ಶನಿ ಮತ್ತು ಗುರು ವಕ್ರಿ 2022 ರ ಪರಿಣಾಮ: ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿಯು ಪ್ರಸ್ತುತ ಮಕರ ರಾಶಿಯವಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅದೇ ಸಮಯದಲ್ಲಿ, ದೇವ ಗುರು ಎಂದು ಪರಿಗಣಿಸಲ್ಪಡುವ ಬೃಹಸ್ಪತಿ ಗುರು ಕೂಡ ಹಿಮ್ಮುಖವಾಗಿ ಚಲಿಸುತ್ತಿದ್ದಾರೆ. ಶನಿಯು 23 ಅಕ್ಟೋಬರ್ 2022 ರವರೆಗೆ ಇದೇ ಸ್ಥಿತಿಯಲ್ಲಿದ್ದರೆ, ಗುರು ಗ್ರಹವು 23 ನವೆಂಬರ್ 2022 ರವರೆಗೆ ಹಿಮ್ಮುಖವಾಗಿ ಚಲಿಸುತ್ತದೆ. ಇದರ ಗಮನಾರ್ಹ ಪರಿಣಾಮವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಕಂಡು ಬರುತ್ತದೆ.
ಶನಿ ಮತ್ತು ಗುರು ಗ್ರಹಗಳ ಹಿಮ್ಮುಖ ಚಲನೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ತುಂಬಾ ಒಳ್ಳೆಯ ಫಲಗಳನ್ನು ನೀಡುತ್ತದೆ. ಇನ್ನೂ ಕೆಲವರಿಗೆ ಈ ಸಮಯವು ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ.
ಜ್ಯೋತಿಷ್ಯದ ಪ್ರಕಾರ ಮೇಷ, ವೃಷಭ, ಮಿಥುನ, ಕರ್ಕಾಟಕ, ತುಲಾ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿ-ಗುರುವಿನ ಹಿಮ್ಮುಖ ಸಂಚಾರವು ಮಂಗಳಕರ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ- Rahu and Mangal Yuti Yog: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ
ದ್ವಾದಶ ರಾಶಿಗಳ ಮೇಲೆ ಶನಿ ಮತ್ತು ಗುರು ಹಿಮ್ಮುಖ ಚಲನೆಯ ಪರಿಣಾಮ:
ಮೇಷ ರಾಶಿ:
ಶನಿ ಮತ್ತು ಗುರು ಹಿಮ್ಮುಖ ಚಲನೆಯ ಪರಿಣಾಮವಾಗಿ ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ.
ವೃಷಭ ರಾಶಿ:
ಶನಿ- ಗುರು ವಕ್ರಿ ಚಲನೆಯಿಂದ ನಿಮಗೆ ಹೊಸ ಕೆಲಸ ಸಿಗಲಿದೆ. ವಿವಾಹವಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹಣವು ಪ್ರಯೋಜನಕಾರಿಯಾಗಲಿದೆ.
ಮಿಥುನ ರಾಶಿ:
ಶನಿ ಮತ್ತು ಗುರು ಗ್ರಹಗಳ ಹಿಮ್ಮುಖ ಚಲನೆಯ ಪ್ರಭಾವದಿಂದಾಗಿ ನಿಮಗೆ ಉದ್ಯೋಗದಲ್ಲಿ ಸ್ಥಳ ಬದಲಾವಣೆ ಸಾಧ್ಯತೆ ಇದೆ. ಆರ್ಥಿಕ ಮೂಲಗಳು ಹೆಚ್ಚಲಿವೆ.
ಕರ್ಕ ರಾಶಿ:
ಶನಿ ಮತ್ತು ಗುರು ಗ್ರಹಗಳ ವಕ್ರಿ ಚಲನೆಯು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಂದರ್ಭದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ.
ಸಿಂಹ ರಾಶಿ:
ಈ ಸಮಯದಲ್ಲಿ ಸಿಂಹ ರಾಶಿಯ ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಇದಲ್ಲದೆ, ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರು ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಒತ್ತಡದ ಜೀವನಶೈಲಿಯ ನಡುವೆಯೂ ನಿಮ್ಮ ಕುಟುಂಬಕ್ಕೆ ಸಮಯ ನೀಡಿ.
ತುಲಾ ರಾಶಿ:
ಈ ಸಮಯವು ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಅದೃಷ್ಟದ ಸಮಯವಾಗಿದೆ. ನೀವು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಮಕ್ಕಳಾಗದ ದಂಪತಿಗಳಿಗೆ ಸಂತಾನ ಪ್ರಾಪ್ತಿ ಯೋಗವಿದೆ.
ಇದನ್ನೂ ಓದಿ- ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ
ವೃಶ್ಚಿಕ ರಾಶಿ:
ಶನಿ ಮತ್ತು ಗುರು ಗ್ರಹಗಳ ಹಿಮ್ಮುಖ ಚಲನೆಯ ಪರಿಣಾಮವಾಗಿ ನಿಮಗೆ ಸ್ಥಳ ಬದಲಾವಣೆ ಆಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದ್ದು ಆಸ್ತಿ ಖರೀದಿಸುವ ಯೋಗವೂ ಇದೆ.
ಧನು ರಾಶಿ:
ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಾಧಿಸುವರು. ಸಮಾಜದಲ್ಲಿ ನಿಮ್ಮ ಗೌರವ- ಪ್ರತಿಷ್ಠೆ ಕೂಡ ಹೆಚ್ಚಲಿದೆ.
ಮಕರ ರಾಶಿ:
ಶನಿ ಮತ್ತು ಗುರು ಗ್ರಹಗಳ ವಕ್ರಿ ಚಲನೆಯಿಂದಾಗಿ ಮಕರ ರಾಶಿಯವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಕುಂಭ ರಾಶಿ:
ಶನಿ ಮತ್ತು ಗುರು ಗ್ರಹಗಳ ಹಿಮ್ಮುಖ ಚಲನೆಯ ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ತಾಳ್ಮೆಯಿಂದ ಕಳೆಯಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಒತ್ತಡವನ್ನು ತಪ್ಪಿಸಿ.
ಮೀನ ರಾಶಿ:
ಶನಿ ಮತ್ತು ಗುರು ಗ್ರಹಗಳ ಹಿಮ್ಮುಖ ಚಲನೆಯ ಈ ಸಮಯದಲ್ಲಿ ಸಣ್ಣ-ಪುಟ್ಟ ವಿಷಯಗಳಿಗೂ ಉದ್ವೇಗ ಹೆಚ್ಚಾಗಲಿದೆ. ಸದಾ ಒಂದಿಲ್ಲೊಂದು ಚಿಂತೆ ನಿಮ್ಮನ್ನು ಕಾಡುತ್ತದೆ. ಆದರೂ, ಅನಾವಶ್ಯಕ ಚಿಂತೆಯನ್ನು ತಪ್ಪಿಸುವುದು ಒಳಿತು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.