ ಸಂಕ್ರಾಂತಿ ಐದು ರಾಶಿಯವರಿಗೆ ತುಂಬಾ ಶುಭ  title=
Sankranti 2023 Horoscope

Sankranti 2023 Horoscope: ರೈತರ ಸುಗ್ಗಿ ಹಬ್ಬ ಸಂಕ್ರಾಂತಿ. ಈ ವರ್ಷ ಜನವರಿ 15, 2023 ರ ಭಾನುವಾರದಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬವು ಜ್ಯೋತಿಷ್ಯದ ದೃಷ್ಟಿಯಿಂದಲೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಗ್ರಹಗಳ ರಾಜನಾದ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ವರ್ಷ ಜನವರಿ 14, 2023 ರಂದು ರಾತ್ರಿ ಸುಮಾರು 8 ಗಂಟೆಗೆ ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೂ ಪ್ರಭಾವ ಬೀರಲಿದೆ. ಆದರೆ, ಈ ಸಮಯದಲ್ಲಿ ಐದು ರಾಶಿಯವರ ಅದೃಷ್ಟವು ಸೂರ್ಯನಂತೆಯೇ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...

ಮಕರ ಸಂಕ್ರಾಂತಿಯಲ್ಲಿ ಸೂರ್ಯನಂತೆ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ:
ಮೇಷ ರಾಶಿ:

ಸೂರ್ಯನ ಮಕರ ಸಂಕ್ರಮಣದ ಪರಿಣಾಮವಾಗಿ ಮೇಷ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸಮಯ ಇದಾಗಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆಯೂ ಇದೆ. 

ಸಿಂಹ ರಾಶಿ: 
ಈ ವರ್ಷದ ಮಕರ ಸಂಕ್ರಾಂತಿಯು ಸಿಂಹ ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದೆ. ಹೊಸ ಉದ್ಯೋಗಾವಕಾಶ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಪ್ರಗತಿ ಸಾಧ್ಯತೆ ಇದ್ದು ಭಾರೀ ಲಾಭ ಪಡೆಯಬಹುದಾಗಿದೆ. 

ಇದನ್ನೂ ಓದಿ- Ketu Sankramana 2023: ಈ 4 ರಾಶಿಯವರಿಗೆ ಕೇತುವಿನ ತೊಂದರೆಯಿಂದ ಪರಿಹಾರ, ಯಶಸ್ಸಿನ ಜೊತೆಗೆ ಧನಲಾಭ

ಕನ್ಯಾ ರಾಶಿ:
ಈ ವರ್ಷದ ಮಕರ ಸಂಕ್ರಾಂತಿಯಲ್ಲಿ ಕನ್ಯಾ ರಾಶಿಯವರ ಅದೃಷ್ಟವು ಸೂರ್ಯನಂತೆಯೇ ಉಜ್ವಲಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಈ ಸಮಯವು ಒಳ್ಳೆಯ ಫಲಗಳನ್ನು ನೀಡಲಿದೆ. ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:
ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣವು ಈ ರಾಶಿಯವರ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇದರಿಂದಾಗಿ ನೀವು ಯಾವುದೇ ಕೆಲಸಗಳಲ್ಲಿ ಯಶಸ್ಸಿನ ಶಿಖರವನ್ನು ಏರುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಇದನ್ನೂ ಓದಿ- Shani Gochar 2023: ಇನ್ನೊಂದು ವಾರದಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ನಿಮ್ಮ ಮೇಲೆ ಏನು ಪರಿಣಾಮ

ಮಕರ ರಾಶಿ:
ಮಕರ ರಾಶಿಯಲ್ಲಿಯೇ ಸೂರ್ಯನ ಸಂಕ್ರಮಣ ನಡೆಯಲಿದ್ದು ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳು ಲಭ್ಯವಾಗಲಿವೆ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕಾರ್ಯಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಇದಲ್ಲದೆ, ನಿಮ್ಮ ಆರೋಗ್ಯ ದೃಷ್ಟಿಯಿಂದಲೂ ಇದು ಉತ್ತಮ ಸಮಯ ಎಂದೇ ಹೇಳಬಹುದು. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News